ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಮಧು ಮಾದೇಗೌಡ ಗೆಲುವು
ಮೈಸೂರು

ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಮಧು ಮಾದೇಗೌಡ ಗೆಲುವು

June 17, 2022

೩೦ ಗಂಟೆಗಳ ಎಣ ಕೆ ನಂತರ ಮಧ್ಯಾಹ್ನ ೨ ಗಂಟೆಗೆ ಫಲಿತಾಂಶ ಪ್ರಕಟ

ಮೊದಲ ಬಾರಿ ಕಾಂಗ್ರೆಸ್ ಜಯದ ದಾಖಲೆ

೩ನೇ ಸ್ಥಾನಕ್ಕಿಳಿದ ಜೆಡಿಎಸ್ಬಿಜೆಪಿಯ ಮೈ.ವಿ.ರವಿಶಂಕರ್‌ಗೆ ಸತತ ೨ನೇ ಸೋಲು

ಮೈಸೂರು, ಜೂ.೧೬(ಆರ್‌ಕೆ)-ತೀವ್ರ ಕುತೂಹಲ ಕೆರಳಿ ಸಿದ್ದ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಧು ಜಿ.ಮಾದೇಗೌಡ, ತಮ್ಮ ಸಮೀಪ ಪ್ರತಿಸ್ಪರ್ಧಿ ಬಿಜೆಪಿಯ ಮೈ.ವಿ.ರವಿಶಂಕರ್ ವಿರುದ್ಧ ೧೨,೨೦೪ ಮತಗಳ ಅಂತರದಲ್ಲಿ ಭರ್ಜರಿ ಜಯ ಗಳಿಸಿದ್ದಾರೆ. ಈ ಮೂಲಕ ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಇದೇ ಪ್ರಥಮ ಬಾರಿಗೆ ಕಾಂಗ್ರೆಸ್ ಗೆಲುವು ಸಾಧಿಸಿ ದಾಖಲೆ ಬರೆದಿದೆ.
ಗುರುವಾರ ಮಧ್ಯಾಹ್ನ ಅಂತಿಮ ಸುತ್ತಿನ ಮತ ಎಣ ಕೆ ಮುಕ್ತಾಯವಾದಾಗ ಮಧು ಮಾದೇಗೌಡರು ಒಟ್ಟು ೪೬,೦೮೨ ಮತಗಳನ್ನು ಪಡೆದು ಜಯಶೀಲರಾಗಿದ್ದಾರೆ ಎಂದು ಚುನಾವಣಾಧಿಕಾರಿಯೂ ಆದ ಪ್ರಾದೇಶಿಕ ಆಯುಕ್ತ ಡಾ. ಜಿ.ಸಿ.ಪ್ರಕಾಶ್ ಘೋಷಿಸಿದರು. ಬಿಜೆಪಿ ಅಭ್ಯರ್ಥಿ ಮೈ.ವಿ. ರವಿಶಂಕರ್ ೩೩,೮೭೮ ಮತಗಳನ್ನು ಪಡೆದರೆ, ಜೆಡಿಎಸ್ ಅಭ್ಯರ್ಥಿ ಹೆಚ್.ಕೆ.ರಾಮು ೧೯,೬೩೦ ಮತ ಗಳಿಸಿ ೩ನೇ ಸ್ಥಾನಕ್ಕೆ ತಳ್ಳಲ್ಪಟ್ಟರು. ಈ ಮೂಲಕ ಜೆಡಿಎಸ್ ತನ್ನ ಸ್ಥಾನ ಕಳೆದು ಕೊಂಡದ್ದಲ್ಲದೇ ದಕ್ಷಿಣ ಪದವೀಧರಕ್ಷೇತ್ರದ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ತೃತೀಯ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಸ್ಪರ್ಧಾ ಕಣದಲ್ಲಿದ್ದ ಎಲ್ಲಾ ೧೯ ಅಭ್ಯರ್ಥಿಗಳ ಪ್ರಥಮ ಪ್ರಾಶಸ್ತö್ಯದ ಮತ ಎಣ ಕೆ ಮುಕ್ತಾಯ ಗೊಂಡಾಗ ಇಂದು ಮಧು ಜಿ.