ಬೋಗಾದಿ ಕೆರೆ ಕೋಡಿ ಒಡೆದು ಹೊಳೆಯಂತೆ ರಸ್ತೆಯಲ್ಲಿ ಹರಿದ ನೀರು
ಮೈಸೂರು

ಬೋಗಾದಿ ಕೆರೆ ಕೋಡಿ ಒಡೆದು ಹೊಳೆಯಂತೆ ರಸ್ತೆಯಲ್ಲಿ ಹರಿದ ನೀರು

October 27, 2021

ಮೈಸೂರು, ಅ. ೨೬(ಆರ್‌ಕೆ)- ಮೈಸೂರಲ್ಲಿ ಕಳೆದ ರಾತ್ರಿ ಸುರಿದ ಭಾರೀ ಮಳೆಯಿಂದ ಬೋಗಾದಿಯ ಮರಿಯಪ್ಪ ಕೆರೆ ಭರ್ತಿಯಾಗಿ ಅದರ ಕೋಡಿ ಒಡೆದು ನೀರು ಹೊಳೆಯಂತೆ ಬೋಗಾದಿ, ರಿಂಗ್ ರಸ್ತೆಯಲ್ಲಿ ಹರಿಯಿತು.

ರಿಂಗ್ ರಸ್ತೆಗೆ ಹೊಂದಿಕೊAಡAತಿರುವ ಕೆರೆಯ ಪಶ್ಚಿಮ ಹಾಗೂ ದಕ್ಷಿಣ ಭಾಗದಲ್ಲಿ ಕೋಡಿ ಒಡೆದ ಪರಿಣಾಮ ನದಿ ಯಲ್ಲಿ ನೆರೆ ಬಂದAತೆ ನೀರು ಬೋಗಾದಿ ರಸ್ತೆ ಹಾಗೂ ರಿಂಗ್ ರಸ್ತೆಗೆ ನುಗ್ಗಿತು. ಅದರಿಂದಾಗಿ ರಸ್ತೆಗಳಲ್ಲಿ ವಾಹನಗಳು ಸಂಚರಿಸಲಾರದೆ ತಾಸುಗಟ್ಟಲೆ ಟ್ರಾಫಿಕ್ ಜಾಮ್ ಆಗಿತ್ತು.

ಮುಂಜಾನೆ ೪ ಗಂಟೆ ವೇಳೆಗೆ ಕೆರೆಯ ಎರಡು ಕಡೆ ಕೋಡಿ ಒಡೆದು ನೀರು ನುಗ್ಗಿ ಬೋಗಾದಿ ಸಿಗ್ನಲ್ ಲೈಟ್ ಜಂಕ್ಷನ್ ಜಲಾವೃತಗೊಂಡಿತಲ್ಲದೆ, ಸರ್ಕಲ್‌ಗೆ ಹೊಂದಿಕೊAಡAತಿರುವ ವಾಣ ಜ್ಯ ಮಳಿಗೆ, ಪೆಟ್ರೋಲ್ ಬಂಕ್, ಹೋಟೆಲ್, ಕಲ್ಯಾಣ ಮಂಟಪ, ರೆಸ್ಟೋರೆಂಟ್‌ಗಳಿಗೂ ನೀರು ನುಗ್ಗಿ, ಅವಾಂತರ ಉಂಟಾಗಿತ್ತು. ಬೆಳಗಾಗುತ್ತಿದ್ದಂತೆಯೇ ವಿಷಯ ತಿಳಿದು ಸರಸ್ವತಿ ಪುರಂ ಠಾಣೆ ಹಾಗೂ ಕುವೆಂಪುನಗರ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಬೋಗಾದಿ ರಸ್ತೆಯ ಅಮೃತ ವಿದ್ಯಾಲಯ ಮತ್ತು ಸಿಗ್ನಲ್ ಲೈಟ್ ಸರ್ಕಲ್ ಬಳಿ ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ವಾಹನಗಳನ್ನು ಬೇರೆ ಮಾರ್ಗಗಳಲ್ಲಿ ಸಂಚರಿಸು ವಂತೆ ಸೂಚಿಸಿದ್ದರಿಂದ ಯಾವುದೇ

