೨೦೩೦ರೊಳಗಾಗಿ ದೇಶದಲ್ಲಿ ೪೫೦ ಗಿಗಾವ್ಯಾಟ್ ಬೃಹತ್ ನವೀಕರಿಸಬಹುದಾದ ಇಂಧನ ಶಕ್ತಿ ಉತ್ಪಾದನೆ ಗುರಿ
ಮೈಸೂರು

೨೦೩೦ರೊಳಗಾಗಿ ದೇಶದಲ್ಲಿ ೪೫೦ ಗಿಗಾವ್ಯಾಟ್ ಬೃಹತ್ ನವೀಕರಿಸಬಹುದಾದ ಇಂಧನ ಶಕ್ತಿ ಉತ್ಪಾದನೆ ಗುರಿ

October 2, 2021
  • ಕೃಷ್ಣರಾಜ ಕ್ಷೇತ್ರದಲ್ಲಿ ಸೂರ್ಯಪಥ್- ನವೀಕರಿಬಹುದಾದ ಇಂಧನ ಯೋಜನೆ ಅನುಷ್ಠಾನಕ್ಕೆ ಸಚಿವರಿಂದ ಚಾಲನೆ
  • ಕೇಂದ್ರ ನವೀಕರಿಸಬಹುದಾದ ಇಂಧನ ಶಕ್ತಿಯ ರಾಜ್ಯ ಸಚಿವ ಬಿ.ಭಗವಂತ ಖೂಬಾ ಘೋಷಣೆ: ಸೋಲಾರ್ ವಿದ್ಯುತ್ ಉತ್ಪಾದನೆಗೆ ಕೆ.ಆರ್.ಕ್ಷೇತ್ರದಲ್ಲಿ ಶಾಸಕ ರಾಮದಾಸ್ ಅವರ ಮಹತ್ವದ ಯೋಜನೆಗೆ ಶ್ಲಾಘನೆ

ಮೈಸೂರು, ಅ.೧(ಆರ್‌ಕೆಬಿ)- ನವೀಕರಿಸಬಹುದಾದ ವಿದ್ಯುತ್ ಮತ್ತು ಸೋಲಾರ್ ಶಕ್ತಿಯ ಉಪಯೋಗಕ್ಕೆ ಸಂಬAಧಿಸಿದAತೆ ಆದ್ಯತೆ ನೀಡುತ್ತಿರುವ ಮೋದಿ ಸರ್ಕಾರ ೨೦೩೦ರ ಒಳಗಾಗಿ ೪೫೦ ಗಿಗಾ ವ್ಯಾಟ್ ಶಕ್ತಿಯನ್ನು ಉತ್ಪಾ ದಿಸುವ ಗುರಿ ಹೊಂದಿದೆ ಎಂದು ಕೇಂದ್ರದ ರಾಸಾಯನಿಕ ಗೊಬ್ಬರ, ರಸಗೊಬ್ಬರ, ಮತ್ತು ನವೀಕರಸಬಹುದಾದ ಇಂಧನ ರಾಜ್ಯ ಸಚಿವ ಬಿ.ಭಗವಂತ ಖೂಬಾ ಇಂದಿಲ್ಲಿ ತಿಳಿಸಿದರು.

