ಪಾದಯಾತ್ರೆ ಮೂಲಕ ಶಾಸಕ ನಾಗೇಂದ್ರರಿಂದ ನಿವಾಸಿಗಳಿಂದ ಅಹವಾಲು ಸ್ವೀಕಾರ
ಮೈಸೂರು

ಪಾದಯಾತ್ರೆ ಮೂಲಕ ಶಾಸಕ ನಾಗೇಂದ್ರರಿಂದ ನಿವಾಸಿಗಳಿಂದ ಅಹವಾಲು ಸ್ವೀಕಾರ

January 8, 2022

ಮೈಸೂರು, ಜ.7- ಮೈಸೂರಿನ ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಶುಕ್ರವಾರ ಕ್ಷೇತ್ರದಲ್ಲಿ ಪಾದಯಾತ್ರೆ ಮೂಲಕ ಜನರ ಸಮಸ್ಯೆ ಆಲಿಸುವುದರ ಜೊತೆಗೆ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲಿಸಿದರು.

ತ್ರಿನೇತ್ರ ವೃತ್ತದ ಚಾಮುಂಡೇಶ್ವರಿ ದೇವಸ್ಥಾನದ ಬಳಿಯಿಂದ ಪಾದಯಾತ್ರೆ ಆರಂಭಿಸಿದ ಶಾಸಕ ಎಲ್.ನಾಗೇಂದ್ರ, ಮಹದೇಶ್ವರ ಬಡಾವಣೆಯಲ್ಲಿ ರಾಜ್ಯ ಸರ್ಕಾರದ ಎಸ್‍ಎಫ್‍ಸಿ ವಿಶೇಷ ಅನುದಾನ 1.50 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾರ್ಯ ನಡೆಸಲಿರುವ ರಸ್ತೆಗಳ ಪರಿಶೀಲಿಸಿ, ಕೂಡಲೇ ಅಂದಾಜು ಪಟ್ಟಿ ತಯಾರಿಸಿ ಅನು ಮೋದನೆ ಪಡೆದು ಕಾಮಗಾರಿ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ಅನು ದಾನದ 34 ಲಕ್ಷ ರೂ. ವೆಚ್ಚದಲ್ಲಿ ಕೈಗೊಂಡಿರುವ 3,4 ಹಾಗೂ 6ನೇ ಅಡ್ಡರಸ್ತೆಗಳಿಗೆ ಡಾಂಬರೀ ಕರಣ, ಕಿಡಗಣಮ್ಮ ಬಡಾವಣೆಗೆ ಚರಂಡಿ ಮತ್ತು ಡೆಕ್ ನಿರ್ಮಾಣ, ಕೊಡಗು ಗೌಡ ಸಮಾಜದ ಕಟ್ಟಡ ನಿರ್ಮಾಣ, ಸ್ನೇಹಸಿಂಧು ಟ್ರಸ್ಟ್, ಇನ್ನರ್ ವೀಲ್ ಕ್ಲಬ್ ಕಟ್ಟಡದ ನಿರ್ಮಾಣ ಕಾಮಗಾರಿ ಮತ್ತು ಆರಾಧನಾ ಯೋಜನೆಯಡಿ ಕೈಗೊಂಡಿ ರುವ ದೇವಸ್ಥಾನಗಳ ಅಭಿವೃದ್ದಿ ಕಾಮಗಾರಿ ಗಳನ್ನು ಪರಿಶೀಲನೆ ನಡೆಸಿದರು. ಮಹದೇಶ್ವರ ಬಡಾವಣೆಯ ಕೆಲವು ಅಡ್ಡ ರಸ್ತೆಗಳಲ್ಲಿನ ಕುಡಿಯುವ ನೀರು ಸರಬರಾಜು ಪೈಪ್‍ಲೈನ್ ಅವ್ಯವಸ್ಥೆಯನ್ನು ಸರಿಪಡಿಸುವಂತೆ ವಾಣಿ ವಿಲಾಸ ನೀರು ಸರಬರಾಜು ವಿಭಾಗದ ಅಧಿಕಾರಿಗಳಿಗೆ ಇದೇ ವೇಳೆ ಸೂಚನೆ ನೀಡಿದರು.

