ಕೋವಿಡ್-19 ನಿರ್ಬಂಧದ ನಡುವೆಯೂ ಮೈಸೂರಲ್ಲಿ ಅಪಘಾತ; ಸಾವಿನ ಸಂಖ್ಯೆ ಹೆಚ್ಚಳ
ಮೈಸೂರು

ಕೋವಿಡ್-19 ನಿರ್ಬಂಧದ ನಡುವೆಯೂ ಮೈಸೂರಲ್ಲಿ ಅಪಘಾತ; ಸಾವಿನ ಸಂಖ್ಯೆ ಹೆಚ್ಚಳ

January 6, 2022

ಮೈಸೂರು, ಜ. 5- ಕೋವಿಡ್-19 ಮಹಾಮಾರಿ ಸೋಂಕು ಕಟ್ಟಿ ಹಾಕಲು ಸುದೀರ್ಘ ಕಾಲದವರೆಗೆ ಲಾಕ್‍ಡೌನ್, ಸೆಮಿ ಲಾಕ್‍ಡೌನ್, ನೈಟ್ ಕಫ್ರ್ಯೂ, ವಾರಾಂತ್ಯ ಕಫ್ರ್ಯೂನಂತಹ ನಿರ್ಬಂಧ ವಿಧಿಸಿದ್ದರೂ, ಮೈಸೂರಿನಲ್ಲಿ ರಸ್ತೆ ಅಪಘಾತಗಳು ಮಾತ್ರ ಕಡಿಮೆಯಾಗಿಲ್ಲ.

ಅಪಘಾತಗಳಿಂದ ಸಾವು-ನೋವುಗಳ ಸಂಖ್ಯೆಯೂ ಜಾಸ್ತಿಯಾಗುತ್ತಿರುವುದು ಗಮನಾರ್ಹ. ಕೊರೊನಾ ಹರಡುತ್ತದೆ ಎಂಬ ಭಯದಿಂದ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರನ್ನು ಆಲ್ಕೋ ಮೀಟರ್‍ನಿಂದ ತಪಾಸಣೆ ಮಾಡದಿರುವುದು ಮೈಸೂರು ನಗರದಲ್ಲಿ ರಸ್ತೆ ಅಪಘಾತಗಳು ಹೆಚ್ಚಾಗಲು ಪ್ರಮುಖ ಕಾರಣ ಎಂಬುದು ಸ್ಪಷ್ಟವಾಗಿದೆ.

2020ಕ್ಕೆ ಹೋಲಿಸಿದರೆ, 2021ನೇ ಸಾಲಿನಲ್ಲಿ ರಸ್ತೆ ಅಪಘಾತ, ಸಾವು-ನೋವುಗಳ ಸಂಖ್ಯೆ ಹೆಚ್ಚಾಗಿದೆ. 2020ರಲ್ಲಿ 111 ಗಂಭೀರ ಅಪಘಾತಗಳು ಸಂಭವಿಸಿ 117 ಮಂದಿ ಸಾವನ್ನಪ್ಪಿದ್ದು, 516 ಸಾಮಾನ್ಯ ಅಪ ಘಾತ ಪ್ರಕರಣಗಳಲ್ಲಿ 616 ಮಂದಿಗೆ ಗಾಯಗಳಾಗಿವೆ. ಅದೇ ರೀತಿ 2021ನೇ ಸಾಲಿ ನಲ್ಲಿ 117 ಗಂಭೀರ ಸ್ವರೂಪದ ರಸ್ತೆ ಅಪಘಾತಗಳು ಸಂಭವಿಸಿದ್ದು, 121 ಮಂದಿ ಸಾವನ್ನಪ್ಪಿದ್ದಾರೆ. 534 ಸಾಮಾನ್ಯ ಅಪ ಘಾತಗಳಲ್ಲಿ 670 ಮಂದಿ ಗಾಯಗೊಂಡಿದ್ದಾರೆ.

ಈ ಎರಡೂ ವರ್ಷಗಳಲ್ಲಿ ಕೋವಿಡ್ ನಿರ್ಬಂಧಕಾಜ್ಞೆಗಳು ಜಾರಿಯಲ್ಲಿದ್ದು, ತಿಂಗಳುಗಟ್ಟಲೇ ವಾಹನ ಸಂಚಾರಕ್ಕೆ ಕಡಿವಾಣ ಹಾಕಲಾಗಿತ್ತಾದರೂ, ರಸ್ತೆ ಅಪ ಘಾತಗಳ ಸಂಖ್ಯೆ ಕಡಿಮೆಯಾಗದಿರುವುದು ಗಮನಾರ್ಹ. 2020ನೇ ಸಾಲಿನಲ್ಲಿ ದೇವ ರಾಜ ಸಂಚಾರ ಠಾಣಾ ಸರಹದ್ದಿನಲ್ಲಿ 3 ಗಂಭೀರ ಹಾಗೂ 46 ಸಾಮಾನ್ಯ ಅಪಘಾತ ಗಳಿಂದ ಮೂವರು ಮೃತಪಟ್ಟರೆ 50 ಮಂದಿ ಗಾಯಗೊಂಡಿದ್ದರು. ಕೆ.ಆರ್. ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಒಟ್ಟು 155 ಅಪಘಾತಗಳು ಸಂಭವಿಸಿ 48 ಮಂದಿ ಸಾವನ್ನಪ್ಪಿದ್ದರಲ್ಲದೇ, 156 ಮಂದಿ ಗಾಯಗೊಂಡಿದ್ದರು.