ಮೈಸೂರಿನ ವಿದ್ಯಾರಣ್ಯಪುರಂ ರಾಮ ಲಿಂಗೇಶ್ವರ ದೇವಸ್ಥಾನದ ಬಳಿ ಉದ್ಯಾನ ವನದಲ್ಲಿ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಆಯೋಜಿಸಿರುವ `ಮೋದಿ ಯುಗ್ ಉತ್ಸವ್’ದಲ್ಲಿ ಸೂರ್ಯ ಪಥ್- ನವೀಕರಿಸಬಹುದಾದ ಇಂಧನಗಳ ಯೋಜನೆ ಅನುಷ್ಠಾನ ಮತ್ತು ಗ್ರಾಹಕ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
೨೦೨೨ರೊಳಗೆ ೧೭೫ ಗೀಗಾ ಬೈಟ್ ಪೈಕಿ ೧೫೦ ಗೀಗಾ ಬೈಟ್ ನವೀಕರಿಸಬಹು ದಾದ ಇಂಧನ ಶಕ್ತಿಯನ್ನು ಉತ್ಪಾದಿಸಲಿ ದ್ದೇವೆ. ಉಳಿದ ೨೫ ಗಿಗಾಬೈಟ್ ನಿಗದಿತ ಅವಧಿ ಯೊಳಗೆ ಗುರಿ ಸಾಧಿಸಲು ನಮ್ಮ ಇಲಾಖೆ ಕಾರ್ಯಯೋಜನೆ ರೂಪಿಸಿದೆ ಎಂದರು.

ಸೋಲಾರ್ ಶಕ್ತಿಯಿಂದ ಪರಿಸರ ಉಳಿಸುವುದು ಅಗತ್ಯ. ಪೆಟ್ರೋಲ್ ಬಳಕೆಯ ವಾಹನಗಳನ್ನು ಕಡಿಮೆ ಮಾಡ ಬೇಕು. ವಿದ್ಯುತ್ ಚಾಲಿತ ವಾಹನಗಳನ್ನು ಹೆಚ್ಚು ಉತ್ಪಾದಿಸಲು ಉತ್ತೇಜನ ನೀಡಲಾ ಗುತ್ತಿದೆ. ಅದಕ್ಕೆಂದೇ ಕಳೆದ ವರ್ಷ ಮೋದಿಯವರು ಬಜೆಟ್‌ನಲ್ಲಿ ೧೦,೦೦೦ ಕೋಟಿ ಮೀಸಲಿಟ್ಟಿದ್ದಾರೆ. ಇದರಿಂದ ೨ ಮತ್ತು ೪ ಚಕ್ರದ ವಾಹನಗಳ ತಯಾರಿಕೆಗೆ ಅನುಕೂಲವಾಗಲಿದೆ ಎಂದರು.

ಮುAದಿನ ದಿನಗಳಲ್ಲಿ ವಿದ್ಯುತ್ ಬೆಲೆ ಕಡಿಮೆಯಾಗುವ ಸಂಭವವಿದೆ. ವಿದ್ಯುತ್ ಉತ್ಪಾದನೆ ಈಗ ಸಾಕಷ್ಟಿದೆ. ಮೋದಿ ಸರ್ಕಾರ ಬರುವ ಮುನ್ನ ವಿದ್ಯುತ್ ಉತ್ಪಾದನೆ ತೀರಾ ಕಡಿಮೆ ಇತ್ತು. ಆದರೆ ಬೇಡಿಕೆ ಹೆಚ್ಚಾಗಿತ್ತು. ರೈತರು, ನಗರ ಪ್ರದೇಶಗಳಲ್ಲಿ ಸರಿಯಾದ ಸಮಯಕ್ಕೆ ವಿದ್ಯುತ್ ಇರುತ್ತಿರಲಿಲ್ಲ. ಆದರೆ ಇಂದು ನಮ್ಮ ಮನೆ, ಹೊಲಗಳಲ್ಲಿ ವಿದ್ಯುತ್ ಹೋಗುವುದಿಲ್ಲ ಎಂಬ ನಂಬಿಕೆ ಜನರಲ್ಲಿ ಬಂದಿದೆ ಎಂದು ತಿಳಿಸಿದರು.