ಮಾದೇಗೌಡ ೩೮,೧೬೯, ಮೈ.ವಿ.ರವಿಶಂಕರ್ ೨೯,೬೧೪ ಹಾಗೂ ಹೆಚ್.ಕೆ.ರಾಮು ೧೯,೬೩೦ ಮತ ಗಳಿಸಿದ್ದರು. ಗೆಲುವಿಗೆ ನಿಗದಿಪಡಿಸಲಾಗಿದ್ದ ೪೬,೦೮೩ ಮತಗಳ ಗುರಿಯನ್ನು ಯಾವುದೇ ಅಭ್ಯರ್ಥಿಯು ತಲುಪದ ಕಾರಣ ಎರಡನೇ ಪ್ರಾಶಸ್ತö್ಯದ ಮತ ಎಣ ಕೆ ಮಾಡಲಾಯಿತು. ೧೯ ಅಭ್ಯರ್ಥಿಗಳ ಪೈಕಿ ೩ನೇ ಸ್ಥಾನದಲ್ಲಿದ್ದ ಹೆಚ್.ಕೆ.ರಾಮು ಅವರ ಮತ ಪತ್ರದಲ್ಲಿ ಎರಡನೇ ಪ್ರಾಶಸ್ತö್ಯದ ಮತಗಳನ್ನು ಎಣ ಕೆ ಮಾಡಿ ಸೇರ್ಪಡೆಗೊಳಿಸಿದಾಗ ಮಧು ಜಿ.ಮಾದೇಗೌಡರಿಗೆ ೪೫,೨೭೫ ಹಾಗೂ ರವಿಶಂಕರ್‌ಗೆ ೩೩,೮೭೮ ಮತಗಳು ಬಂದಿದ್ದವು. ೧೭ ಅಭ್ಯರ್ಥಿಗಳನ್ನು ಎಲಿಮಿನೇಷನ್ ಮಾಡಿದ ಬಳಿಕವೂ ಅತೀ ಹೆಚ್ಚು ಮತ ಗಳಿಸಿದ್ದ ಮಧು ಜಿ.ಮಾದೇಗೌಡರಿಗೆ ನಿಗದಿತ ಖೋಟಾ (೪೬,೦೮೩) ತಲುಪಲು ೮೦೮ ಮತಗಳ ಕೊರತೆ ಎದುರಾಯಿತು. ಆಗ ಚುನಾವಣಾಧಿಕಾರಿ ಡಾ. ಪ್ರಕಾಶ್ ಅವರು ಭಾರತ ಚುನಾವಣಾ ಆಯೋಗ ಸಂಪರ್ಕಿಸಿ ಅವರು ನೀಡಿದ ನಿರ್ದೇಶನದಂತೆ ಎರಡನೇ ಸ್ಥಾನದಲ್ಲಿದ್ದ ಬಿಜೆಪಿಯ ಮೈ.ವಿ.ರವಿ ಶಂಕರ್ ಅವರ ಮತಪತ್ರದಲ್ಲಿನ ಎರಡನೇ ಪ್ರಾಶಸ್ತö್ಯದ ಮತಗಳನ್ನು ಎಣ ಸುವ ಕಾರ್ಯ ನಡೆಸಿದರು. ಮೊದಲ ಸ್ಥಾನದಲ್ಲಿದ್ದ ಮಧು ಜಿ.ಮಾದೇಗೌಡರ ಗೆಲುವಿಗೆ ಅಗತ್ಯವಿರುವ ೮೦೮ ಮತಗಳು ಬರುವವರೆಗೆ ಮಾತ್ರ ಎಣ ಕೆ ಪ್ರಕ್ರಿಯೆ ನಡೆಸಿ, ಖೋಟಾ ತಲುಪುತ್ತಿದ್ದಂತೆಯೇ ಎಣ ಕೆ ಕಾರ್ಯ ನಿಲ್ಲಿಸಿ ಮಧು ಜಿ.ಮಾದೇಗೌಡರು ವಿಜೇತರಾಗಿದ್ದಾರೆಂದು ಮಧ್ಯಾಹ್ನ ಸುಮಾರು ೧.೩೦ ಗಂಟೆ ವೇಳೆಗೆ ಅಧಿಕೃತವಾಗಿ ಫಲಿತಾಂಶ ಘೋಷಿಸಿ, ವಿಜೇತ ಅಭ್ಯರ್ಥಿಗೆ ಪ್ರಮಾಣ ಪತ್ರವನ್ನು ನೀಡಿದರು.

