ಪೆಡ್ಲರ್‍ಗೆ ಸಹಕರಿಸಿದ ಸಿಸಿಬಿ ಎಸಿಪಿ ಮುದವಿ ಅಮಾನತು
ಮೈಸೂರು

ಪೆಡ್ಲರ್‍ಗೆ ಸಹಕರಿಸಿದ ಸಿಸಿಬಿ ಎಸಿಪಿ ಮುದವಿ ಅಮಾನತು

September 24, 2020

ಬೆಂಗಳೂರು, ಸೆ.23-ಸ್ಯಾಂಡಲ್‍ವುಡ್‍ಗೆ ಡ್ರಗ್ಸ್ ಜಾಲದ ನಂಟು ಪ್ರಕರಣದಲ್ಲಿ ಆರೋಪಿಗಳಿಗೆ ಸಹಕರಿಸುತ್ತಿದ್ದ ಆರೋಪದ ಮೇಲೆ ಸಿಸಿಬಿ ಎಸಿಪಿ ಮುದವಿ ಮತ್ತು ಮುಖ್ಯ ಪೇದೆ ಮಲ್ಲಿಕಾರ್ಜುನ್ ಎಂಬುವರನ್ನು ಸೇವೆಯಿಂದ ಅಮಾನತು ಮಾಡಿ ಪೆÇಲೀಸ್ ಇಲಾಖೆ ಆದೇಶಿಸಿದೆ. ಡ್ರಗ್ಸ್ ಕೇಸಿನಲ್ಲಿ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ, ವಿರೇನ್ ಖನ್ನಾ ಸೇರಿದಂತೆ 14ಕ್ಕೂ ಅಧಿಕ ಆರೋಪಿಗಳನ್ನು ಬಂಧಿಸಲಾಗಿದೆ. ಸಿಸಿಬಿ ಪೆÇಲೀಸರು ತನಿಖೆ ನಡೆಸುತ್ತಿದ್ದ ಸಮಯದಲ್ಲಿಯೇ ಬಂಧಿತ ಆರೋಪಿ ವಿರೇನ್ ಖನ್ನಾಗೆ ಮೊಬೈಲ್ ಕೊಟ್ಟು ತನಿಖೆಗೆ ಅಡ್ಡಿ ಉಂಟು ಮಾಡಿದ್ದ ಆರೋಪ ಎಸಿಪಿ ಮುದವಿ ವಿರುದ್ಧ ಕೇಳಿ ಬಂದಿತ್ತು. ಅಲ್ಲದೆ, ವಿರೇನ್ ಖನ್ನಾಗೆ ಕೇಸ್‍ನಲ್ಲಿ ತಪ್ಪಿಸಲು ಸಹಕಾರ ನೀಡು ವುದಾಗಿ ಭರವಸೆ ಕೊಟ್ಟು 50 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು.

ಇದನ್ನು ಗಂಭೀರವಾಗಿ ಪರಿಗಣಿಸಿದ ಜಂಟಿ ಪೆÇಲೀಸ್ ಆಯುಕ್ತ(ಅಪರಾಧ) ಸಂದೀಪ್ ಪಾಟೀಲ್, ಈ ಕುರಿತು ಮೇಲಾಧಿಕಾರಿಗಳಿಗೆ ವರದಿ ನೀಡಿದ್ದರು. ವರದಿಯನ್ನು ಪರಿಶೀಲನೆ ನಡೆಸಿದ ಪೆÇಲೀಸ್ ಕಮಿಷನರ್ ಕಮಲ್ ಪಂತ್, ರಾಜ್ಯ ಪೆÇಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಮತ್ತು ಗೃಹ ಇಲಾಖೆಗೆ ವರದಿ ಸಲ್ಲಿಸಿದ್ದರು. ಈ ಮೇರೆಗೆ ಪೆÇಲೀಸ್ ಇಲಾಖೆಗೆ ಬುಧವಾರ ಎಸಿಪಿ ಮುದವಿ ಅವರನ್ನು ಸೇವೆಯಿಂದ ಅಮಾನತು ಮಾಡಿ ಆದೇಶಿಸಿದೆ. ಹಿರಿಯ ಎಸಿಪಿ ಆಗಿದ್ದು, ಇನ್ನೂ ನಿವೃತ್ತಿಗೆ 2 ವರ್ಷ ಮಾತ್ರ ಬಾಕಿ ಇತ್ತು. ಸ್ಯಾಂಡಲ್‍ವುಡ್ ಡ್ರಗ್ಸ್ ಕೇಸಿನಲ್ಲಿ ಪೆÇಲೀಸ್ ಅಧಿಕಾರಿಗಳು ಕೈ ಜೋಡಿಸಿರುವ ಬಗ್ಗೆ ಆರೋಪ ಕೇಳಿಬಂದಿತ್ತು. ಮೊದಲ ವಿಕೇಟ್ ಆಗಿ ಮುದವಿ ಅಮಾನತು ಆಗಿದ್ದು, ಮತ್ತಷ್ಟು ಮಂದಿಗೆ ಕಂಟಕವಾಗುವ ಸಾಧ್ಯತೆ ಇದೆ.

Translate »