ಖಾತೆ ತೆರೆದ ಕಾಂಗ್ರೆಸ್
ಮೈಸೂರು

ಖಾತೆ ತೆರೆದ ಕಾಂಗ್ರೆಸ್

June 17, 2022

ಮೈಸೂರು,ಜೂ.೧೬(ಆರ್‌ಕೆ)-ಮಧು ಜಿ.ಮಾದೇಗೌಡರು ಗೆಲುವು ಸಾಧಿಸುವ ಮೂಲಕ ಇದೇ ಮೊದಲ ಬಾರಿ ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಖಾತೆ ತೆರೆದಿದೆ.

ಮಂಡ್ಯ, ಹಾಸನ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳನ್ನೊಳಗೊಂಡ ಕ್ಷೇತ್ರದಲ್ಲಿ ಈವರೆಗೆ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದು ಪರಿ ಷತ್ ಸದಸ್ಯರಾಗಿರಲಿಲ್ಲ. ಪದವೀಧರ
ಕ್ಷೇತ್ರದಲ್ಲಿ ಜೆಡಿಎಸ್ ಭದ್ರಕೋಟೆ ಎನಿಸಿದ್ದ ಮಂಡ್ಯ, ಹಾಸನ ಮತ್ತು ಮೈಸೂರು ಜಿಲ್ಲೆಗಳಲ್ಲಿ ಆ ಪಕ್ಷದ ಅಭ್ಯರ್ಥಿಗಳೆ ಗೆಲುವು ಸಾಧಿಸುತ್ತಿದ್ದರು. ಕಾಂಗ್ರೆಸ್ ಅಭ್ಯರ್ಥಿ ಮಧು ಜಿ.ಮಾದೇಗೌಡರು ಮೂಲತಃ ಮಂಡ್ಯದವರಾಗಿದ್ದು, ತಮ್ಮ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು, ಶಿಕ್ಷಕರೊಂದಿಗಿನ ಒಡನಾಟ, ತಮ್ಮ ತಂದೆ ಜಿ.ಮಾದೇಗೌಡರ ನಿರಂತರ ಕಾವೇರಿ ನದಿ ನೀರಿನ ಹೋರಾಟ, ಕಾಂಗ್ರೆಸ್ ನಾಯಕರು, ಮುಖಂಡರ ಒಗ್ಗಟ್ಟಿನ ಪ್ರಚಾರ ಹಾಗೂ ಜೆಡಿಎಸ್‌ನಿಂದ ಸಿಡಿದೆದ್ದು, ತಮ್ಮ ಪರ ಬಹಿರಂಗವಾಗಿಯೇ ಚುನಾವಣಾ ಪ್ರಚಾರ ಮಾಡಿದ ಮರಿತಿಬ್ಬೇಗೌಡರ ನಿಲುವನ್ನು ಸಮರ್ಥವಾಗಿ ಬಳಸಿಕೊಂಡು ಜಯಭೇರಿ ಗಳಿಸಿದ್ದಾರೆ. ಆ ಮೂಲಕ ಮೈಸೂರು ಭಾಗದಲ್ಲಿ ಜೆಡಿಎಸ್ ಭದ್ರಕೋಟೆಗೆ ಲಗ್ಗೆ ಇಟ್ಟಿರುವ ಕಾಂಗ್ರೆಸ್, ಜಾ.ದಳದ ಗೆಲುವಿಗೆ ಬ್ರೇಕ್ ಹಾಕಿ ಅಭ್ಯರ್ಥಿಗಳೇ ಗೆಲ್ಲುತ್ತಿರುವುದನ್ನು ಮೊಟಕುಗೊಳಿಸಿ ಮಧು ಮಾದೇಗೌಡರು ಪ್ರಥಮ ಬಾರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಖಾತೆ ತೆರೆದಿದ್ದಾರೆ.

Translate »