ತೆರಕಣಾಂಬಿ ರೈತ ಸಂಪರ್ಕ ಕೇಂದ್ರಕ್ಕೆ ಡಿಸಿ ದಿಢೀರ್ ಭೇಟಿ
ಚಾಮರಾಜನಗರ

ತೆರಕಣಾಂಬಿ ರೈತ ಸಂಪರ್ಕ ಕೇಂದ್ರಕ್ಕೆ ಡಿಸಿ ದಿಢೀರ್ ಭೇಟಿ

July 10, 2021

ಚಾಮರಾಜನಗರ, ಜು.9-ಗುಂಡ್ಲು ಪೇಟೆ ತಾಲೂಕಿನ ತೆರಕಣಾಂಬಿ ರೈತ ಸಂಪರ್ಕ ಕೇಂದ್ರಕ್ಕೆ ಇಂದು ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಕೃಷಿ ಚಟುವಟಿಕೆಗೆ ಸಂಬಂಧಿಸಿದ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಪರಿಶೀ ಲಿಸಿದರು. ಬೇಡಿಕೆಯಿರುವ ಕೆಲ ಬಿತ್ತನೆ ಬೀಜಗಳ ದಾಸ್ತಾನು ಮುಗಿದಿದ್ದರೂ ಮಾಹಿತಿ ನೀಡದೆ ಇರುವ ಬಗ್ಗೆ ಸಿಬ್ಬಂದಿಯನ್ನು ತೀವ್ರ ತರಾಟೆ ತೆಗೆದುಕೊಂಡರು.
ತೆರಕಣಾಂಬಿ ಹೋಬಳಿ ರೈತ ಸಂಪರ್ಕ ಕೇಂದ್ರಕ್ಕೆ ಇಂದು ಬೆಳಗ್ಗೆಯೇ ಭೇಟಿ ನೀಡಿದ ಜಿಲ್ಲಾಧಿಕಾರಿ, ದಾಸ್ತಾನು ಮಾಡಲಾಗಿ ರುವ ಬಿತ್ತನೆ ಬೀಜಗಳು, ಲಘು ಪೋಷ ಕಾಂಶವನ್ನು ಪರಿಶೀಲಿಸಿದರು. ಯಾವ ಬಗೆಯ ಬಿತ್ತನೆ ಬೀಜಗಳಿಗೆ ಬೇಡಿಕೆ ಯಿದೆ? ಪ್ರಸ್ತುತ ದಾಸ್ತಾನು ಮಾಡಲಾ ಗಿರುವ ಬಿತ್ತನೆ ಬೀಜಗಳಿಗೆ ಯಾವ ಮಟ್ಟದಲ್ಲಿ ಬೇಡಿಕೆಯಿದೆ ಎಂಬ ಬಗ್ಗೆ ಪೂರ್ಣ ವಿವರ ಪಡೆದುಕೊಂಂಡರು. ಬೇಡಿಕೆ ಹೆಚ್ಚಿರುವ ರಾಗಿ ಹಾಗೂ ಅಲಸಂದೆ ಬಿತ್ತನೆ ಬೀಜ ದಾಸ್ತಾನು ಮುಗಿ ದಿದ್ದರೂ ಸಹ ಇಂಡೆಂಟ್ ಮಾಡದೇ ಇರುವ ಬಗ್ಗೆ ತೀವ್ರ ತರಾಟೆಗೆ ತೆಗೆದು ಕೊಂಡರು. ರೈತರಿಗೆ ಅಗತ್ಯವಿರುವ ಹಾಗೂ ಬೇಡಿಕೆ ಹೆಚ್ಚಿರುವ ಬಿತ್ತನೆ ಬೀಜಗಳನ್ನು ಖರೀದಿಸುವಂತೆ ತಾಕೀತು ಮಾಡಿದರು. ರೈತರು ಪ್ರತಿದಿನ ಖರೀದಿಸುತ್ತಿರುವ ಬಿತ್ತನೆ ಬೀಜ ಇತರೆ ಕೃಷಿ ಚಟುವಟಿಕೆಗಳಿಗೆ ಸಂಬಂ ಧಿಸಿದ ಪರಿಕರಗಳ ಕುರಿತ ಮಾಹಿತಿಯನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಈ ವೇಳೆ ತಹಸೀ ಲ್ದಾರ್ ರವಿಶಂಕರ್ ಇತರೆ ಅಧಿಕಾರಿಗಳಿದ್ದರು.

Translate »