36ನೇ ವಾರ್ಡ್ ಉಪ ಚುನಾವಣೆ; ಪಕ್ಷೇತರ ಅಭ್ಯರ್ಥಿ ನಾಮಪತ್ರ ತಿರಸ್ಕøತ
ಮೈಸೂರು

36ನೇ ವಾರ್ಡ್ ಉಪ ಚುನಾವಣೆ; ಪಕ್ಷೇತರ ಅಭ್ಯರ್ಥಿ ನಾಮಪತ್ರ ತಿರಸ್ಕøತ

August 25, 2021

ಮೈಸೂರು,ಆ.24(ಎಂಟಿವೈ)-ಮೈಸೂರು ಮಹಾ ನಗರ ಪಾಲಿಕೆಯ 36ನೇ ವಾರ್ಡ್ ಉಪ ಚುನಾವಣೆ ಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದ ಆರು ಮಂದಿಯಲ್ಲಿ ಓರ್ವ ಪಕ್ಷೇತರ ಅಭ್ಯರ್ಥಿಯ ಉಮೇದುವಾರಿಕೆ ರದ್ದಾಗಿದೆ. ಉಳಿದ ಐವರು ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧವಾಗಿದೆ.
36ನೇ ವಾರ್ಡ್ ಸದಸ್ಯೆಯಾಗಿದ್ದ ರುಕ್ಮಿಣಿ ಮಾದೇ ಗೌಡ ಅವರ ಸದಸ್ಯತ್ವ ನ್ಯಾಯಾಲಯದಿಂದ ಅಸಿಂಧು ಗೊಂಡ ಹಿನ್ನೆಲೆಯಲ್ಲಿ ಸೆ.3ರಂದು ಉಪ ಚುನಾವಣೆ ನಡೆಯಲಿದೆ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಅಭ್ಯರ್ಥಿ ಗಳು, ಮೂವರು ಪಕ್ಷೇತರರು ನಾಮಪತ್ರ ಸಲ್ಲಿಸಿ ದ್ದರು. ಗಾಯತ್ರಿಪುರಂನಲ್ಲಿರುವ ಪಾಲಿಕೆ ವಲಯ ಕಚೇರಿ-9ರಲ್ಲಿ ಚುನಾವಣಾಧಿಕಾರಿಯಾಗಿ ವಲಯ ಕಚೇರಿ 6ರ ವಲಯ ಆಯುಕ್ತ ಎಂ.ಕಾರ್ತಿಕ್ ಹಾಗೂ ಸಹಾ ಯಕ ಚುನಾವಣಾಧಿಕಾರಿ, ವಲಯ-4ರ ಸಹಾಯಕ ಕಂದಾಯಾಧಿಕಾರಿ ಎಂ.ಪ್ರಸಾದ್ ಹಾಗೂ ಸಿಬ್ಬಂದಿ ತಂಡ ನಾಮಪತ್ರ ಕ್ರಮಬದ್ಧವಾಗಿರುವ ಬಗ್ಗೆ ಪರಿಶೀಲಿಸಿ ದರು. ಬೆಳಗ್ಗೆ ಆರಂಭವಾದ ನಾಮಪತ್ರ ಪರಿಶೀಲನಾ ಪ್ರಕ್ರಿಯೆ ಮಧ್ಯಾಹ್ನದ ವೇಳೆಗೆ ಪೂರ್ಣಗೊಂಡಿದ್ದು, ಪಕ್ಷೇತರ ಅಭ್ಯರ್ಥಿ ಎಸ್.ಗೀತಾ ಉಮೇದುವಾರಿಕೆ ತಿರಸ್ಕøತಗೊಂಡಿದೆ. ನಾಮಪತ್ರ ಕಾಲಂನಲ್ಲಿ ಕೆಲವು ಮಾಹಿತಿ ಸರಿಯಾಗಿ ನಮೂದಿಸದ ಹಿನ್ನೆಲೆಯಲ್ಲಿ ಕಾನೂನು ತಜ್ಞರ ಅಭಿಪ್ರಾಯ ಪಡೆದು ಎಸ್.ಗೀತಾ ನಾಮಪತ್ರ ತಿರಸ್ಕರಿಸಲಾಯಿತು. ಪಿ.ಶೋಭ(ಬಿಜೆಪಿ), ಸಿ.ಎಸ್.ರಜನಿ ಅಣ್ಣಯ್ಯ (ಕಾಂಗ್ರೆಸ್), ಎಸ್.ಲೀಲಾವತಿ (ಜೆಡಿಎಸ್), ರೂಪ (ಪಕ್ಷೇತರ), ಆರ್.ರಾಜೇಶ್ವರಿ (ಪಕ್ಷೇತರ)ನಾಮಪತ್ರ ಕ್ರಮಬದ್ಧವಾಗಿದೆ ಎಂದು ಚುನಾವಣಾಧಿಕಾರಿ ಎಂ.ಕಾರ್ತಿಕ್ ತಿಳಿಸಿದರು. ನಾಮ ಪತ್ರ ಹಿಂಪಡೆಯಲು ಆ.26 ಕೊನೆ ದಿನ. ನಂತರ ಕಣದಲ್ಲಿರುವ ಅಭ್ಯರ್ಥಿಗಳಿಗೆ ಕ್ರಮ ಸಂಖ್ಯೆ, ಪಕ್ಷೇತರ ಅಭ್ಯರ್ಥಿಗಳಿಗೆ ಚಿಹ್ನೆ ನೀಡಲಾಗುವುದು ಎಂದರು. ಸೆ.3ರ ಬೆಳಗ್ಗೆ 7ರಿಂದ ಸಂಜೆ 5ಗಂಟೆವರೆಗೆ ಮತ ದಾನ, ಸೆ.6ರಂದು ಮತ ಎಣಿಕೆ ನಡೆಯಲಿದೆ.

ಪ್ರಚಾರ ಆರಂಭ: ನಾಮಪತ್ರ ಕ್ರಮಬದ್ಧವಾಗಿರುವು ದನ್ನು ದೃಢಪಡಿಸಿಕೊಂಡ ಅಭ್ಯರ್ಥಿಗಳು ಮಂಗಳವಾರವೇ ಬೆಂಬಲಿಗರೊಂದಿಗೆ ಮನೆ ಮನೆಗೆ ತೆರಳಿ ಪ್ರಚಾರ ಆರಂ ಭಿಸಿದರು. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳ ಪರವಾಗಿ ಪಕ್ಷದ ಕಾರ್ಯಕರ್ತರು ಪ್ರಚಾರ ಆರಂಭಿಸಿ ದರು. ಪ್ರಚಾರದಲ್ಲಿ ಕೇವಲ ಅಭ್ಯರ್ಥಿ ಹೆಸರು, ಪಕ್ಷವನ್ನಷ್ಟೇ ಹೇಳುವ ಮೂಲಕ ಮತ ಸೆಳೆಯುವ ಪ್ರಯತ್ನ ನಡೆಸಿದ್ದಾರೆ.

Translate »