ಅಹಿತಕರ ಘಟನೆಗಳು ಸಂಭವಿಸಲಿಲ್ಲ. ಕೆಲವರು ಪೊಲೀಸರ ಸೂಚನೆ ಯನ್ನೂ ಧಿಕ್ಕರಿಸಿ ನುಗ್ಗಿದ ವಾಹನಗಳು ನೀರಿನಲ್ಲಿ ಸಿಲುಕಿ ಕೆಲಕಾಲ ಆತಂಕ ಸೃಷ್ಟಿಯಾಯಿತು. ದ್ವಿಚಕ್ರ ವಾಹನಗಳು ನೀರಿನಲ್ಲಿ ಮುಳುಗಿ ಅವುಗಳ ಇಂಜಿನ್ ಆಫ್ ಆದ ಕಾರಣ ಸಾರ್ವಜನಿಕರು ಅವ ರನ್ನು ರಕ್ಷಿಸಿದ ಪ್ರಸಂಗವೂ ನಡೆಯಿತು. ಸಮಯ ಕಳೆದಂತೆ ನೀರಿನ ರಭಸ ಹೆಚ್ಚಾಗತೊಡಗಿದಾಗ ಮೈಸೂರು ಮಹಾನಗರ ಪಾಲಿಕೆ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಸತ್ಯಮೂರ್ತಿ ನೇತೃತ್ವದ ಅಧಿಕಾರಿಗಳ ತಂಡ, ಅಭಯ ತಂಡದೊAದಿಗೆ ತೆರಳಿ ಕೆರೆಯ ಹೆಚ್ಚುವರಿ ನೀರು ಸರಾಗವಾಗಿ ಹರಿದು ಹೋಗುವಂತೆ ಜೆಸಿಬಿಯಿಂದ ವ್ಯವಸ್ಥೆ ಮಾಡಿದರು. ಸರಸ್ವತಿಪುರಂ ಅಗ್ನಿಶಾಮಕ ಠಾಣೆ ಅಧಿಕಾರಿಗಳು ಹಾಗೂ ಸಿಬ್ಬಂದಿಯೂ ಧಾವಿಸಿ ಸುಮಾರು ನಾಲ್ಕು ಗಂಟೆ ಕಾರ್ಯಾಚರಣೆ ನಡೆಸಿ ಕೆರೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದಂತೆಯೇ ಕೋಡಿ ಒಡೆದಿದ್ದ ಸ್ಥಳದಲ್ಲಿ ಮರಳಿನ ಚೀಲಗಳಿಂದ ತಡೆಗೋಡೆ ನಿರ್ಮಿಸಿ, ತಾತ್ಕಾಲಿಕವಾಗಿ ನೀರು ಹೊರಗೆ ಹರಿಯುವುದನ್ನು ಮಧ್ಯಾಹ್ನದ ವೇಳೆಗೆ ನಿಲ್ಲಿಸಿದರು.

ನದಿ ಉಕ್ಕಿ ಹರಿಯುವಂತೆ ರಸ್ತೆಯಲ್ಲಿ ಹರಿಯುತ್ತಿದ್ದ ನೀರನ್ನು ನೋಡಲು ಸಾವಿರಾರು ಮಂದಿ ಜಮಾಯಿಸಿ, ಮೊಬೈಲ್‌ನಲ್ಲಿ ಫೋಟೋ ತೆಗೆಯುತ್ತಿದ್ದರಲ್ಲದೆ, ಕೆಲವರು ಸೆಲ್ಫಿಗೂ ಮುಗಿಬೀಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಬಸ್ಸು, ಲಾರಿ, ಕಾರುಗಳು ಹೊಳೆಯಂತೆ ಹರಿಯುತ್ತಿದ್ದ ನೀರಿನ ರಭಸವನ್ನೂ ಲೆಕ್ಕಿಸದೇ ಹಾದು ಹೋಗುತ್ತಿದ್ದರಿಂದ ರಸ್ತೆಯಲ್ಲಿ ನೀರಿನ ಚಿತ್ತಾರದ ದೃಶ್ಯ ಕಂಡು ಜನ ಸಂಭ್ರಮಿಸಿದರು. ಮಧ್ಯಾಹ್ನ ೨ ಗಂಟೆ ವೇಳೆಗೆ ನೀರಿನ ಪ್ರಮಾಣ ತಗ್ಗಿದ ಮೇಲೆ ಬೋಗಾದಿ ರಸ್ತೆಯಲ್ಲಿ ವಾಹನ ಸಂಚಾರ ಸಹಜ ಸ್ಥಿತಿಗೆ ಬಂದಿತು. ಕೆರೆಯಿಂದ ಹರಿದ ನೀರು ಕಬಾನಾ ರೆಸ್ಟೋರೆಂಟ್ ಪಕ್ಕದ ರಾಜ ಕಾಲುವೆ (ದೊಡ್ಡ ಮೋರಿ) ಹಾಗೂ ರಿಂಗ್ ರಸ್ತೆಯ ಸರ್ವಿಸ್ ರಸ್ತೆ ಬದಿಯ ಕಾಂಕ್ರಿಟ್ ಬಾಕ್ಸ್ ಡ್ರೇನೇಜ್‌ನಲ್ಲಿ ಹರಿದು ಲಿಂಗಾAಬುದಿ ಕೆರೆ ಸೇರಿತು. ರಾಜ ಕಾಲುವೆ ತುಂಬಿ ಹರಿಯುತ್ತಿದ್ದುದನ್ನು ಜನರು ಮಾರ್ಗದುದ್ದಕ್ಕೂ ನಿಂತು ನೋಡುತ್ತಿದ್ದರು.