ಬುಧವಾರ ಬೆಳಗ್ಗೆ ೮ ಗಂಟೆಗೆ ಆರಂಭವಾದ ಮತ ಎಣ ಕೆ ಪ್ರಕ್ರಿಯೆ ಗುರುವಾರ ಮಧ್ಯಾಹ್ನ ೨ ಗಂಟೆಗೆ ಮುಕ್ತಾಯಗೊಂಡಿತು. ೩೦ ಗಂಟೆಗಳ ಕಾಲ ನಿರಂತರ ಮತ ಎಣ ಕೆ ನಡೆದದ್ದು ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಇತಿಹಾಸದಲ್ಲಿ ಇದೇ ಮೊದಲು ಎಂದು ಜನಪ್ರತಿನಿಧಿಗಳು ಮಾತನಾಡಿಕೊಳ್ಳುತ್ತಿದ್ದರು.

ಅಧಿಕೃತ ಫಲಿತಾಂಶದAತೆ ಕಾಂಗ್ರೆಸ್‌ನ ಮಧು ಜಿ.ಮಾದೇಗೌಡರು ೪೬,೦೮೨ ಮತ ಗಳಿಸಿ ಜಯಶೀಲರಾದರೆ, ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಮೈ.ವಿ.ರವಿಶಂಕರ್ ೩೩,೮೭೮ ಮತ ಪಡೆದು ಎರಡನೇ ಸ್ಥಾನ ಗಳಿಸಿದರೆ, ಜೆಡಿಎಸ್ ಅಭ್ಯರ್ಥಿ ಹೆಚ್.ಕೆ.ರಾಮು ೧೯,೬೩೦ ಮತಗಳಿಗೆ ತೃಪ್ತಿ ಪಟ್ಟುಕೊಂಡು ೩ನೇ ಸ್ಥಾನಕ್ಕೆ ದೂಡಲ್ಪಟ್ಟಿದ್ದಾರೆ. ಇನ್ನುಳಿದಂತೆ ರೈತ ಸಂಘ ಬೆಂಬಲಿತ ಪ್ರಸನ್ನ ಎನ್.ಗೌಡ ೭,೫೮೭ ಮತ ಪಡೆದು ನಾಲ್ಕನೇ ಸ್ಥಾನ ಗಳಿಸಿದರೆ, ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದು, ಪಕ್ಷೇತರರಾಗಿ ಸ್ಪರ್ಧಿಸಿದ್ದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಹಿಂದಿನ ಆಪ್ತ ಸಹಾಯಕ ಎನ್.ಎಸ್.ವಿನಯ್ ೩,೮೬೪ ಮತಗಳೊಂದಿಗೆ ಐದನೇ ಸ್ಥಾನ ಪಡೆದಿದ್ದಾರೆ. ಎಸ್‌ಡಿಪಿಐನ ರಫತುಲ್ಲಾ ಖಾನ್ ೭೮೮, ವಾಟಾಳ್ ನಾಗರಾಜ್ ೫೧೬, ಎನ್.ವೀರಭದ್ರಸ್ವಾಮಿ ೯೭, ಡಾ. ಅರುಣ್‌ಕುಮಾರ್ ಜೆ.ಚಿಕ್ಕ ಗಂಡಸಿ ೪೪, ಕಾವ್ಯಶ್ರೀ ಬೀರೇಶ ೯೮, ಡಾ. ಬಿ.ಹೆಚ್. ಚೆನ್ನಕೇಶವಮೂರ್ತಿ ೨,೮೩೬, ಡಾ. ಪುಟ್ಟಸ್ವಾಮಿ ೧೨೦, ಕೆ.ಪಿ.ಪ್ರಸನ್ನಕುಮಾರ್ ೭೧೦, ಕಂದಳ್ಳಿ ಮಹೇಶ ೩೨೩, ಡಾ. ಜೆ.ಸಿ.ರವೀಂದ್ರ ೨೨೨, ಎನ್.ರಾಜೇಂದ್ರ ಸಿಂಗ್ ಬಾಬು ಪಾಂಡವಪುರ ೨೨, ಎಸ್.ರಾಮು ೧೮೬, ಡಾ. ಹೆಚ್.ಎಲ್.ವೆಂಕಟೇಶ ೪೨ ಹಾಗೂ ಹೆಚ್.ಪಿ.ಸುಜಾತ ಅವರು ೭೮ ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ.