ವಿಧಾನಸಭಾ ಕ್ಷೇತ್ರವೊಂದರಲ್ಲಿ ೫೦೦೦ ಮನೆಗಳಿಗೆ ಛಾವಣ ಸೋಲಾರ್ ಅಳ ವಡಿಸುವ ಕಾರ್ಯವನ್ನು ನಾನೆಲ್ಲೂ ಕೇಳಿಲ್ಲ. ಆ ಕೆಲಸವನ್ನು ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಪರಿಣಾಮ ಕಾರಿಯಾಗಿ ಕೈಗೊಂಡಿದ್ದಾರೆ ಎಂದು ಶಾಸಕರನ್ನು ಖೂಬಾ ಪ್ರಶಂಸಿಸಿದರು.
ಸಚಿವ ವಿ.ಸುನಿಲ್‌ಕುಮಾರ್ ಮಾತ ನಾಡಿ, ಎಂಟು ವರ್ಷದ ಹಿಂದೆ ಪಟ್ಟಣ, ಗ್ರಾಮೀಣ ಪ್ರದೇಶಗಳಲ್ಲಿ ಬಹಳ ದೊಡ್ಡ ವಿದ್ಯುತ್ ಕಡಿತ ಆಗುತ್ತಿತ್ತು. ಆದರೆ ಇಂದು ಮೋದಿ ಆಡಳಿತದಲ್ಲಿ ದೊಡ್ಡ ಪ್ರಮಾಣ ದಲ್ಲಿ ವಿದ್ಯುತ್ ಉತ್ಪಾದನೆ ಕರ್ನಾಟಕದಲ್ಲಿ ಆಗುತ್ತಿದೆ. ಶೇ.೫೦ರಷ್ಟು ನವೀಕರಿಸಿದ ಇಂಧನ ಉತ್ಪಾದನೆಗೆ ಒತ್ತು ನೀಡಿದ್ದೇವೆ. ಅದರಲ್ಲಿ ಪ್ರಗತಿ ಕಾಣುತ್ತಿದ್ದೇವೆ.

ಇಡೀ ರಾಜ್ಯದಲ್ಲಿ ಕೃಷ್ಣರಾಜ ಕ್ಷೇತ್ರದಲ್ಲಿ ರೂಫ್ ಟಾಪ್ ಸೋಲಾರ್ ಅಳವಡಿ ಸುವ ಕಾರ್ಯ ಪೈಲಟ್ ಯೋಜನೆ ಯಾಗಿ ಆರಂಭವಾಗಿದೆ. ಚೆಸ್ಕಾಂ ೩೦೦ ಮೆಗಾವ್ಯಾಟ್ ಗುರಿಯೊಂದಿಗೆ ಉತ್ಪಾದನೆಗೆ ಮುಂದಾಗಿದೆ. ಚೆಸ್ಕಾಂನಲ್ಲಿ ಈಗಾಗಲೇ ರೂಫ್ ಟಾಪ್ ಶಕ್ತಿ ಉತ್ಪಾದನೆಗೆ ಬಂದಿರುವ ೬೦೦೦ ಅರ್ಜಿಗಳ ಪೈಕಿ ಕೃಷ್ಣರಾಜ ಕ್ಷೇತ್ರದಲ್ಲಿ ೫೦೦೦ ಇದೆ ಎಂದರೆ ಕೆ.ಆರ್.ಕ್ಷೇತ್ರದ ಶಾಸಕ ಎಸ್.ಎ.ರಾಮ ದಾಸ್‌ರ ಕಾರ್ಯವೈಖರಿ ಗಮನಾರ್ಹ ವಾದದ್ದು ಎಂದು ಪ್ರಶಂಸಿಸಿದರು.

