ಅಂಬಾರಿ ಹೊರಲು ಸಜ್ಜಾದ ಅಭಿಮನ್ಯು
ಮೈಸೂರು

ಅಂಬಾರಿ ಹೊರಲು ಸಜ್ಜಾದ ಅಭಿಮನ್ಯು

October 2, 2021
  • ೬೦೦ ಕೆಜಿ ತೂಗುವ ಮರದ ಅಂಬಾರಿಯನ್ನು ಹೊತ್ತು ಸರಾಗವಾಗಿ ಸಾಗಿದ ದಸರಾ ಸಾರಥಿ
  • ಜನ ಪ್ರತಿನಿಧಿಗಳು, ಅಧಿಕಾರಿಗಳಲ್ಲಿ ಭರವಸೆ

ಸರಾಗವಾಗಿ ಸಾಗಿದ ಅಭಿಮನ್ಯುಮರದ ಅಂಬಾರಿ ಕಟ್ಟಿದ ತಾಲೀಮು ಯಶಸ್ವಿಯಾಗಿದೆ. ೨೮೦ ಕೆಜಿ ಮರದ ಅಂಬಾರಿ, ಅದರಲ್ಲಿ ೩೦೦ ಕೆಜಿ ಮರಳಿನ ಮೂಟೆ ಸೇರಿದಂತೆ ೬೦೦ ಕೆಜಿ ತೂಕದ ಭಾರ ಹೊತ್ತು ಯಶಸ್ವಿಯಾಗಿ ಅಭಿಮನ್ಯು ತಾಲೀಮಿನಲ್ಲಿ ಪಾಲ್ಗೊಂಡಿ ದ್ದಾನೆ. ಎಲ್ಲಾ ಆನೆಗಳು ಆರೋಗ್ಯದಿಂದ ಕೂಡಿವೆೆ. ತಾಲೀಮಿನಲ್ಲಿ ಪಾಲ್ಗೊಂಡಿದ್ದ ಅಭಿಮನ್ಯು ಸರಾಗವಾಗಿ ಹೆಜ್ಜೆ ಹಾಕಿದ್ದಾನೆ. ನಮ್ಮ ಭರವಸೆ ಹೆಚ್ಚಾಗಿದೆ.
– ಡಾ.ವಿ.ಕರಿಕಾಳನ್, ಡಿಸಿಎಫ್

ಮೈಸೂರು: ಜಂಬೂಸವಾರಿ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ದಸರಾ ಗಜಪಡೆಯ ನಾಯಕ ಅಭಿಮನ್ಯುವಿಗೆ ಶುಕ್ರವಾರದಿಂದ ಅಂಬಾರಿ ಹೊರಿಸುವ ತಾಲೀಮು ಆರಂಭಿಸಲಾಯಿತು. ಮೊದಲ ದಿನ ಸುಮಾರು ೬೦೦ ಕೆಜಿ ಭಾರ ಹೊತ್ತು ೪೫ ನಿಮಿಷ ತಾಲೀಮಿನಲ್ಲಿ ಪಾಲ್ಗೊಂಡ ಅಭಿಮನ್ಯು ಭರವಸೆ ಮೂಡಿಸಿದ.