ಮಹಾನಗರ ಪಾಲಿಕೆಯ ವತಿಯಿಂದ ಮನೆ ಮನೆಯಿಂದ ತ್ಯಾಜ್ಯ ಸಂಗ್ರಹಿಸುವ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ. ಪ್ರತಿನಿತ್ಯ ಕಸ ಸಂಗ್ರಹಿಸಲು ಬರುವುದಿಲ್ಲ. ಕಸವನ್ನು ಮನೆಯಲ್ಲಿ ಇಟ್ಟುಕೊಳ್ಳುವುದೂ ಕಷ್ಟ, ಹೊರಗೂ ಎಸೆಯು ವಂತಿಲ್ಲ ಎಂದು ಸಾರ್ವಜನಿಕರು ದೂರಿದ್ದರಿಂದ ಸ್ಥಳದಲ್ಲಿದ್ದ ಆರೋಗ್ಯ ನಿರೀಕ್ಷಕರಿಗೆ ಕ್ರಮಕ್ಕೆ ಸೂಚಿಸಿದರು. ಅನೇಕ ಚರಂಡಿಗಳಲ್ಲಿ ಹೂಳು ತುಂಬಿಕೊಂಡಿರುವುದನ್ನು ಗಮನಿಸಿ, ಕೂಡಲೇ ಸ್ವಚ್ಛಗೊಳಿಸಿ, ನೀರು ಸರಾಗವಾಗಿ ಹರಿಯಲು ಕ್ರಮವಹಿಸುವಂತೆ ಅಭಿಯಂತರರಿಗೆ ತಿಳಿಸಿದರು. ಮಹದೇಶ್ವರ ಬಡಾವಣೆ ಡೋಂಗ್ರಿ ಕಾಲೋನಿಯ ನರ್ಮ್ ಕಾಂಪ್ಲೆಕ್ಸ್ ಮೇಲಿನ ಮಹಡಿಯ ತಾರಸಿ ಸೋರು ವುದಾಗಿ ನಿವಾಸಿಗಳು ದೂರಿದರು. ಈ ವೇಳೆ ಶಾಸಕ ನಾಗೇಂದ್ರ, ಕೂಡಲೇ ಪರಿಶೀಲನೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಕೊಳಚೆ ನಿರ್ಮೂ ಲನಾ ಮಂಡಳಿ ಅಧಿಕಾರಿಗಳಿಗೆ ಹೇಳಿದರು.

ರೈಲ್ವೆ ಬಡಾವಣೆಯ ಉದ್ಯಾನವನದಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವುದಾಗಿ ಸ್ಥಳೀಯರು ದೂರಿದ್ದರಿಂದ ಪೊಲೀಸ್ ಗಸ್ತು ಹೆಚ್ಚಿಸುವುದರ ಜೊತೆಗೆ ಉದ್ಯಾನಕ್ಕೆ ಓರ್ವ ಸಿಬ್ಬಂದಿಯನ್ನು ನಿಯೋಜಿಸಿ, ಅನೈತಿಕ ಚಟು ವಟಿಕೆಗಳ ನಿಯಂತ್ರಿಸುವಂತೆ ಪೊಲೀಸ್ ಅಧಿಕಾರಿ ಗಳಿಗೆ ತಿಳಿಸಿದರು. ಈಗಾಗಲೇ ಅನುಮೋದನೆ ಗೊಂಡಿರುವ ರಸ್ತೆ ಅಭಿವೃದ್ದಿ ಕಾಮಗಾರಿಗಳನ್ನು ಶೀಘ್ರವಾಗಿ ಆರಂಭಿಸಿ, ಸಾರ್ವಜನಿಕರಿಗೆ ತೊಂದರೆಯಾಗದಂತೆ ವೇಗವಾಗಿ ಪೂರ್ಣಗೊಳಿ ಸಬೇಕೆಂದು ಲೋಕೋಪಯೋಗಿ ಇಲಾಖೆ ಅಧಿ ಕಾರಿಗಳಿಗೆ ಶಾಸಕ ಎಲ್.ನಾಗೇಂದ್ರ ಸೂಚಿಸಿದರು.

ಈ ವೇಳೆ ಪಾಲಿಕೆ ಸದಸ್ಯರಾದ ಕೆ.ವಿ.ಶ್ರೀಧರ್, ಚಿಕ್ಕವೆಂಕಟು, ನಗರಪಾಲಿಕೆ ಅಭಿವೃದ್ದಿ ಉಪ ಆಯುಕ್ತ ಮಹೇಶ್, ವಲಯ ಕಚೇರಿ 5ರ ಸಹಾಯಕ ಆಯುಕ್ತ ಕೃಷ್ಣ, ಅಭಿವೃದ್ದಿ ಅಧಿಕಾರಿ ಮನುಗೌಡ, ಬಿಜೆಪಿ ಕ್ಷೇತ್ರದ ಅಧ್ಯಕ್ಷ ಸೋಮ ಶೇಖರರಾಜು, ಬಿಎಲ್‍ಎ 1 ದಿನೇಶ್ ಗೌಡ, ಪ್ರಧಾನ ಕಾರ್ಯದರ್ಶಿ ಪುನೀತ್ ಗೌಡ, ಯುವ ಮೋರ್ಚಾ ಅಧ್ಯಕ್ಷ ಸಚಿನ್, ಮಹಿಳಾ ಮೋರ್ಚಾದ ತನುಜಾ ಮಹೇಶ್, ವಾರ್ಡ್ ನಂಬರ್ 3ರ ಅಧ್ಯಕ್ಷ ಶ್ರೀನಾಥ್, ಮುಖಂಡರಾದ ಶಿವರಾಮ. ಗೋಪಿ, ನೀಲಕಂಠ, ಶೋಭಾ, ಪ್ರೇಮ, ಪದ್ಮ, ಪದ್ಮಶ್ರೀ, ಸತೀಶ್ ಚಂದ್ರ, ಸೋಮಣ್ಣ, ನಿಶಾಂತ್, ಪ್ರತಾಪ್, ಸುನಿತಾ, ಮಹೇಶ್ ಕುದೇರು, ಶ್ರೀನಿವಾಸ್, ಅಭಿ, ನಾಗರತ್ನ ಸೇರಿದಂತೆ ಹಲವು ಬಿಜೆಪಿ ಕಾರ್ಯಕರ್ತರು, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Translate »