ವಿರಾಜಪೇಟೆ, ಜು.9- ಗ್ರಾಮೀಣ ಭಾಗ ದಲ್ಲಿರುವ ಜನರು ಕೊರೊನಾ ಸೋಂಕು ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿಯೊ ಬ್ಬರು ಲಸಿಕೆ ಪಡೆದುಕೊಳ್ಳಬೇಕು ಎಂದು ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.
ವಿರಾಜಪೇಟೆ ಸಮೀಪದ ಕೆದಮಳ್ಳೂರು ಗ್ರಾಮ ಪಂಚಾಯಿತಿ ಮತ್ತು ಆರೋಗ್ಯ ಇಲಾ ಖೆಯ ಆಶ್ರಯದಲ್ಲಿ ತೋಮರ ವಾರ್ಡಿನಲ್ಲಿ ವಾಸಿಸುತ್ತಿರುವ 18 ವರ್ಷದ ಮೇಲ್ಪಟ್ಟ ಎಲ್ಲಾ ನಿವಾಸಿಗಳಿಗೆ ಮತ್ತು ಪ್ರಥಮ ಲಸಿಕೆ ಪಡೆದು 85 ದಿನಗಳು ಪೂರ್ಣಗೊಂಡ ವ್ಯಕ್ತಿಗಳಿಗೆ 2ನೇ ಲಸಿಕೆ ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ಕೊರೊನಾ ತಡೆ ಗಟ್ಟಲು ಪ್ರತಿಯೊಬ್ಬರು ಲಸಿಕೆ ಪಡೆದು ಕೊಳ್ಳಬೇಕು. ನಂತರ ಸೋಂಕು ಹರಡ ದಂತೆ ಗ್ರಾಮಸ್ಥರು ಎಚ್ಚರ ವಹಿಸಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಂಡು ಆರೋಗ್ಯ ಇಲಾಖೆಯ ಕಾನೂನುಗಳನ್ನು ಪಾಲನೆ ಮಾಡುವಂತಾಗಬೇಕು. ಲಸಿಕೆಯ ಬೇಡಿಕೆಯಂತೆ ಕಾಲೇಜು ವಿದ್ಯಾರ್ಥಿಗಳಿಗೂ ನೀಡಲಾಗುತ್ತಿದ್ದು, ಲಸಿಕೆಯ ಪ್ರಯೋಜನ ಪಡೆದುಕೊಂಡು ಆರೋಗ್ಯ ಕಾಪಾಡಿಕೊಳ್ಳು ವಂತೆ ಶಾಸಕ ಬೋಪಯ್ಯ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾ ಯಿತಿ ಕಾರ್ಯನಿರ್ವಾಹಣಾಧಿಕಾರಿ ಕೆ.ಸಿ. ಅಪ್ಪಣ್ಣ, ತಾಲೂಕು ವೈದ್ಯಾಧಿಕಾರಿ ಡಾ.ಯತಿ ರಾಜ್, ಕೆದಮಳ್ಳೂರು ಗ್ರಾಮ ಪಂಚಾ ಯಿತಿ ಅಧ್ಯಕ್ಷರಾದ ನಡಿಕೇರಿಯಂಡ ಶೀಲಾ, ಕಾಕೋಟುಪರಂಬು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಎಸ್.ಸುಪ್ರಿಯ ಉಪಸ್ಥಿತರಿದ್ದರು.
ಗ್ರಾಪಂ ಪಿಡಿಓ ಪ್ರಮೋದ್ ಸ್ವಾಗತಿಸಿ ದರು, ಪಂಚಾಯಿತಿ ಸದಸ್ಯರು ಮತ್ತು ಆಶಾ, ಅಂಗನವಾಡಿ ಕಾರ್ಯಕರ್ತರು, ಪಂಚಾ ಯಿತಿ ಸಿಬ್ಬಂದಿಗಳು ಹಾಜರಿದ್ದರು. ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 500 ಮಂದಿಗೆ ಲಸಿಕೆ ನೀಡಲಾಯಿತು.