ಕೆರೆ, ರಾಜಕಾಲುವೆ ಒತ್ತುವರಿ ತೆರವಿಗೆ ಕ್ರಮ
ಮೈಸೂರು

ಕೆರೆ, ರಾಜಕಾಲುವೆ ಒತ್ತುವರಿ ತೆರವಿಗೆ ಕ್ರಮ

October 27, 2021

ಮೈಸೂರು, ಅ. ೨೬(ಆರ್‌ಕೆ)- ಮೈಸೂರು ನಗರದಲ್ಲಿ ಒತ್ತುವರಿಯಾಗಿರುವ ಕೆರೆ, ರಾಜಕಾಲುವೆ ಬಗ್ಗೆ ಪರಿಶೀಲಿಸಿ ತೆರವುಗೊಳಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ತಿಳಿಸಿದ್ದಾರೆ. ಆಗಾಗ ಕೆರೆ ಹೂಳು ತೆಗೆದು ಪುನರುಜ್ಜೀವನಗೊಳಿ ಸದಿರುವುದು, ಒತ್ತುವರಿ ಮಾಡಿ ಕಟ್ಟಡ ನಿರ್ಮಿಸಿರುವುದರಿಂದ ನಿರಂತ ರವಾಗಿ ಭಾರೀ ಮಳೆ ಸುರಿದ ಕಾರಣ ಭಾರೀ ಪ್ರಮಾಣದ ನೀರು ಹರಿಯು ತ್ತಿದೆ. ನೀರು ಸರಾಗವಾಗಿ ಹರಿದು ಹೋಗಲೆಂದು ನಿರ್ಮಿಸಿದ್ದ ರಾಜ ಕಾಲುವೆಗಳನ್ನು ಒತ್ತುವರಿ ಮಾಡಿರು ವುದರಿಂದ ಬಡಾವಣೆಗಳು ಜಲಾವೃತ ವಾಗುತ್ತಿರುವುದು ನನ್ನ ಗಮನಕ್ಕೂ ಬಂದಿದೆ. ಪ್ರಮುಖವಾಗಿ ಮೈಸೂರು ನಗರದಲ್ಲಿಇಂತಹ ಅನಾಹುತಗಳಾಗುತ್ತಿರುವುದು ಮುಂದೆ ದೊಡ್ಡ ಅವಘಡಗಳಿಗೂ ಕಾರಣ ವಾಗಲಿದೆ ಎಂದು ಅವರು ತಿಳಿಸಿದರು. ಕೆರೆಗಳ ಹೂಳು ತೆಗೆದು ಪುನರುಜ್ಜೀವನ ಗೊಳಿಸುವಂತಹ ದೊಡ್ಡ ಯೋಜನೆಗಳಿಗೆ ಭಾರೀ ಅನುದಾನ ಬೇಕಾಗುತ್ತದೆ. ಆ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಮುಂದೆ ಕಾಮಗಾರಿ ನಡೆಸಲು ಕ್ರಮ ವಹಿಸಲಾಗುವುದು ಎಂದ ಡಾ.ಬಗಾದಿ ಗೌತಮ್, ಎಲ್ಲೆಲ್ಲಿ ಕೆರೆಗಳ ಒತ್ತುವರಿಯಾಗಿದೆ, ರಾಜಕಾಲುವೆ ಮುಚ್ಚಿ ಅದರ ಮೇಲೆ ಕಟ್ಟಡ ನಿರ್ಮಿಸಲಾಗಿದೆ ಎಂಬುದನ್ನು ಪರಿಶೀಲನೆ ಮಾಡಿಸಿ ವರದಿ ತರಿಸಿಕೊಳ್ಳುತ್ತೇನೆ ಎಂದರು. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ತಂದು ಸ್ಥಳೀಯ ಜನಪ್ರತಿನಿಧಿಗಳ ಸಹಕಾರದೊಂದಿಗೆ ಕೆರೆ, ರಾಜಕಾಲುವೆ ಒತ್ತುವರಿಯನ್ನು ತೆರವುಗೊಳಿಸಲಾಗುವುದು. ಇಲ್ಲದಿದ್ದರೆ ಮುಂದೆ ದೊಡ್ಡ ಮಳೆಯಾ ದಲ್ಲಿ ನೀರು ವಸತಿ ಬಡಾವಣೆಗಳಿಗೆ ನುಗ್ಗಿ ಅಪಾರ ಪ್ರಾಣ ಹಾನಿ, ಆಸ್ತಿ-ಪಾಸ್ತಿ ನಷ್ಟ ಉಂಟಾಗುವ ಅಪಾಯವಿದೆ ಎಂದು ಅವರು ತಿಳಿಸಿದರು. ಬೋಗಾದಿ ಕೆರೆ ಕೋಡಿ ಒಡೆದು ನೀರು ನುಗ್ಗಿರುವುದು, ಹಲವೆಡೆ ಚರಂಡಿ, ರಾಜಕಾಲುವೆಗಳು ತುಂಬಿ ನೀರು ನುಗ್ಗಿರುವುದು, ವಸತಿ ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿರುವುದು ನಮಗೆ ಪಾಠವಾದಂತಾಗಿದೆ. ಈಗಲೂ ಎಚ್ಚೆತ್ತುಕೊಳ್ಳದಿದ್ದಲ್ಲಿ ಮುಂದೆ ಭಾರೀ ಅನಾಹುತಗಳಾಗುತ್ತವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಸಂಬAಧಪಟ್ಟ ಅಧಿಕಾರಿಗಳಿಂದ ವರದಿ ತರಿಸಿಕೊಂಡು ಒತ್ತುವರಿಯಾಗಿರುವ ಕೆರೆ, ರಾಜಕಾಲುವೆ ಹಾಗೂ ಸರ್ಕಾರಿ ಜಾಗಗಳ ಗುರುತಿಸಿ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ತೆರವು ಕಾರ್ಯಾಚರಣೆ ಮಾಡಲಾಗುವುದು ಎಂದು ತಿಳಿಸಿದರು.

Translate »