ಫಲಿತಾಂಶ ಘೋಷಣೆಯಾಗುತ್ತಿದ್ದಂತೆಯೇ ಎಣ ಕಾ ಕೇಂದ್ರದ ಹೊರಗೆ ಕಾಂಗ್ರೆಸ್ ಕಾರ್ಯಕರ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತು. ಪ್ರಮಾಣ ಪತ್ರ ಪಡೆದು ಹೊರ ಬರುತ್ತಿದ್ದಂತೆಯೇ ಮಧು ಮಾದೇಗೌಡರಿಗೆ ಜಯಘೋಷ ಕೂಗಿ ಸಂಭ್ರಮಿಸಿ ದರು. ಸುಮಾರು ೩೦ ತಾಸು ನಿರಂತರ ಮತ ಎಣ ಕೆಯ ಮೇಲ್ವಿಚಾರಣೆ ನಡೆಸಿದ ಚುನಾವಣಾ ವೀಕ್ಷಕ ಪೊನ್ನುರಾಜ್ ಸಮ್ಮುಖದಲ್ಲಿ ಮಧ್ಯಾಹ್ನದ ನಂತರ ಮತ ಎಣ ಕಾ ಪ್ರಕ್ರಿಯೆ ಮುಕ್ತಾಯವಾಯಿತು. ಮತ ಎಣ ಕಾ ಪ್ರಕ್ರಿಯೆಗೆ ಮೈಸೂರು, ಮಂಡ್ಯ, ಹಾಸನ ಹಾಗೂ ಚಾಮರಾಜನಗರ ಜಿಲ್ಲಾಧಿಕಾರಿಗಳು, ಹೆಚ್ಚುವರಿ ಜಿಲ್ಲಾಧಿಕಾರಿಗಳು ಸಾಥ್ ನೀಡಿದರು.

ಯಾರೂ ಹಣ ಕೊಟ್ಟಿಲ್ಲ! ಸರ್ಕಾರಿ ಕೆಲ್ಸ ಕೊಡಿ, ಇಲ್ಲ ಅಂದ್ರೆ ಕೊಳವೆ ಬಾವಿ ತೋಡಿಸಿಕೊಡಿ!!: ತಾಲೂಕು ಜೆಡಿಎಸ್ ಅಧ್ಯಕ್ಷರನ್ನು ಬದಲಿಸಿ!!!
ಮೈಸೂರು: ದಕ್ಷಿಣ ಪದವೀಧರ ಕ್ಷೇತ್ರದಿಂದ ವಿಧಾನಪರಿಷತ್ತಿಗೆ ನಡೆದ ಚುನಾವಣೆಯ ಮತಪತ್ರದಲ್ಲಿ ತಮಗಿಚ್ಛೆ ಬಂದ ಅಭ್ಯರ್ಥಿ ಗಳ ಪರ ಮತ ಹಾಕುವ ಬದಲು ಅಭ್ಯರ್ಥಿಗಳು, ಸರ್ಕಾರ ಹಾಗೂ ಪಕ್ಷಗಳ ಮುಖಂಡರಿಗೆ ಕುಚೋದ್ಯ ಸಲಹೆ ಪತ್ರ ಬರೆದು ತಮ್ಮ ಹಕ್ಕು ಹಾಳು ಮಾಡಿರುವುದು ಬೆಳಕಿಗೆ ಬಂದಿದೆ.

