15 ದಿನದೊಳಗೆ ವಸತಿ ಯೋಜನೆ ಅನುಷ್ಠಾನಕ್ಕೆ  ಅಗತ್ಯವಿರುವ ಪೂರ್ಣ ವಿವರÀ ನೀಡಲು ಸೂಚನೆ
ಚಾಮರಾಜನಗರ

15 ದಿನದೊಳಗೆ ವಸತಿ ಯೋಜನೆ ಅನುಷ್ಠಾನಕ್ಕೆ ಅಗತ್ಯವಿರುವ ಪೂರ್ಣ ವಿವರÀ ನೀಡಲು ಸೂಚನೆ

August 26, 2021

ಚಾಮರಾಜನಗರ, ಆ.25- ಜಿಲ್ಲೆಯನ್ನು ಗುಡಿಸಲು ರಹಿತವನ್ನಾಗಿಸಲು ಆದ್ಯತೆ ನೀಡಬೇಕಿದ್ದು, ವಸತಿ ಅಗತ್ಯವಿರುವ ಕುಟುಂಬ ಗಳು ಹಾಗೂ ವಸತಿ ಯೋಜನೆ ಅನು ಷ್ಠಾನಕ್ಕೆ ಅಗತ್ಯವಿರುವ ಸಂಪೂರ್ಣ ವಿವರ ಗಳನ್ನು 15 ದಿನಗಳೊಳಗೆ ಸಲ್ಲಿಸಬೇಕು ಎಂದು ವಸತಿ ಹಾಗೂ ಮೂಲ ಸೌಲಭ್ಯ ಅಭಿ ವೃದ್ಧಿ ಸಚಿವ ವಿ.ಸೋಮಣ್ಣ ಸೂಚಿಸಿದರು.

ನಗರದ ಸರ್ಕಾರಿ ಅತಿಥಿ ಗೃಹದ ಸಭಾಂಗಣದಲ್ಲಿ ಬುಧವಾರ ಜಿಲ್ಲೆಯ ವಸತಿ ಯೋಜನೆಗಳ ಕುರಿತು ಅಧಿಕಾರಿ ಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಗೆ ಬರುವ 5 ತಾಲೂಕುಗಳಲ್ಲಿ ವಸತಿಗಾಗಿ ಎಷ್ಟು ಜನ ಅರ್ಹ ಫಲಾನುಭವಿಗಳು ಇದ್ದಾರೆ? ಎಷ್ಟು ಮಂದಿ ಬಳಿ ನಿವೇಶನ ಇದೆ? ಯಾವ ಪಂಚಾಯಿತಿಯಲ್ಲಿ ಸರ್ಕಾರಿ ಭೂಮಿ ಲಭ್ಯವಿದೆ? ಎಷ್ಟು ಫಲಾನುಭವಿ ಗಳಿಗೆ ಮನೆ ಒದಗಿಸಬಹುದು ಎಂಬ ವಿವರಗಳು ಇನ್ನಿತರ ಮಾಹಿತಿಯನ್ನೊಳ ಗೊಂಡ ಪಟ್ಟಿಯನ್ನು ಸಂಬಂಧಪಟ್ಟ ಅಧಿಕಾರಿಗಳು 15 ದಿನಗಳೊಳಗೆ ನೀಡ ಬೇಕು ಎಂದು ನಿರ್ದೇಶನ ನೀಡಿದರು.

ಜಿಲ್ಲೆಯನ್ನು ಗುಡಿಸಲು ರಹಿತವನ್ನಾಗಿಸಲು ಆದ್ಯತೆ ನೀಡಲಾಗುತ್ತದೆ. ನಗರ, ಗ್ರಾಮಾಂತರ ಪ್ರದೇಶಗಳು, ಅಲೆಮಾರಿಗಳು, ಅರೆ ಅಲೆ ಮಾರಿಗಳು, ಹಾಡಿಗಳು ಇನ್ನಿತರ ಸಮು ದಾಯಗಳ ಜನರಿಗೆ ವಸತಿ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಬೇಕು ಎಂದರು.

ಯೋಜನೆ ಅನುಷ್ಠಾನ ಸಂಬಂಧ ಪ್ರತ್ಯೇಕ ಮಾರ್ಗಸೂಚಿಗಳನ್ನು ಹೊರಡಿಸಲಾಗು ತ್ತದೆ. ಆದರೆ ಅಲ್ಲಿಯವರೆಗೂ ಕಾಯದೇ ವಸತಿ ಹಾಗೂ ಮೂಲ ಸೌಕರ್ಯ ಒದಗಿ ಸುವ ಉದ್ದೇಶದಿಂದ ಈಗಾಗಲೇ ಸೂಚಿಸಿರು ವಂತೆ ಜಿಲ್ಲೆಯ ವಿವರವನ್ನು ನೀಡಬೇಕು ಎಂದು ಸಚಿವರು ಸೂಚಿಸಿದರು.
ಸಭೆಯಲ್ಲಿ ಶಾಸಕ ಸಿ.ಎಸ್.ನಿರಂಜನ್ ಕುಮಾರ್, ನಗರಸಭೆ ಅಧ್ಯಕ್ಷೆ ಆಶಾ ನಟರಾಜು, ಉಪಾಧ್ಯಕ್ಷೆ ಸುಧಾ, ಜಿಪಂ ಸಿಇಓ ಹರ್ಷಲ್ ಬೋಯರ್ ನಾರಾಯಣ ರಾವ್, ಎಡಿಸಿ ಎಸ್.ಕಾತ್ಯಾಯಿನಿದೇವಿ, ಎಎಸ್‍ಪಿ ಕೆ.ಎಸ್. ಸುಂದರ್‍ರಾಜ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಕೆ. ಸುರೇಶ್ ಇತರೆ ಅಧಿಕಾರಿಗಳು ಹಾಜರಿದ್ದರು.

Translate »