ಎನ್.ಆರ್. ಸಂಚಾರ ಠಾಣಾ ಸರಹದ್ದಿನಲ್ಲಿ ಸಂಭವಿಸಿದ 96 ಅಪಘಾತಗಳಲ್ಲಿ 14 ಮಂದಿ ಸಾವನ್ನಪ್ಪಿದ್ದು, 91 ಮಂದಿ ಗಾಯಗೊಂಡಿ ದ್ದರು. ಸಿದ್ಧಾರ್ಥನಗರ ಸಂಚಾರ ಠಾಣೆ ಯಲ್ಲಿ ದಾಖಲಾದ 114 ಅಪಘಾತ ಪ್ರಕ ರಣಗಳಲ್ಲಿ 21 ಮಂದಿ ಮೃತಪಟ್ಟು, ಒಟ್ಟು 122 ಮಂದಿ ಗಾಯಗೊಂಡರಲ್ಲದೆ, ವಿವಿ ಪುರಂ ಸಂಚಾರ ಠಾಣೆಯಲ್ಲಿ ದಾಖಲಾದ 204 ಪ್ರಕರಣಗಳಲ್ಲಿ 31 ಮಂದಿ ಸಾವ ನ್ನಪ್ಪಿದ್ದು, 197 ಮಂದಿ ಗಾಯಗೊಂಡಿ ದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

2021ನೇ ಸಾಲಿನಲ್ಲಿ ದೇವರಾಜ ಸಂಚಾರ ಠಾಣೆ ವ್ಯಾಪ್ತಿಯ 52 ಅಪಘಾತಗಳ ಪೈಕಿ 8 ಮಂದಿ ಸಾವನ್ನಪ್ಪಿ 59 ಮಂದಿ ಗಾಯ ಗೊಂಡರೆ, ಕೆಆರ್ ಠಾಣೆಯಲ್ಲಿ ಸಂಭವಿಸಿದ 142 ಅಪಘಾತಗಳಲ್ಲಿ 43 ಮಂದಿ ಸಾವ ನ್ನಪ್ಪಿದ್ದು, 145 ಮಂದಿ ಗಾಯಗೊಂಡರು. ಎನ್‍ಆರ್ ಠಾಣೆಯಲ್ಲಿ ಒಟ್ಟು 101 ಪ್ರಕರಣಗಳಲ್ಲಿ 15 ಮಂದಿ ಸಾವನ್ನಪ್ಪಿ 113 ಮಂದಿ ಗಾಯಗೊಂಡಿದ್ದಾರೆ.

ಸಿದ್ಧಾರ್ಥನಗರ ಸಂಚಾರ ಠಾಣಾ ಸರಹದ್ದಿನಲ್ಲಿ 123 ಅಪಘಾತಗಳು ಸಂಭವಿಸಿದ್ದು, 21 ಮಂದಿಗೆ ಗಾಯಗಳಾದವು. ವಿವಿ ಪುರಂ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಒಟ್ಟು ಅತೀ ಹೆಚ್ಚು 233 ಅಪಘಾತಗಳು ಸಂಭವಿಸಿದ್ದವು. ಅದರಲ್ಲಿ 34 ಮಂದಿ ಮೃತ ಪಟ್ಟು 231 ಮಂದಿ ಗಾಯಗೊಂಡರು.
ಕೊರೊನಾ ಸೋಂಕು ಆರಂಭವಾದ ನಂತರ 2020ರಿಂದೀಚೆಗೆ ಪೊಲೀಸರು ಕೊರೊನಾ ನಿರ್ವಹಣೆ, ಸರ್ಕಾರ ಆಗಿಂ ದಾಗ್ಗೆ ಹೊರಡಿಸುವ ಮಾರ್ಗಸೂಚಿಗಳನ್ನು ಜಾರಿಗೊಳಿಸುವತ್ತ ತಲ್ಲೀನರಾಗಿದ್ದರಿಂದ ಸಂಚಾರ ನಿಯಮಗಳನ್ನು ಪರಿಣಾಮಕಾರಿ ಯಾಗಿ ಜಾರಿಗೊಳಿಸಲು ಗಮನಹರಿಸದಿರುವುದು ಕಳೆದ ಎರಡು ವರ್ಷಗಳಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಅಧಿಕವಾಗಲು ಕಾರಣ ಎಂದು ಹೇಳಬಹುದು.
ಸಾರ್ವಜನಿಕರು ಸಂಚಾರ ನಿಯಮ ಗಳನ್ನು ಕಟ್ಟುನಿಟ್ಟಾಗಿ ಪಾಲಿಸದಿರುವುದು, ಮದ್ಯಪಾನ ಮಾಡಿ ವಾಹನ ಚಾಲನೆ ಮಾಡು ವುದು, ಅತೀ ವೇಗ ಮತ್ತು ನಿರ್ಲಕ್ಷ್ಯದ ಚಾಲನೆ, ಹೆಲ್ಮೆಟ್, ಸೀಟ್ ಬೆಲ್ಟ್ ಧರಿಸದೇ ವಾಹನ ಚಾಲನೆ ಮಾಡಿದ್ದರಿಂದಲೂ ಅಪಘಾತಗಳ ಸಂಖ್ಯೆ ಮೈಸೂರು ನಗರದಲ್ಲಿ ಹೆಚ್ಚಾಗಲು ಪ್ರಮುಖ ಕಾರಣ ಎಂದು ಸಂಚಾರ ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ.

Translate »