ಅ.2, ಅರಮನೆ ಅಂಗಳಕ್ಕೆ ಅಭಿಮನ್ಯು ಪಡೆ
ಮೈಸೂರು

ಅ.2, ಅರಮನೆ ಅಂಗಳಕ್ಕೆ ಅಭಿಮನ್ಯು ಪಡೆ

September 29, 2020

ಮೈಸೂರು, ಸೆ.28(ಎಂಟಿವೈ)- ನಾಡ ಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊ ಳ್ಳಲು ಆಯ್ಕೆ ಮಾಡಲಾಗಿರುವ ಅಭಿಮನ್ಯು ನೇತೃತ್ವದ ಗಜಪಡೆ ಅ.1ರಂದು ಮೈಸೂರಿನ ಅರಣ್ಯ ಭವನಕ್ಕೆ ಆಗಮಿಸಲಿದ್ದು, ಅ.2ರಂದು ಮಧ್ಯಾಹ್ನ 12.18ರಿಂದ 12.40ರೊಳಗೆ ಸಲ್ಲುವ ಧನುರ್ ಲಗ್ನದಲ್ಲಿ ಅರಮನೆ ಆವರಣಕ್ಕೆ ಬರಮಾಡಿಕೊಳ್ಳಲು ನಿರ್ಧರಿಸಲಾಗಿದೆ.

ಕೋವಿಡ್-19 ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನ ದಸರಾ ಮಹೋತ್ಸವ ಸಾಂಪ್ರದಾಯಿಕ ಆಚರಣೆಗಷ್ಟೇ ಸೀಮಿತಗೊಳಿಸಲಾಗಿದ್ದು, ಜಂಬೂಸವಾರಿ ಮೆರವಣಿಗೆ ಅರಮನೆ ಅಂಗಳದಲ್ಲಿ ಮಾತ್ರ ನೆರವೇರಲಿದೆ. ಈ ಬಾರಿ ಅಂಬಾರಿ ಹೊರುವ ಜವಾಬ್ದಾರಿ ಕೂಂಬಿಂಗ್ ಸ್ಪೆಷಲಿಸ್ಟ್ ಅಭಿಮನ್ಯು ಹೆಗಲಿಗೆ ವರ್ಗಾವಣೆಯಾಗಿದೆ. ಕೊರೊನಾ ಸೋಂಕಿ ನಿಂದ ಗಜಪಡೆಯೊಂದಿಗೆ ಅವುಗಳ ಮಾವು ತರು, ಕಾವಾಡಿಗಳ ಹಿತರಕ್ಷಣೆ ನಿಟ್ಟಿನಲ್ಲಿ ಈ ಬಾರಿ ಗಜಪಯಣ ಸರಳವಾಗಿರಲಿದೆ. ಸಂಪ್ರ ದಾಯದಂತೆ ಅ.1ರಂದು ಹುಣಸೂರು ತಾಲೂಕಿನ ಕಾಡಂಚಿನ ಗ್ರಾಮವಾದ ವೀರನ ಹೊಸಳ್ಳಿ ಬಳಿ ಅಂಬಾರಿ ಆನೆ ಅಭಿಮನ್ಯು ವಿಗೆ ಸರಳವಾಗಿ ಪೂಜೆ ಸಲ್ಲಿಸುವ ಮೂಲಕ ಲಾರಿಯಲ್ಲಿ ಅಶೋಕಪುರಂನಲ್ಲಿರುವ ಅರಣ್ಯ ಭವನಕ್ಕೆ ಕರೆತರಲಾಗುತ್ತದೆ. ಬಳಿಕ ಅ.2 ರಂದು ಬೆಳಿಗ್ಗೆ ಸಂಪ್ರದಾಯದಂತೆ ಅರಣ್ಯ ಇಲಾಖೆ ವತಿಯಿಂದ ಅರಣ್ಯ ಭವನದಲ್ಲಿ ಗಜಪಡೆಗೆ ಪೂಜೆ ಸಲ್ಲಿಸಿ, ಮತ್ತೆ ಲಾರಿ ಯಲ್ಲಿ ಅರಮನೆಯ ಜಯಮಾರ್ತಾಂಡ ಗೇಟ್ ಬಳಿ ಕರೆದುಕೊಂಡು ಬರಲಾಗು ತ್ತದೆ. ಅಂದು ಮಧ್ಯಾಹ್ನ 12.18ರಿಂದ 12.40 ರವರೆಗೆ ಸಲ್ಲುವ `ಧನುರ್’ ಶುಭ ಲಗ್ನದಲ್ಲಿ ಅರಮನೆ ಜಯಮಾರ್ತಾಂಡ ದ್ವಾರದಲ್ಲಿ ಅಭಿಮನ್ಯು ನೇತೃತ್ವದ ಗಜಪಡೆಗೆ ಸ್ವಾಗತ ಕೋರಲಾಗುತ್ತದೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಗಜಪಡೆ ಯನ್ನು ಸ್ವಾಗತಿಸುವ ಈ ಕಾರ್ಯ ಕ್ರಮದ ಅಧ್ಯಕ್ಷತೆಯನ್ನು ಶಾಸಕ ಎಸ್.ಎ. ರಾಮದಾಸ್ ವಹಿಸಲಿದ್ದಾರೆ. ಕಾರ್ಯ ಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಂಸ ದರು, ಶಾಸಕರು, ಸ್ಥಳೀಯ ಜನಪ್ರತಿ ನಿಧಿಗಳು ಭಾಗವಹಿಸಲಿದ್ದಾg

Translate »