ಸಿನಿಮಾ

ಕೆಜಿಎಫ್ ಚಾಪ್ಟರ್-2 ತಂಡದಿಂದ `ಅಧೀರ’ನ ಫಸ್ಟ್ ಲುಕ್ ಬಿಡುಗಡೆ!

July 31, 2020

ಚಿತ್ರದ ಶೂಟಿಂಗ್ ಆರಂಭಗೊಂಡ ದಿನದಿಂದಲೂ ಕೆಜಿಎಫ್ ಚಾಪ್ಟರ್ 2 ಕುತೂಹಲ, ನಿರೀಕ್ಷೆಗಳನ್ನು ಹುಟ್ಟುಹಾಕುತ್ತಲೇ ಇದೆ. ಎಲ್ಲವೂ ಅಂದುಕೊಂಡಂತೆ ಸಾಗಿದರೆ ಅಕ್ಟೋಬರ್ ನಲ್ಲಿ ಚಿತ್ರ ತೆರೆಗೆ ಬರಲಿದೆ. ಅಲ್ಲಿಯವರೆಗೆ ಚಿತ್ರದ ಬಗ್ಗೆ ಹೊಸ ಹೊಸ ವಿಷಯಗಳನ್ನು ಚಿತ್ರತಂಡ ಚಿತ್ರಪ್ರೇಮಿಗಳಿಗೆ ನೀಡಲಿದೆ. ಕೆಜಿಎಫ್ ಚಾಪ್ಟರ್ 2ನಲ್ಲಿ ರಾಕಿ ಬಾಯ್‍ಗೆ ಎದುರಾಗಿ ವಿಲನ್ ಪಾತ್ರದಲ್ಲಿ ಮಿಂಚುತ್ತಿರುವವರು ಬಾಲಿವುಡ್‍ನ ಖಳನಾಯಕ ಸಂಜುಬಾಬಾ ಅಲಿಯಾಸ್ ಸಂಜಯ್ ದತ್.

ಅವರ ಹುಟ್ಟುಹಬ್ಬ. ಸಂದರ್ಭದಲ್ಲಿ ಉಡುಗೊರೆಯಾಗಿ ಚಿತ್ರತಂಡ ಅವರ ಫಸ್ಟ್ ಲುಕ್‍ನ್ನು ಬಿಡುಗಡೆ ಮಾಡಿದೆ. ಕ್ರೂರ ಮಾರ್ಗದಿಂದ ಪ್ರೇರಿತರಾದ ಅಧೀರ ಎಂದು ಬರೆದುಕೊಂಡಿದೆ ಹೊಂಬಾಳೆ ಫಿಲ್ಮ್ಸ್.

ಇನ್ನೊಂದೆಡೆ ಪುನೀತ್‍ರಾಜ್ ಕುಮಾರ್ ಅಭಿಮಾನಿಗಳಿಗೆ ಸಹ ಸಿಹಿಸುದ್ದಿಯನ್ನು ನೀಡಿರುವ ಹೊಂಬಾಳೆ ಫಿಲ್ಮ್ಸ್ ಪುನೀತ್ ಅವರ ಮುಂದಿನ ಚಿತ್ರ ಯುವರತ್ನದ ಹೊಸ ಪೆÇೀಸ್ಟರ್ ನ್ನು ವರಮಹಾಲಕ್ಷ್ಮಿ ಹಬ್ಬದ ದಿನ ಬಿಡುಗಡೆ ಮಾಡಲಿದೆ.