ಪ್ರಯಾಣಿಕರು ಕಡಿಮೆ ಇರುವ ‘ದೂರದ ಬಸ್’ ಟ್ರಿಪ್ ರದ್ದು
News

ಪ್ರಯಾಣಿಕರು ಕಡಿಮೆ ಇರುವ ‘ದೂರದ ಬಸ್’ ಟ್ರಿಪ್ ರದ್ದು

August 25, 2021

ಬೆಂಗಳೂರು,ಆ.24(ಕೆಎಂಶಿ)- ದೂರದ ಊರುಗಳಿಗೆ ಪ್ರಯಾಣಿಕರ ಕೊರತೆ ಎದು ರಾದರೆ ಆ ವೇಳೆಯ ಟ್ರಿಪ್ ರದ್ದು ಮಾಡಲು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮಹತ್ವದ ನಿರ್ಧಾರ ಕೈಗೊಂಡಿದೆ.

ಸತತ ಡೀಸೆಲ್ ಬೆಲೆ ಏರಿಕೆಯಿಂದಾಗಿ ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೆ ಒಟ್ಟಾರೆ 1121 ಕೋಟಿ ರೂ. ನಷ್ಟವಾಗಿದೆ. ಪ್ರಯಾಣಿಕರಿಗೆ ಹೊರೆಯಾಗದ ರೀತಿಯಲ್ಲಿ ವಿವಿಧ ಮಾರ್ಗ ಗಳಲ್ಲಿ ಸಂಪನ್ಮೂಲ ಕ್ರೂಢೀಕರಣ ಮತ್ತು ಉಳಿತಾಯದ ದೃಷ್ಟಿಯಿಂದ ಇಂತಹ ಕೆಲವು ಕಠಿಣ ತೀರ್ಮಾನ ಕೈಗೊಳ್ಳಲಾಗಿದೆ.

ಸಾರಿಗೆ ಇಲಾಖೆ ವಹಿಸಿಕೊಂಡ ನಂತರ ಇಂದು ಮೊದಲ ಬಾರಿಗೆ ಇಲಾಖೆ ಅಧಿ ಕಾರಿಗಳ ಜೊತೆ ಉನ್ನತ ಮಟ್ಟದ ಸಭೆ ನಡೆಸಿದ ಶ್ರೀರಾಮುಲು, ಈ ನಿರ್ಧಾರಕ್ಕೆ ಬಂದಿದ್ದಾರೆ. ಒಂದೇ ಊರಿಗೆ ಅಲ್ಪ ಸಮಯ ದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಸ್‍ಗಳು ಸಂಚಾರ ಕೈಗೊಳ್ಳುತ್ತಿದ್ದರೆ, ಇಂತಹ ಸಂದರ್ಭಗಳಲ್ಲಿ ಕಡಿಮೆ ಪ್ರಯಾಣಿಕ ರಿರುವ ಬಸ್‍ನ ಸಂಚಾರ ರದ್ದುಪಡಿಸಿ, ಒಂದೇ ಬಸ್‍ನಲ್ಲಿ ಎರಡೂ ಬಸ್ ಪ್ರಯಾಣಿಕರು ಪ್ರಯಾಣಿಸುವಂತೆ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ.

ಸಭೆ ನಂತರ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ದೂರದ ಊರುಗಳಿಗೆ ಹಲವು ಸಂದರ್ಭಗಳಲ್ಲಿ ಖಾಲಿ ಬಸ್‍ಗಳು ಸಂಚಾರ ನಡೆಸುತ್ತಿರುವುದರಿಂದ ಸಂಸ್ಥೆಗೆ ದೊಡ್ಡ ಪ್ರಮಾಣದಲ್ಲಿ ನಷ್ಟ ಉಂಟಾಗುತ್ತಿದೆ ಎಂದರು. ಸೇವೆ ಜೊತೆಯಲ್ಲಿ ಸಾರಿಗೆ ಸಂಸ್ಥೆಗಳನ್ನು ಲಾಭದಾಯಕ ಮಾಡ ಬೇಕು, ಪ್ರಯಾಣಿಕರ ಮೇಲೆ ಹೊರೆ ಯಾಗದಂತೆ ನಷ್ಟ ಸರಿದೂಗಿಸಿ ಉದ್ಯಮ ವನ್ನು ಲಾಭದ ಮಾರ್ಗಕ್ಕೆ ತರಬೇಕು, ಈ ದಿಸೆಯಲ್ಲಿ ಮಾರ್ಗೋಪಾಯಗಳನ್ನು ಕಂಡುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿ ಸಿರುವುದಾಗಿ ತಿಳಿಸಿದರು.

ಆದಾಯ ಸೋರಿಕೆ ತಡೆಗೂ ಟಾಸ್ಕ್ ಫೋರ್ಸ್ ರಚಿಸಲು ತೀರ್ಮಾನಿಸಲಾ ಗಿದೆ. ಇನ್ನು ಮುಂದೆ ಡೀಸೆಲ್ ಅವಲಂಬನೆ ಕಡಿಮೆ ಮಾಡಲು ಎಲೆಕ್ಟ್ರಿಕ್ ಬಸ್‍ಗಳನ್ನು ಹೆಚ್ಚು ರಸ್ತೆಗಿಳಿಸಲು ನಿರ್ಧರಿಸಲಾಗಿದೆ. ಆಧುನಿಕ ತಾಂತ್ರಿಕತೆ ಬಳಸಿ ಸಾರಿಗೆ ಸಂಸ್ಥೆ ಗಳಲ್ಲಿ ಕ್ಯಾಷ್‍ಲೆಸ್ ಟಿಕೆಟ್ ವ್ಯವಸ್ಥೆ ಮಾಡ ಲಾಗುವುದು. ಸಾರಿಗೆ ನೌಕರರಿಗೆ ವೇತನ ನೀಡಲು ಹಣವಿಲ್ಲ, ಇದಕ್ಕಾಗಿ ರಾಜ್ಯ ಸರ್ಕಾರ 2551 ಕೋಟಿ ರೂ. ನೀಡಿದೆ. ಒಟ್ಟಾರೆ ಮುಂದಿನ ದಿನಗಳಲ್ಲಿ ಪ್ರಯಾ ಣಿಕರಿಗೆ ಹೆಚ್ಚು ಸೌಲಭ್ಯ ಕಲ್ಪಿಸುವುದು ಹಾಗೂ ಸಂಸ್ಥೆಯನ್ನು ಲಾಭದಾಯಕ ಮಾಡುವಲ್ಲಿ ದಿಟ್ಟ ಹೆಜ್ಜೆ ಇಡುವುದಾಗಿ ಹೇಳಿದರು.

Translate »