ಪ್ರಧಾನಿ ಮೋದಿ ರಾಜ್ಯ ಭೇಟಿ: ಬಿಜೆಪಿ ಹವಾ ಸೃಷ್ಟಿಸಲು ಸಿದ್ಧತೆ
ಮೈಸೂರು

ಪ್ರಧಾನಿ ಮೋದಿ ರಾಜ್ಯ ಭೇಟಿ: ಬಿಜೆಪಿ ಹವಾ ಸೃಷ್ಟಿಸಲು ಸಿದ್ಧತೆ

June 17, 2022

ಬೆಂಗಳೂರು, ಜೂ.೧೬ (ಕೆಎಂಶಿ)- ಪ್ರಧಾನಿ ನರೇಂದ್ರ ಮೋದಿ ಅವರ ಎರಡು ದಿನಗಳ ರಾಜ್ಯ ಪ್ರವಾಸವನ್ನೇ ಬಿಜೆಪಿ ಪರವಾದ ಅಲೆ ಸೃಷ್ಟಿಸಲು ರಾಜ್ಯ ಘಟಕ ಮುಂದಾಗಿದೆ.
ರಾಜ್ಯದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣ ಹಿಡಿದ ನಂತರ ಹಗ ರಣ ಮತ್ತು ಭ್ರಷ್ಟಾಚಾರದ ಆರೋಪ ಗಳಿಂದ ಪಕ್ಷ ಮತ್ತು ಸರ್ಕಾರಕ್ಕೆ ಹಿನ್ನಡೆಯಾಗಿದೆ. ಪ್ರತಿಪಕ್ಷ ಕಾಂಗ್ರೆಸ್ ಮಾಡುತ್ತಿರುವ ಅಪಪ್ರಚಾರದಿಂದ ಪಕ್ಷ ಮತ್ತು ಸರ್ಕಾರಕ್ಕೆ ಭಾರೀ ಹಿನ್ನಡೆಯಾಗಿದೆ. ವಿಧಾನಸಭೆ ಚುನಾವಣೆಗೆ ಇನ್ನು ಕೇವಲ ೯ ತಿಂಗಳು ಮಾತ್ರ ಬಾಕಿ ಉಳಿದಿದ್ದು, ಈ ಅಲ್ಪಾವಧಿಯಲ್ಲಿ ಜನರ ಮನಸ್ಸು ಗೆಲ್ಲಲು ನರೇಂದ್ರ ಮೋದಿ ಅವರನ್ನೇ ಮುಂದಿಟ್ಟುಕೊAಡು ಚುನಾವಣೆ ಎದುರಿಸುವುದು.

ಚುನಾವಣೆಗೆ ಪೂರ್ವವಾಗಿ ಸರ್ಕಾರಿ ಕಾರ್ಯ ಕ್ರಮಗಳಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿರುವ ಮೋದಿ ಅವರ ಈ ಭೇಟಿಯಿಂದಲೇ ಪಕ್ಷದ ಹವಾ ಸೃಷ್ಟಿಗೆ ರಾಜ್ಯ ನಾಯಕರು ಕಾರ್ಯಕ್ರಮ ರೂಪಿಸಿದ್ದಾರೆ. ನಿನ್ನೆ ಅರಮನೆ ಆವರಣದಲ್ಲಿ ಮೋದಿ ಅವರ ಕಾರ್ಯಕ್ರಮ ವನ್ನು ರಾಜಕೀಯವಾಗಿ ಬಳಸಿಕೊಳ್ಳುವ ಸಂಬAಧ ಆರ್‌ಎಸ್‌ಎಸ್ ಮತ್ತು ಬಿಜೆಪಿ ನಾಯಕರು ಮುಂಚೂಣ ಕಾರ್ಯಕರ್ತರಿಗೆ ಪಾಠ ಮಾಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆಹಲವು ಮುಖಂಡರು ನಿನ್ನೆ ಸಭೆಯಲ್ಲಿ ಭಾಗಿಯಾಗಿದ್ದರು. ಜೂ.೨೦, ೨೧ರಂದು ಎರಡು ದಿನಗಳ ಕಾಲ ಬೆಂಗಳೂರು ಮತ್ತು ಮೈಸೂರಿನಲ್ಲಿ ಸರ್ಕಾರಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ಅವರೇ ರಾಜ್ಯದ ಮತದಾರರ ಮನ ಗೆಲ್ಲಲು ಅವರೇ ಕೆಲವು ಕಾರ್ಯಕ್ರಮ ರೂಪಿಸಿದ್ದಾರೆ. ಇದರ ಜತೆಗೆ ರಾಜ್ಯ ಘಟಕ ಇತ್ತೀಚೆಗೆ ಕಳೆದುಕೊಂಡಿರುವ ವರ್ಚಸ್ಸನ್ನು ಮರು ಸ್ಥಾಪಿಸಲು ಈ ಕಾರ್ಯಕ್ರಮಗಳನ್ನೇ ಬಂಡವಾಳವನ್ನಾಗಿ ಬಳಸಿಕೊಳ್ಳುವ ಯೋಜನೆ ರೂಪಿಸಿದೆ.

ಒಂದು ಕಾರ್ಯಕ್ರಮದಿಂದ ಇನ್ನೊಂದು ಕಾರ್ಯಕ್ರಮಕ್ಕೆ ತೆರಳುವ ಮಾರ್ಗದಲ್ಲಿ ಸರಪಳಿ ರೀತಿಯಲ್ಲಿ ನಿಂತು ಪಕ್ಷದ ಹಾಗೂ ಕೇಸರಿ ಧ್ವಜವಿಡಿದು ಅದ್ಧೂರಿ ಸ್ವಾಗತ ಕೋರುವುದು. ಅದರಲ್ಲೂ ಹಳೇ ಮೈಸೂರು ಭಾಗದ ಕೇಂದ್ರವಾಗಿರುವ ಮೈಸೂರು ನಗರವನ್ನು ಸಂಪೂರ್ಣವಾಗಿ ಕೇಸರೀಕರಣಗೊಳಿಸಿ, ಈ ಭಾಗದಲ್ಲಿ ದೊಡ್ಡ ಪ್ರಮಾಣ ದಲ್ಲಿ ಮತದಾರರನ್ನು ಸೆಳೆಯುವ ಬಿಜೆಪಿಯ ಕಸರತ್ತು ಇದಾಗಿರುತ್ತದೆ.

Translate »