ಹೂಳು ತುಂಬಿದ ಪರಿಣಾಮ: ಮರಿಯಪ್ಪನ ಕೆರೆಯಲ್ಲಿ ಹೂಳು ತುಂಬಿರುವುದರಿAದ ಸಾಧಾರಣ ಮಳೆ ಸುರಿದರೂ ಸಹ ಬೇಗ ತುಂಬಿ ಹೆಚ್ಚುವರಿ ನೀರು ಹೊರಕ್ಕೆ ಹರಿಯುತ್ತದೆ. ಜೊತೆಗೆ ಕೆರೆಯ ಸುತ್ತ ಕೆಲವರು ಒತ್ತುವರಿ ಮಾಡಿಕೊಂಡು, ನಾನಾ ರೀತಿಯ ವಹಿವಾಟು ನಡೆಸುತ್ತಿದ್ದಾರಲ್ಲದೆ, ನೀರು ಹರಿದು ಹೋಗಲು ಇರುವ ರಾಜಕಾಲುವೆಯನ್ನೂ ಅಲ್ಲಲ್ಲಿ ಮುಚ್ಚಿ ಕಟ್ಟಡ ನಿರ್ಮಿಸಿರುವ ಪರಿಣಾಮ ಇಂದು ಜಲಾವೃತವಾಗಿದೆ ಎಂದು ಬೋಗಾದಿ ಗ್ರಾಮಸ್ಥರು ಆರೋಪಿಸುತ್ತಿದ್ದರು.

ಕೆರೆಯ ವಿಸ್ತಾರ, ಆಳ ವರ್ಷ ಕಳೆದಂತೆ ಕಡಿಮೆಯಾಗುತ್ತಿದ್ದು, ಹೆಚ್ಚುವರಿ ನೀರು ಹಾದು ಹೋಗಲು ಜಾಗವಿಲ್ಲದಿರುವುದರಿಂದ ನೀರು ರಸ್ತೆಗೆ ನುಗ್ಗಲು ಪ್ರಮುಖ ಕಾರಣವಾಗಿದೆ. ಬೋಗಾದಿ ಪಟ್ಟಣ ಪಂಚಾಯ್ತಿ ಅಧಿಕಾರಿಗಳು ಅನಧಿಕೃತ ಕಟ್ಟಡಗಳಿಗೂ ಖಾತೆ ಮಾಡಿಕೊಟ್ಟು ಅಕ್ರಮ ಎಸಗಿರುವುದು ಇಂತಹ ಘಟನೆಗಳಿಗೆ ಕಾರಣ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಮರಿಯಪ್ಪನ ಕೆರೆಯಿಂದ ನೀರು ಹರಿದು ಹೋಗಲು ಇರುವ ರಾಜಕಾಲುವೆ ಮಾಯವಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳು ಈ ವಿಷಯ ತಿಳಿದಿದ್ದರೂ, ಮುಚ್ಚಿರುವ ಹಾಗೂ ಒತ್ತುವರಿ ಮಾಡಿಕೊಂಡಿರುವ ಜಾಗವನ್ನು ತೆರವುಗೊಳಿಸದಿರುವುದರಿಂದ ಈ ಅವಾಂತರ ಸೃಷ್ಟಿಯಾಗಿದೆ. ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಹರ್ಷಗುಪ್ತಾ ಅವರು ರಾಜಕಾಲುವೆ ಮೇಲೆ ನಿರ್ಮಾಣವಾಗಿರುವ ಕಟ್ಟಡ ನೆಲಸಮಕ್ಕೆ ಮುಂದಾದರಾಗಿದ್ದರೂ ಕೆಲ ಜನಪ್ರತಿನಿಧಿಗಳು ಅವಕಾಶ ನೀಡಲಿಲ್ಲ. ಅದರ ಪರಿಣಾಮವೇ ಇದು ಎಂದು ಗ್ರಾಮಸ್ಥರು ದೂರಿದ್ದಾರೆ.

Translate »