ವಿವಿಧ ಆನೆ ಶಿಬಿರಗಳಿಂದ ಆಗಮಿ ಸಿದ್ದ ಅಭಿಮನ್ಯು ನೇತೃತ್ವದ ಗಜಪಡೆ ಸೆ.೧೬ರಂದು ಅರಮನೆ ಆವರಣ ಪ್ರವೇ ಶಿಸಿತ್ತು. ಸೆ.೨೦ರಿಂದ ಭಾರÀ ಹೊರಿಸುವ ಸುರಕ್ಷಿತ ತಾಲೀಮು ಆರಂಭಿಸಲಾಗಿತ್ತು. ಜಂಬೂಸವಾರಿಗೆ ಇನ್ನು ೧೪ ದಿನವಿದ್ದು, ಇಂದಿನಿAದ ಮರದ ಅಂಬಾರಿ ಹೊರಿ ಸುವ ಮೂಲಕ ತರಬೇತಿ ಆರಂಭಿಸ ಲಾಯಿತು. ಪ್ರತಿ ಬಾರಿ ಹೀಗೆ ಮೊದಲು ಮರದ ಅಂಬಾರಿ ಹೊರಿಸಿ ತರಬೇತಿ ನೀಡಲಾಗುತ್ತದೆ. ಜಂಬೂಸವಾರಿ ದಿನ ಚಿನ್ನದ ಅಂಬಾರಿಯನ್ನು ಸರಾಗವಾಗಿ ಹೊತ್ತು ಸಾಗಲು ಇದು ಸಹಕಾರಿಯಾಗ ಲಿದೆ. ಈ ನಿಟ್ಟಿನಲ್ಲಿ ಮರದ ಅಂಬಾರಿ ತಾಲೀಮು ಹೆಚ್ಚಿನ ಮಹತ್ವ ಪಡೆದಿದೆ.

ಇಂದು ಬೆಳಿಗ್ಗೆ ಅರಮನೆ ಆವರಣ ದಲ್ಲಿರುವ ಕೋಡಿ ಸೋಮೇಶ್ವರ ದೇವಾ ಲಯದ ಬಳಿ ಅಂಬಾರಿ ಆನೆ ಅಭಿಮನ್ಯು ವಿಗೆ ಗಾದಿ ಮತ್ತು ನಮ್ದಾ ಕಟ್ಟಿ ಕುಮ್ಕಿ ಆನೆಗಳಾದ ಕಾವೇರಿ ಹಾಗೂ ಚೈತ್ರರೊಂದಿಗೆ ಒಡೆಯರ್ ನಿವಾಸದ ಪಕ್ಕ ಅಳವಡಿಸಿರುವ ಕ್ರೇನ್ ಬಳಿ ಕರೆತರಲಾಯಿತು. ಬೆಳಗ್ಗೆ ೯.೨೫ರಿಂದ ೧೦.೧೫ರೊಳಗೆ ಸಂದ ಶುಭಲಗ್ನದಲ್ಲಿ ಅರ್ಚಕ ಎಸ್.ವಿ.ಪ್ರಹ್ಲಾದ್ ರಾವ್ ಮೂರು ಆನೆಗಳಿಗೂ ಪಾದ ಪೂಜೆ ನೆರವೇರಿಸಿದರು. ಇದೇ ವೇಳೆ ಮರದ ಅಂಬಾರಿಗೂ ಪೂಜೆ ಸಲ್ಲಿಸಲಾ ಯಿತು. ನಂತರ ಕ್ರೇನ್ ಮೂಲಕ ಮರದ ಅಂಬಾರಿಯನ್ನು ಅಭಿಮನ್ಯುವಿನ ಮೇಲಿಡಲಾಯಿತು. ೮ ಮಂದಿ ವಿಶೇಷ ಮಾವುತರ ತಂಡ ೨೫ ನಿಮಿಷದಲ್ಲಿಯೇ ಅಂಬಾರಿಯನ್ನು ಭದ್ರವಾಗಿ ಕಟ್ಟಿದರು.
ಅಂಬಾರಿ ಕಟ್ಟಿದ ನಂತರ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಶಾಸಕ ಎಲ್. ನಾಗೇಂದ್ರ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಅಪರ ಜಿಲ್ಲಾಧಿಕಾರಿ ಡಾ. ಮಂಜುನಾಥ್‌ಸ್ವಾಮಿ, ಜಿ.ಪಂ ಸಿಇಓ ಎ.ಎಂ.ಯೋಗೀಶ್, ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಹಾಗೂ ಇನ್ನಿತರರು ಡಿಸಿಎಫ್‌ಗಳಾದ ಡಾ.ವಿ.ಕರಿಕಾಳನ್, ಕೆ.ಕಮಲಾ ಕರಿಕಾಳನ್ ಅವರೊಂದಿಗೆ ಮರದ ಅಂಬಾರಿ ಹೊತ್ತ ಅಭಿಮನ್ಯುವಿಗೆ ಪುಷ್ಪಾರ್ಚನೆ ಮಾಡಿದರು.