ವಿದ್ಯುತ್ ಉತ್ಪಾದನೆಗೆ ಮುಂದೆ ಬರುವ ಜನರಿಗೆ ಶೇ.೨೦ರಿಂದ ೪೦ರಷ್ಟು ಸಬ್ಸಿಡಿ ಸಹ ನೀಡಲಿದ್ದೇವೆ. ಶೇ.೬೦ರಷ್ಟು ಮನೆ ಮಾಲೀ ಕರು ಭರಿಸಬೇಕಾಗುತ್ತದೆ ಎಂದು ಹೇಳಿದರು.
ನವೀಕರಿಸಬಹುದಾದ ಇಂಧನ ಕುರಿತು ನವೆಂಬರ್‌ನಲ್ಲಿ ಪಾಲಿಸಿಯೊಂದನ್ನು ರಾಜ್ಯ ಸರ್ಕಾರ ಜಾರಿಗೆ ತರಲಿದೆೆ. ೧೦,೦೦೦ ಮೆಗಾವ್ಯಾಟ್ ಗುರಿಯೊಂದಿಗೆ ಹೊಸ ಪಾಲಿಸಿ ತರಲಿದ್ದೇವೆ. ಇದರಲ್ಲಿ ಯಾವ ಅಂಶಗಳನ್ನು ಜೋಡಿಸಲು ಸಾಧ್ಯ ಎಂಬ ಪ್ರಯತ್ನದಲ್ಲಿ ತೊಡಗಿದ್ದೇವೆ ಎಂದರು.

ಸAಗೀತ, ಸಾಹಿತ್ಯಕ್ಕೆ ಆದ್ಯತೆ ನೀಡುತ್ತಿ ರುವ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅದಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯಿಂದ ಹೆಚ್ಚಿನ ನೆರವು ನೀಡುವಂತೆ ಬಂದಿರುವ ಬೇಡಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಇದಕ್ಕೆ ನೆರವು ನೀಡಲು ತಾವು ಸಿದ್ದ ಎಂದು ಭರವಸೆ ನೀಡಿದರು. ಸರ್ಕಾರಿ ಶಾಲೆ ಮಕ್ಕಳಿಗೆ ಸಂಗೀತ ಕಲಿ ಸಲು ನಮ್ಮ ಇಲಾಖೆಯಿಂದ ಅನುದಾನ ನೀಡುವುದಾಗಿಯೂ ಭರವಸೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಶಾಸಕ ಎಸ್.ಎ.ರಾಮದಾಸ್, ಎಲೆಕ್ಟಿçಕ್ ವಾಹನ ಗಳಿಗೆ ತಮ್ಮ ಮನೆಯಲ್ಲಿಯೇ ಚಾರ್ಜಿಂಗ್ ಮಾಡಿಕೊಳ್ಳಬಹುದಾದ, ಸೋಲಾರ್ ಶಕ್ತಿ ಉತ್ಪಾದನೆಗೆ ಕ್ಷೇತ್ರದಲ್ಲಿ ಒತ್ತು ನೀಡ ಲಾಗಿದೆ. ೫೦೦೦ ಮನೆಗಳಲ್ಲಿ ಸೋಲಾರ್ ಪ್ಯಾನಲ್ ಹಾಕುವ ಪೈಲಟ್ ಯೋಜನೆ ಯನ್ನು ಪ್ರಾರಂಭಿಸಲಾಗಿದೆ. ಆದರೆ ಇದಕ್ಕೆ ವಾಹನಗಳ ಪಾಲಿಸಿ ಆಗಬೇಕಾಗಿದೆ ಎಂದು ಸಚಿವರಲ್ಲಿ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ `ಇ’ ರಿಕ್ಷಾ ಸಮಿತಿ ಅಧ್ಯಕ್ಷ ಅನುಜ್ ಶರ್ಮ, ಮೈಸೂರು-ಕೊಡಗು ಸಂಸದ ಪ್ರತಾಪ್‌ಸಿಂಹ, ಚೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಜಯವಿಭವಸ್ವಾಮಿ, ಬಿಜೆಪಿ ಕ್ಷೇತ್ರಾಧ್ಯಕ್ಷ ಎಂ.ವಡಿವೇಲು, ಪಾಲಿಕೆ ಸದಸ್ಯರಾದ ಮ.ವಿ.ರಾಮಪ್ರಸಾದ್, ಶಾಂತಮ್ಮ ವಡಿವೇಲು, ಬಿಜೆಪಿ ಮುಖಂಡರಾದ ವಿದ್ಯಾಅರಸ್ ಇನ್ನಿತರರು ಉಪಸ್ಥಿತರಿದ್ದರು.

Translate »