ಖಾಸಗಿ ಜಾಗದಲ್ಲಿ ಬಿದಿರು ಬೆಳೆಯಲು ಸಲಹೆ
ಕೊಡಗು

ಖಾಸಗಿ ಜಾಗದಲ್ಲಿ ಬಿದಿರು ಬೆಳೆಯಲು ಸಲಹೆ

March 11, 2020

ಗೋಣಿಕೊಪ್ಪ,ಮಾ.10- 2 ವರ್ಷದಲ್ಲಿ 2.2 ಲಕ್ಷ ಹೆಕ್ಟೇರ್ ಖಾಸಗಿ ಜಾಗದಲ್ಲಿ ಬಿದಿರು ಬೆಳೆಯಲು ಗುರಿ ಹೊಂದಲಾಗಿದೆ. ಬಿದಿರು ಬೆಳೆಗೆ ಸಿಗುತ್ತಿರುವ ಪ್ರೋತ್ಸಾಹವನ್ನು ಕೃಷಿ ಕರು ಸದ್ಭಳಕೆ ಮಾಡಿಕೊಂಡು ದೇಶಕ್ಕೆ ಬೇಕಿ ರುವ ಬಿದಿರು ಸಂಪನ್ಮೂಲ ಬೇಡಿಕೆ ಪೂರೈ ಸಲು ಕೈಜೋ ಡಿಸಬೇಕಿದೆ ಎಂದು ಅರಣ್ಯ ಇಲಾಖೆ ಕೊಡಗು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ.ಹೀರಾಲಾಲ್ ಹೇಳಿದರು.

ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದಲ್ಲಿ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿದ್ಯಾಲಯ, ಪೊನ್ನಂ ಪೇಟೆ ಅರಣ್ಯ ಮಹಾವಿದ್ಯಾಲಯ, ರಾಷ್ಟ್ರೀಯ ಬಿದಿರು ಮಿಷನ್ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಬಿದಿರು ಸಂಪನ್ಮೂಲಗಳ ಬೇಸಾಯ ಹಾಗೂ ಬಳಕೆ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ಬಿದಿರು ಕೃಷಿ 7.79 ಮಿಲಿ ಯನ್ ಹೆಕ್ಟೇರ್‍ಗೆ ಕುಸಿದಿದೆ. ಇದರಿಂದ ಹೆಚ್ಚಾಗಿ ಪೇಪರ್ ಮುದ್ರಣದಲ್ಲಿ ಕೊರತೆ ಕಾಡುತ್ತಿರುವುದರಿಂದ 3 ಮಿಲಿಯನ್ ಟನ್ ಪೇಪರ್ ಸಂಪನ್ಮೂಲ ಕೊರತೆ ಎದುರಿಸುತ್ತಿದ್ದೇವೆ. ಇದರಲ್ಲಿ ಸಮನ್ವಯ ಸಾಧಿಸಲು ಯತ್ನಿಸಬೇಕಿದೆ. 1.92 ಮಿಲಿ ಯನ್ ಟನ್ ಮಾತ್ರ ಪೂರೈಕೆಯಾ ಗುತ್ತಿರುವುದರಿಂದ ಬಿದಿರು ಬೆಳೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದರು.

ಮಡಿಕೇರಿ ಡಿಸಿಎಫ್ ಪ್ರಭಾಕರನ್ ಮಾತನಾಡಿ, ಕೊಡಗಿನ ಹವಾಗುಣಕ್ಕೆ ನೈಸರ್ಗಿಕವಾಗಿ ಬಿದಿರು ಹೆಚ್ಚು ಸೂಕ್ತವಾ ಗಿರುವುದರಿಂದ ಇದರ ಕೃಷಿಗೆ ಹೆಚ್ಚಿನ ಆಸಕ್ತಿ ತೋರಬೇಕು ಎಂದರು.ನಿವೃತ್ತ ಕೃಷಿ ಅಧಿಕಾರಿ ಜೆ. ಕೆ. ವಸಂತ ಕುಮಾರ್ , ಕಾಲೇಜು ಮುಖ್ಯಸ್ಥ ಡಾ. ಚೆಪ್ಪುಡೀರ ಜಿ.ಕುಶಾಲಪ್ಪ ಇದ್ದರು.

ಈ ಸಂದರ್ಭ ಬಿದಿರು ಕೃಷಿಕ ಸಿ. ಬಿ. ಸುಬ್ಬಯ್ಯ ಅವರಿಗೆ ಪ್ರೋತ್ಸಾಹ ಧನ ವಿತರಣೆ ಮಾಡಲಾಯಿತು. ಬಿದಿರು ಪ್ರೋತ್ಸಾಹಕ್ಕೆ ಹೊರ ತಂದಿರುವ ‘ಬಿದಿರು ಹಸಿರು ಹೊನ್ನು’ ಎಂಬ ಪುಸ್ತಕವನ್ನು ಅತಿಥಿಗಳು ಬಿಡುಗಡೆಗೊಳಿಸಿದರು. ಪ್ರಾಧ್ಯಾಪಕ ಡಾ. ರಾಮಕೃಷ್ಣ ಹೆಗ್ಡೆ ಉಪಸ್ಥಿತರಿದ್ದರು.

Translate »