ಲಸಿಕೆಗಾಗಿ ಸೋ.ಪೇಟೆ, ನಾಪೋಕ್ಲುನಲ್ಲಿ ನೂಕುನುಗ್ಗಲು
ಕೊಡಗು

ಲಸಿಕೆಗಾಗಿ ಸೋ.ಪೇಟೆ, ನಾಪೋಕ್ಲುನಲ್ಲಿ ನೂಕುನುಗ್ಗಲು

July 10, 2021

ಸೋಮವಾರಪೇಟೆ, ಜು.9- ಪಟ್ಟಣದ ಚನ್ನಬಸಪ್ಪ ಸಭಾಂ ಗಣದ ಆವರಣದಲ್ಲಿ ಶುಕ್ರವಾರ ಲಸಿಕೆಗಾಗಿ ಬಂದ ಸಾರ್ವ ಜನಿಕರು ಅಂತರವನ್ನು ಮರೆತು ತಾ ಮುಂದು ನಾ ಮುಂದು ಎಂಬಂತೆ ಮುನ್ನುಗ್ಗಿ ಆತಂಕ ಸೃಷ್ಟಿಸಿದರು.

ನೂಕು ನುಗ್ಗಲು ನಿಯಂತ್ರಿಸಲು ಯಾರೂ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿತ್ತು. 200 ಟೋಕನ್ ಮಾತ್ರ ನೀಡಲಾಗುವುದು ಎಂದು ಸೂಚನೆ ಇದ್ದ ಹಿನ್ನೆಲೆಯಲ್ಲಿ ಬೆಳಗ್ಗೆ 5 ಗಂಟೆಗೆ ಜನರು ಸರದಿ ಸಾಲಿನಲ್ಲಿ ನಿಂತು ಕಾಯುತ್ತಿದ್ದರು. ಇದರ ನಡುವೆ ಎರಡನೇ ಲಸಿಕೆಗೆ ಮಾತ್ರ ಟೋಕನ್ ನೀಡುತ್ತಾರೆ ಎಂದು ತಿಳಿದ ಕೆಲವರು ನಿರಾಶೆಯಿಂದ ಹಿಂದಿರುಗಿದರು. ಸೋಂಕು ತಡೆಗಟ್ಟಲು ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಿಸಲು ಲಸಿಕೆ ನೀಡಲಾಗುತ್ತಿದೆಯಾ ದರೂ, ಇದನ್ನು ಪಡೆಯಲು ಬರುವವರು ಕೋವಿಡ್ ಮಾರ್ಗ ಸೂಚಿಯನ್ನು ಉಲ್ಲಂಘಿಸಿ ನೂಕು ನುಗ್ಗಲು ಉಂಟು ಮಾಡಿದರು. ಇದರ ನಡುವೆ ಶಿಫಾರಸ್ಸಿನಿಂದ ಕೆಲವರು ಬಂದು ಟೋಕನ್ ಪಡೆದು ಲಸಿಕೆಯನ್ನು ಪಡೆದುಕೊಳ್ಳುತ್ತಿದ್ದುದು ಕಂಡು ಬಂದಿತು.

ನಾಪೆÇೀಕ್ಲು ವರದಿ: ಲಸಿಕೆಗಾಗಿ ಹೆದರುತ್ತಿದ್ದ ಜನ ಇಂದು ಲಸಿಕೆ ಹಾಕಿಸಿಕೊಳ್ಳಲು ನಾ ಮುಂದು ತಾ ಮುಂದು ಎಂದು ಅಂತರ ಕಾಯ್ದುಕೊಳ್ಳದೇ ಪರದಾಡುತ್ತಿದ್ದ ದೃಶ್ಯ ನಾಪೆÇೀಕ್ಲು ಕಾಲೇಜು ಲಸಿಕಾ ಕೇಂದ್ರದಲ್ಲಿ ಕಂಡು ಬಂತು.

ಜಿಲ್ಲಾಡಳಿತ ಈ ಬಗ್ಗೆ 100 ಜನರಿಗೆ ಮಾತ್ರ ಇಂದು ಲಸಿಕೆ ನೀಡಲಾ ಗುವುದು ಎಂದು ತಿಳಿಸಿದ್ದರಾದರೂ ಮಾಹಿತಿಯ ಕೊರತೆಯಿಂದ ಸುಮಾರು 500 ಕ್ಕೂ ಅಧಿಕ ಮಂದಿ ಲಸಿಕೆಗಾಗಿ ಆಗಮಿಸಿದ್ದರು. ಈ ವೇಳೆ ಅಂತರ ಕಾಯ್ದುಕೊಳ್ಳದೆ ನಿಂತಿರುವುದು ಕಂಡು ಬಂತು.

ಇಂದು ಎಲ್ಲಾ ಪಂಚಾಯಿತಿಯ ಜನರು ಲಸಿಕೆಗಾಗಿ ಬಂದಿದ್ದು ಜನ ಜಂಗುಳಿ ಉಂಟಾಗಲು ಕಾರಣವಾಯ್ತು. ಲಸಿಕೆ ಸಿಗದೇ ಮರಳಿದ ಜನರು ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಲಸಿಕಾ ಕೇಂದ್ರ ವನ್ನು ತೆರೆಯುವಂತೆ ಜಿಲ್ಲಾಡಳಿತವನ್ನು ಮತ್ತು ಆರೋಗ್ಯ ಇಲಾಖೆ ಯವರನ್ನು ಒತ್ತಾಯಿಸಿದರು. ಜನರ ಆರೋಗ್ಯವನ್ನು ಕಾಪಾಡುವ ದೃಷ್ಠಿಯಿಂದ ಕೂಡಲೇ ಸರಕಾರ, ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯವರು ಈ ಕೇಂದ್ರಕ್ಕೆ ದಿನಂಪ್ರತಿ 250 ಜನರಿಗೆ ಲಸಿಕೆಯನ್ನು ನೀಡಬೇಕು ಎಂದು ನಾಗರಿಕರು ಒತ್ತಾಯಿಸಿದರು.

Translate »