ಎನ್‍ಟಿಎಂ ಶಾಲೆ ಉಳಿಸಲು ಆಗ್ರಹಿಸಿ ಮುಂದುವರಿದ ಹೋರಾಟ
ಮೈಸೂರು

ಎನ್‍ಟಿಎಂ ಶಾಲೆ ಉಳಿಸಲು ಆಗ್ರಹಿಸಿ ಮುಂದುವರಿದ ಹೋರಾಟ

August 25, 2021

ಮೈಸೂರು, ಆ.24(ಆರ್‍ಕೆಬಿ)- ಮೈಸೂರಿನ ನಾರಾ ಯಣಶಾಸ್ತ್ರಿ ರಸ್ತೆಯಲ್ಲಿರುವ ಎನ್‍ಟಿಎಂ ಶಾಲೆ ಉಳಿಸಿ ಹೋರಾಟದಲ್ಲಿ ಮಂಗಳವಾರ ಮೈಸೂರು ಹೃದಯ ವಂತ ಕನ್ನಡಿಗರ ಬಳಗದ ಕಾರ್ಯಕರ್ತರು ಭಾಗವಹಿಸಿದ್ದರು.

ಮಾಜಿ ಮೇಯರ್ ಪುರುಷೋತ್ತಮ್, ಕೊ.ಸು. ನರ ಸಿಂಹಮೂರ್ತಿ, ಹೃದಯವಂತ ಕನ್ನಡಿಗರ ಬಳಗದ ಅಧ್ಯಕ್ಷ ಡಿಪಿಕೆ ಪರಮೇಶ್ವರ್, ಕರ್ನಾಟಕ ಕಾವಲು ಪಡೆಯ ರಾಜ್ಯಾ ಧ್ಯಕ್ಷ ಮೋಹನ್‍ಕುಮಾರ್‍ಗೌಡ, ಸಾಹಿತಿ ಬನ್ನೂರು ಕೆ.ರಾಜು, ರೈತಸಂಘದ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಎಸ್. ಬಾಲಕೃಷ್ಣ, ಮುಖಂಡರಾದ ಉಗ್ರ ನರಸಿಂಹೇಗೌಡ, ಭಾನು ಮೋಹನ್, ಮಧುಮತಿ, ಉಮಾದೇವಿ, ಮಿನಿ ಬಂಗಾರಪ್ಪ,, ಎಲ್‍ಐಸಿ ಸಿದ್ದಪ್ಪ, ಗೋವಿಂದರಾಜು, ಬೆಟ್ಟೇಗೌಡ, ಬೆಮಲ್ ಸಿದ್ದಲಿಂಗಪ್ಪ, ಸುಮಿತ್ರಾ, ಬಸವರಾಜು, ಮಲ್ಲಿಕಾರ್ಜುನ ರಾಜ್ ಅರಸ್, ರೈತ ಮುಖಂಡರಾದ ದ್ಯಾವಣ್ಣ, ಗೋವಿಂದ ರಾಜು, ಸತೀಶ್‍ಕುಮಾರ್ ಆರ್ಯಾ, ಸಿದ್ದರಾಜು, ಬಿ.ಡಿ. ಲಿಂಗಪ್ಪ, ಪ್ರಕಾಶ್ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿ ದ್ದರು. ಇಂದಿನ ಪ್ರತಿಭಟನೆಯಲ್ಲಿ ನ್ಯಾಯಾಲಯದ ನಿವೃತ್ತ ಶಿರಸ್ತೇದಾರರೂ ಆದ ಸಮಾಜ ಸೇವಕಿ, ವಿಕಲಚೇತನರಾದ ಟಿ.ಆರ್.ಸುಮಿತ್ರ ಭಾಗವಹಿಸಿ, ಎನ್‍ಟಿಎಂ ಶಾಲೆಯನ್ನು ಉಳಿಸಿಕೊಳ್ಳಬೇಕಾದ ಅಗತ್ಯದ ಬಗ್ಗೆ ತಿಳಿಸಿದರು.

Translate »