ಬಳಿಕ ತಾಲೀಮಿನಲ್ಲಿ ಹೆಜ್ಜೆ ಹಾಕಿದ ಅಭಿಮನ್ಯು ಹಾಗೂ ಕುಮ್ಕಿ ಆನೆಗಳು ಒಡೆಯರ್ ನಿವಾಸದತ್ತ ಸೊಂಡಿಲೆತ್ತಿ ಗೌರವ ಸೂಚಿಸಿದವು. ಗಜಪಡೆಯನ್ನು ಅರಮನೆ ಮುಂಭಾಗದ ಪ್ರಾಂಗಣಕ್ಕೆ ಕರೆತರಲಾಯಿತು. ಸಾಲಾನೆಯಾಗಿ ಮೊದಲು ಧನಂಜಯ ಹೆಜ್ಜೆ ಹಾಕಿದರೆ, ಅಶ್ವತ್ಥಾಮ, ಗೋಪಾಲಸ್ವಾಮಿ ಹಿಂಬಾಲಿ ಸಿದವು. ಅಂತಿಮವಾಗಿ ಅಭಿಮನ್ಯು ಹಾಗೂ ಕುಮ್ಕಿ ಆನೆಗಳೊಂದಿಗೆ ತಾಲೀಮಿನಲ್ಲಿ ಸಾಗಿತು. ಅರಮನೆ ಮುಂಭಾಗದ ಪ್ರಾಂಗಣದಿAದ ವರಾಹ ದ್ವಾರದ ರಸ್ತೆಗೆ ಕರೆದೊಯ್ಯಲಾಯಿತು. ಜಂಬೂಸವಾರಿ ದಿನ ಮೆರವಣ ಗೆ ಹಾದುಹೋಗುವ ಮಾರ್ಗದಲ್ಲಿ ತಾಲೀಮು ನಡೆಸಲಾ ಯಿತು. ಪುಷ್ಪಾರ್ಚನೆ ಸ್ಥಳದಲ್ಲಿ ಸೊಂಡಿಲೆತ್ತಿ ಗೌರವ ಸಲ್ಲಿಸಿದ ಅಭಿಮನ್ಯು, ಬಳಿಕ ಕೋಟೆ ಆಂಜನೇಯಸ್ವಾಮಿ ದೇವಾ ಲಯದತ್ತ ಸಾಗಿ, ವಾಪಸ್ ಮತ್ತೆ ಒಡೆಯರ್ ನಿವಾಸದತ್ತ ಕರೆದೊಯ್ದು ಕ್ರೇನ್ ಮೂಲಕ ಅಂಬಾರಿ ಕೆಳಗಿಳಿಸಲಾಯಿತು.

ದೂರವುಳಿದ ವಿಕ್ರಮ, ಲಕ್ಷಿö್ಮÃ: ಸಿಡಿಮದ್ದು ತಾಲೀಮಿನಿಂದ ದೂರವುಳಿ ದಿದ್ದ ಪಟ್ಟದ ಆನೆ ವಿಕ್ರಮ ಹಾಗೂ ಕಿರಿಯ ಆನೆ ಲಕ್ಷಿö್ಮÃಯನ್ನು ಇಂದು ಮರದ ಅಂಬಾ ರಿಯ ತಾಲೀಮಿನಿಂದ ವಿನಾಯಿತಿ ನೀಡ ಲಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ವಿಕ್ರಮನ ಮೇಲೆ ನಿಗಾ ಇರಿಸಲಾಗಿದೆ. ಲಕ್ಷಿö್ಮಯನ್ನು ವಿಕ್ರಮ ಬಳಿ ಕಟ್ಟಿ ಹಾಕಲಾಗಿತ್ತು.

Translate »