ಪ್ರಧಾನಿ ಮೋದಿ ಮೈಸೂರು ಭೇಟಿ ಹಿನ್ನೆಲೆ ಎಸ್‌ಪಿಜಿ ಅಧಿಕಾರಿಗಳಿಂದ ಭದ್ರತಾ ವ್ಯವಸ್ಥೆ ಪರಿಶೀಲನೆ
ಮೈಸೂರು

ಪ್ರಧಾನಿ ಮೋದಿ ಮೈಸೂರು ಭೇಟಿ ಹಿನ್ನೆಲೆ ಎಸ್‌ಪಿಜಿ ಅಧಿಕಾರಿಗಳಿಂದ ಭದ್ರತಾ ವ್ಯವಸ್ಥೆ ಪರಿಶೀಲನೆ

June 18, 2022

ಮೈಸೂರು, ಜೂ.೧೭(ಆರ್‌ಕೆ)-ಜೂನ್ ೨೦ ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೈಸೂರಿಗೆ ಆಗಮಿಸು ತ್ತಿರುವುದರಿಂದ ವಿಶೇಷ ಭದ್ರತಾ ತಂಡ (SPಉ)ದ ಹಿರಿಯ ಅಧಿಕಾರಿಗಳು ಇಂದಿಲ್ಲಿ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಿದರು.

ಇಂದು ಬೆಳಗ್ಗೆ ೧೦ ಗಂಟೆಗೆ ಮೈಸೂರಿಗೆ ಆಗಮಿಸಿದ ಎಸ್‌ಪಿಜಿಯ ೭ ಅಧಿಕಾರಿ ಗಳ ತಂಡವು, ಅರಮನೆ ಆವರಣಕ್ಕೆ ತೆರಳಿ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ನಗರ ಪೊಲೀಸ್ ಕಮೀಷ್ನರ್ ಡಾ. ಚಂದ್ರಗುಪ್ತ, ಎಸ್ಪಿ ಆರ್.ಚೇತನ್, ಡಿಸಿಪಿ ಗಳು, ರಾಜ್ಯ ಗುಪ್ತ ದಳದ ಅಧಿಕಾರಿ ಗಳೊಂದಿಗೆ ಸ್ಥಳ ಪರಿಶೀಲಿಸಿದರು.

ಜೂನ್ ೨೧ರಂದು ಬೆಳಗ್ಗೆ ಅಂತರ ರಾಷ್ಟಿçÃಯ ಯೋಗ ದಿನಾಚರಣೆ ಕಾರ್ಯ ಕ್ರಮಕ್ಕೆ ಪ್ರಧಾನಿಗಳು ಆಗಮಿಸುವ ಪ್ರವೇಶ ದ್ವಾರ, ನಿರ್ಗಮನ, ವೇದಿಕೆ, ಯೋಗಾ ಸನಕ್ಕೆ ಸಿದ್ಧತೆ, ಯೋಗ ಪಟುಗಳ ಆಗಮನ- ನಿರ್ಗಮನ ದ್ವಾರಗಳು, ಜನರಿಗೆ ಉಪಹಾರ ವ್ಯವಸ್ಥೆಗೆ ನಿಗದಿಪಡಿಸಿರುವ ಸ್ಥಳಗಳನ್ನು ಎಸ್‌ಪಿಜಿ ಅಧಿಕಾರಿಗಳು ವೀಕ್ಷಿಸಿದರು.ಪ್ರಧಾನಿಗಳು ಪಾಲ್ಗೊಳ್ಳುವ ಕಾರ್ಯ ಕ್ರಮದ ವೇದಿಕೆಯ
ವಿಸ್ತೀರ್ಣ, ಮೆಟ್ಟಿಲುಗಳು, ಶೆಲ್ಟರ್, ಧ್ವನಿವರ್ಧಕಗಳ ವಿನ್ಯಾಸ, ಅರಮನೆ ಕೋಟೆಯ ಎತ್ತರ, ದ್ವಾರಗಳ ಸುಭದ್ರತೆ, ವಾಹನ ನಿಲುಗಡೆ ಸ್ಥಳಗಳ ಬಗ್ಗೆಯೂ ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಕಲೆ ಹಾಕಿದರು. ನಂತರ ದೊಡ್ಡಕೆರೆ ಮೈದಾನದ ದಸರಾ ವಸ್ತುಪ್ರದರ್ಶನ ಮೈದಾನಕ್ಕೆ ಭೇಟಿ ನೀಡಿದ ಅವರು, ಯೋಗ ವಸ್ತುಪ್ರದರ್ಶನವನ್ನು ನರೇಂದ್ರ ಮೋದಿ ಅವರು ವೀಕ್ಷಿಸಲು ನಿಗದಿಯಾಗಿರುವ ಕಾರ್ಯಕ್ರಮಕ್ಕೆ ಮಾಡಿರುವ ವ್ಯವಸ್ಥೆಯನ್ನು ವೀಕ್ಷಿಸಿದರು.

