ನಟ-ನಿರೂಪಕ ಚಂದನ್ ಸಾವಿನಿಂದ ಮನನೊಂದ ಪತ್ನಿ, ಮಗನನ್ನು ಕೊಂದು ತಾನೂ ಆತ್ಮಹತ್ಯೆ
ಮೈಸೂರು

ನಟ-ನಿರೂಪಕ ಚಂದನ್ ಸಾವಿನಿಂದ ಮನನೊಂದ ಪತ್ನಿ, ಮಗನನ್ನು ಕೊಂದು ತಾನೂ ಆತ್ಮಹತ್ಯೆ

June 1, 2018

ಬೆಂಗಳೂರು:  ಕನ್ನಡದ ಕಿರುತೆರೆ ನಿರೂಪಕ, ನಟ ಚಂದನ್ ಇತ್ತೀಚೆಗಷ್ಟೇ ಅಪಘಾತವೊಂದರಲ್ಲಿ ಸಾವನ್ನ ಪ್ಪಿದ್ದು, ಪತಿಯ ಸಾವಿನಿಂದ ನೊಂದಿದ್ದ ಪತ್ನಿ ಮೀನಾ ಇಂದು ಬೆಳಿಗ್ಗೆ ಮಗನನ್ನು ಕೊಂದು ತಾನೂ ಆ್ಯಸಿಡ್ ಕುಡಿದು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ.

ದೊಡ್ಡಬಳ್ಳಾಪುರದ ತನ್ನ ಮನೆ ಯಲ್ಲಿ ಮೀನಾ, ತಮ್ಮ ಮಗ 13 ವರ್ಷದ ತುಷಾರ್‍ನ ಕತ್ತು ಕೊಯ್ದು ನಂತರ ಆ್ಯಸಿಡ್ ಕುಡಿದಿದ್ದಾರೆ. ಈ ವೇಳೆ ತುಷಾರ್ ಮೃತಪಟ್ಟಿದ್ದು, ಮೀನಾರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ರಾತ್ರಿ ಅಸುನೀಗಿದ್ದಾರೆ.

ಕಳೆದ ಗುರುವಾರ ನಿರೂಪಕ ಚಂದನ್ ದಾವಣಗೆರೆ ಸಮೀಪ ನಡೆದ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದರು. ಚಂದನ್ ಮತ್ತು ಆತನ ಸ್ನೇಹಿತರು ಬೆಂಗಳೂರು ಕಡೆಯಿಂದ ಹುಬ್ಬಳ್ಳಿಗೆ ಹೋಗುತ್ತಿದ್ದರು. ಈ ವೇಳೆ ರಸ್ತೆ ಪಕ್ಕದಲ್ಲಿ ನಿಂತ ಲಾರಿಗೆ ಕಾರ್ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿತ್ತು.

Translate »