ಮತ ಎಣ ಕೆ ವೇಳೆ ಇಂತಹ ಹಲವು ಪತ್ರಗಳು ಸಿಕ್ಕಿದ್ದು, `ನಾನು ಎಂ.ಎ., ಬಿಎಡ್ ಮಾಡಿದ್ದೇನೆ, ಕೆಲಸವಿಲ್ಲ. ಸರ್ಕಾರಿ ಕೆಲಸ ಕೊಡಿ, ಇಲ್ಲ ಅಂದ್ರೆ ನಮ್ಮ ಜಮೀನಿನಲ್ಲಿ ಕೊಳವೆ ಬಾವಿ ತೋಡಿಸಿಕೊಡಿ. ನಮ್ಮಪ್ಪನ ಜಮೀನಲ್ಲಿ ಬೇಸಾಯವನ್ನಾದರೂ ಮಾಡುತ್ತೇನೆ’ ಎಂದು ಪದವೀಧರ ಮತದಾರನೋರ್ವ ಮತಪತ್ರದಲ್ಲಿ ಬರೆದಿದ್ದಾನೆ. `ಯಾರೂ ದುಡ್ಡು ಕೊಟ್ಟಿಲ್ಲ’ ಎಂದು ಅಭ್ಯರ್ಥಿಗಳ ವಿರುದ್ಧ ಕಿಡಿಕಾರಿರುವ ಮತದಾರನೋರ್ವ, ಪೆಟ್ರೋಲ್, ರಸಗೊಬ್ಬರ ಬೆಲೆ ಇಳಿಸುವಂತೆ ಮನವಿ ಮಾಡಿದ್ದಾನೆ. ಮತ್ತೋರ್ವ, ನನಗೆ ಜನಪ್ರತಿನಿಧಿಗಳ ಮೇಲೆ ವಿಶ್ವಾಸವಿಲ್ಲದ ಕಾರಣ ಸಂಖ್ಯೆ ನಮೂದಿಸಿಲ್ಲ. ಸರ್ಕಾರವೂ ನಮ್ಮ ನೆರವಿಗೆ ಬರುತ್ತಿಲ್ಲ ಎಂದು ಮತಪತ್ರದಲ್ಲಿ ಬರೆದು ಪೆಟ್ಟಿಗೆಗೆ ಹಾಕಿರುವುದೂ ಬೆಳಕಿಗೆ ಬಂದಿದೆ.

ಅಧ್ಯಕ್ಷರನ್ನು ಬದಲಿಸಿ: ಕೆ.ಆರ್.ಪೇಟೆ ತಾಲೂಕು ಜೆಡಿಎಸ್ ಅಧ್ಯಕ್ಷ ಜಾನಕಿ ರಾಮ್‌ರನ್ನು ಬದಲಿಸಬೇಕು. ಆತ ಸಚಿವ ನಾರಾಯಣಗೌಡರ ಬೆಂಬಲಿಗನಾಗಿದ್ದು, ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಿದ್ದಾನೆ. ಅದರಿಂದ ಪಕ್ಷಕ್ಕೆ ತೊಂದರೆಯಾಗುತ್ತಿದೆ ಎಂದು ಪದವೀಧರ ನೋರ್ವ ಮತಪತ್ರದ ಹಿಂಬದಿ ಖಾಲಿ ಪುಟದಲ್ಲಿ ಪತ್ರ ಬರೆದಿದ್ದಾನೆ. ಈ ರೀತಿ ತಮ್ಮ ಆಕ್ರೋಶ, ಅನಿಸಿಕೆ, ಅಭಿಪ್ರಾಯ ಬರೆದಿರುವ ಮತ ಪತ್ರಗಳನ್ನು ಅಧಿಕಾರಿಗಳು ತಿರಸ್ಕೃತ ಮತಗಳೆಂದು ತೀರ್ಮಾನಿಸಿದರು.

Translate »