ಪ್ರಧಾನಿಗಳ ಭೇಟಿ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಭದ್ರತೆ, ಮುಂಜಾಗ್ರತಾ ಕ್ರಮ, ಸಂಚರಿಸುವ ಮಾರ್ಗಗಳಲ್ಲಿ ಸುರಕ್ಷತೆ, ವಾಹನ ಸಂಚಾರ ಸ್ಥಗಿತಗೊಳಿಸಿ ಜಿûÃರೋ ಟ್ರಾಫಿಕ್ ಮಾಡುವುದು, ವಾಸ್ತವ್ಯ ಹೂಡುವ ಹೋಟೆಲ್‌ನಲ್ಲಿ ಎರಡು ದಿನ ಮುಂಚಿತವಾಗಿ ಗ್ರಾಹಕರನ್ನು ತೆರವುಗೊಳಿಸಿ ಸ್ವಚ್ಛ ಮಾಡಿ ಪೊಲೀಸ್ ಭದ್ರತೆ ಒದಗಿಸುವುದು, ವಿಶೇಷ ವಿಮಾನದಲ್ಲಿ ಆಗಮಿಸುವ ಮಂಡಕಳ್ಳಿ ವಿಮಾನ ನಿಲ್ದಾಣ, ಕಾರಿನಲ್ಲಿ ತೆರಳುವ ನಂಜನಗೂಡು ರಸ್ತೆಯಲ್ಲಿ ಅಗತ್ಯ ಸುರಕ್ಷತಾ ಕ್ರಮ ಕೈಗೊಳ್ಳುವ ಕುರಿತಂತೆಯೂ ಎಸ್‌ಪಿಜಿ ತಂಡದ ಅಧಿಕಾರಿಗಳು ಇಂದು ಜಿಲ್ಲಾಡಳಿತ ಮತ್ತು ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಲಹೆ-ಸೂಚನೆಗಳನ್ನು ನೀಡಿದರು. ನಾಳೆ (ಜೂ.೧೮) ೨೦ ಮಂದಿ ಎಸ್‌ಪಿಜಿ ಅಧಿಕಾರಿಗಳು, ಜೂ.೧೯ರಂದು ೨೦ ಮಂದಿ ಎಸ್‌ಪಿಜಿ ಹಿರಿಯ ಅಧಿಕಾರಿಗಳ ತಂಡವು ಮೈಸೂರಿಗೆ ಆಗಮಿಸಲಿದ್ದು, ಪ್ರಧಾನಿಗಳು ಬಂದು, ಹಿಂದಿರುಗುವವರೆಗೂ ಈ ೪೭ ಅಧಿಕಾರಿಗಳು ಮೈಸೂರಿನಲ್ಲೇ ಬೀಡು ಬಿಟ್ಟು, ಭದ್ರತಾ ವ್ಯವಸ್ಥೆಯ ಮೇಲೆ ನಿರಂತರ ನಿಗಾ ವಹಿಸಿ ಸ್ಥಳೀಯ ಅಧಿಕಾರಿಗಳಿಗೆ ಕ್ಷಣ ಕ್ಷಣವೂ ಸಲಹೆ-ಸೂಚನೆಗಳನ್ನು ನೀಡಲಿದ್ದಾರೆ. ಚೆಸ್ಕಾಂ, ಲೋಕೋಪಯೋಗಿ, ಆಯುಷ್ ಇಲಾಖೆ, ಮುಡಾ, ಪಾಲಿಕೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಎಸ್‌ಪಿಜಿ ಅಧಿಕಾರಿಗಳ ಪರಿಶೀಲನೆ ವೇಳೆ ಹಾಜರಿದ್ದರು. ನಾಳೆ (ಜೂ.೧೮) ಅವರು ಚಾಮುಂಡಿಬೆಟ್ಟ, ಸುತ್ತೂರು ಮಠ, ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ, ಮಂಡಕಳ್ಳಿ ವಿಮಾನ ನಿಲ್ದಾಣ, ಪ್ರಧಾನಮಂತ್ರಿಗಳು ಸಂಚರಿಸುವ ಮಾರ್ಗ ಗಳಲ್ಲೂ ಭದ್ರತಾ ವ್ಯವಸ್ಥೆಯ ಪರಿಶೀಲನೆ ನಡೆಸುವರು ಎಂದು ಮೂಲಗಳು ತಿಳಿಸಿವೆ.

 

Translate »