ರೋಹಿಣಿ ಸಿಂಧೂರಿ ಈಗ ಮೈಸೂರು ಜಿಲ್ಲಾಧಿಕಾರಿ
ಮೈಸೂರು

ರೋಹಿಣಿ ಸಿಂಧೂರಿ ಈಗ ಮೈಸೂರು ಜಿಲ್ಲಾಧಿಕಾರಿ

September 29, 2020

ಮೈಸೂರು, ಸೆ.28(ಆರ್‍ಕೆ)- ದಕ್ಷ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ದಾಸರಿ ಅವರನ್ನು ಮೈಸೂರು ಜಿಲ್ಲಾಧಿಕಾರಿ ಯಾಗಿ ವರ್ಗಾವಣೆ ಮಾಡಿ ಸರ್ಕಾರ ಸೋಮ ವಾರ ಆದೇಶ ಹೊರ ಡಿಸಿದೆ. ಆಗಸ್ಟ್28ರಂದು ಮೈಸೂರು ಡಿಸಿಯಾಗಿ ನಿಯೋಜನೆ ಗೊಂಡಿದ್ದ ಬಿ.ಶರತ್ ಅವರನ್ನು ತಿಂಗಳು ಮುಗಿಯುವುದರೊಳಗಾಗಿಯೇ ವರ್ಗಾ ವಣೆ ಮಾಡಲಾಗಿದ್ದು, ಅವರಿಗೆ ಸ್ಥಳ ನಿಯೋಜನೆ ಮಾಡಿಲ್ಲ. ಧಾರ್ಮಿಕ ಮತ್ತು ಚಾರಿ ಟಬಲ್ ಎಂಡೋ ಮೆಂಟ್ಸ್ ಆಯುಕ್ತ (ಬೆಂಗಳೂರು)ರಾಗಿದ್ದ ರೋಹಿಣಿ ಸಿಂಧೂರಿ ದಾಸರಿ ಅವರನ್ನು ಮೈಸೂರಿನ ಜಿಲ್ಲಾಧಿಕಾರಿ ಯನ್ನಾಗಿ ವರ್ಗಾವಣೆ ಮಾಡಲಾಗಿದ್ದು, ಅವರು ನಾಳೆ (ಮಂಗಳವಾರ) ಅಧಿಕಾರ ವಹಿಸಿಕೊಳ್ಳುವರು ಎಂದು ಮೂಲಗಳು ತಿಳಿಸಿವೆ.

ಈ ಹಿಂದೆ ಮಂಡ್ಯ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾ ರಿಯಾಗಿ, ಹಾಸನ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿ, ರೋಹಿಣಿ ಸಿಂಧೂರಿ ಅವರು ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ಎನಿಸಿಕೊಂಡಿದ್ದರು. ಹಾಸನ ಜಿಲ್ಲಾಧಿಕಾರಿಯಾಗಿದ್ದಾಗ ಜಗತ್ಪ್ರಸಿದ್ಧ ಶ್ರವಣಬೆಳಗೊಳ ಶ್ರೀಗೊಮ್ಮಟೇಶ್ವರ ಮಹಾಮಸ್ತಾಭಿಷೇಕ ಯಶಸ್ವಿಯಾಗಲು ಕಾರಣಕರ್ತರಾಗಿದ್ದರು. ನಂತರ ಅವರನ್ನು ಬೆಂಗಳೂರಿನ ಧಾರ್ಮಿಕ ಮತ್ತು ಎಂಡೋಮೆಂಟ್ ಚಾರಿಟಬಲ್ ಆಯುಕ್ತರಾಗಿ ವರ್ಗಾವಣೆ ಮಾಡಲಾಗಿತ್ತು

Translate »