ವಿರಾಜಪೇಟೆಯಲ್ಲಿ ಧ್ಯಾನ ಸಭಾಂಗಣ ಉದ್ಘಾಟನೆ
ಕೊಡಗು

ವಿರಾಜಪೇಟೆಯಲ್ಲಿ ಧ್ಯಾನ ಸಭಾಂಗಣ ಉದ್ಘಾಟನೆ

March 11, 2020

ವೀರಾಜಪೇಟೆ,ಮಾ.10-ದೀಪವನ್ನು ಬೆಳಗುವುದು ನಮ್ಮ ಬದುಕಿನಲ್ಲಿ ಬೆಳಕನ್ನು ನೀಡಲೆಂದು, ದೀಪ ಹಚ್ಚುವುದರಿಂದ ಭಾರತ ದೇಶದಲ್ಲಿಯೇ ಮಹತ್ವದ ಸಂಪ್ರದಾಯ ವಿದೆ ಎಂದು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ಜರ್ಮನಿ ರಾಜಯೋಗ ಸೇವಾ ಕೇಂದ್ರಗಳ ನಿರ್ದೇಶಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಸುದೇಶ್‍ಜೀ ಹೇಳಿದರು.

ವೀರಾಜಪೇಟೆ ಅಪ್ಪಯ್ಯಸ್ವಾಮಿ ರಸ್ತೆಯ ಲ್ಲಿರುವ ಬ್ರಹ್ಮಾಕುಮಾರೀಸ್ ಜ್ಞಾನ ಗಂಗಾ ಭವನದ ‘ರಾಜಯೋಗ ಧ್ಯಾನ ಸಭಾಂ ಗಣದ ಉದ್ಘಾಟನಾ ಸಮಾರಂಭ’ದಲ್ಲಿ ಭಾಗವಹಿಸಿ, ಜಗತ್ತಿನಲ್ಲಿರುವಂತ ಜ್ಯೋತಿ ಬೆಳಕಿನ ವಿಶೇಷ ಶಕ್ತಿಯಾಗಿದ್ದು, ಮಾನವನ ನಾನು ನನ್ನದು ಎಂಬುದನ್ನು ಹೋಗ ಲಾಡಿಸಿ ಮನಸ್ಸಿಗೆ ಶಾಂತಿ ನೆಮ್ಮದಿಯನ್ನು ನೀಡುತ್ತದೆ. ಒಂದು ದೀಪವನ್ನು ಬೆಳಗಲು ಇನ್ನೊಂದು ಬೆಳಕು ಬೇಕು ಅದೇ ಜ್ಞಾನದ ಬೆಳಕು. ದೀಪವನ್ನು ಬೆಳಗುವುದು ಅಜ್ಞಾ ನದ ಅಂಧಕಾರವನ್ನು ಹೋಗಲಾಡಿಸಿ ಜ್ಞಾನದ ಮೂಲಕ ಮಾನವನ ಚಿಂತೆಗಳೆಲ್ಲ ದೂರವಾಗಿ ಸುಖ ಶಾಂತಿ ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತದೆ ಎಂದು ನುಡಿದರು.

ಬ್ರಹ್ಮಾಕುಮಾರಿ ವಿಶ್ವ ವಿದ್ಯಾಲಯದ ಮೈಸೂರು ರಂಗನಾಥ್ ಮಾತನಾಡಿ, ವಿಶ್ವ ವಿದ್ಯಾಲಯ ಅಂದರೆ ಕಲಿಯುವಂತ ಸ್ಥಳ. ಈ ಮುಕ್ತ ವಿದ್ಯಾಲಯವು ವಿಶ್ವದ ಎಲ್ಲಾ ಕಡೆಗಳಲ್ಲಿಯೂ ಕೇಂದ್ರಗಳಿವೆ. ಇದರಿಂದ ಸಾರ್ವಜನಿಕರ ಮನಸ್ಸಿಗೆ ಉಚಿತವಾಗಿ ನೀಡುವಂತ ಶಿಕ್ಷಣವಾಗಿದ್ದು, ಆಸಕ್ತಿ ಯಿಂದ ಬರುವವರಿಗೆ ಸಾಮಾಜಿಕ ಜೀವನದಲ್ಲಿ ಆಧ್ಯಾತ್ಮಿಕ ಶಿಕ್ಷಣ ಹಾಗೂ ದುಃಖವನ್ನು ಅಳಿಸಿ ಮನಸ್ಸಿಗೆ ಸುಖವನ್ನು ನೀಡುವಂತ ಶಿಕ್ಷಣವಾಗಿದೆ. ಇದರಿಂದ ಯಾವುದೇ ವ್ಯೆಕ್ತಿ ಬದಲವಣೆಯಾಗಲು ಸಾಧ್ಯವಾಗುತ್ತದೆ. ವೀರಾಜಪೇಟೆಯಲ್ಲಿ ಉದ್ಘಾಟನೆ ಗೊಂಡಿರುವ ರಾಜಯೋಗ ಧ್ಯಾನ ಸಭಾಂ ಗಣದ ಉದ್ದೇಶ ಈಡೇರಲಿ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬ್ರಹ್ಮಾಕುಮಾರಿ ಮೈಸೂರು ಉಪ ವಲ ಯದ ಮುಖ್ಯ ಸಂಚಾಲಕಿ ರಾಜಯೋ ಗಿನಿ ಬ್ರಹ್ಮಾಕುಮಾರಿ ಬಿ.ಕೆ.ಲಕ್ಮೀಜಿ ಅವರು ಮಾತನಾಡಿ, ಜ್ಞಾನದ ಮೂಲಕ ಉತ್ತಮ ವಾದ ಜೀವನವನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದಕ್ಕಾಗಿ 147 ದೇಶ ಗಳಲ್ಲಿ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರಿಯ ಧ್ಯಾನ ಸೇವಾ ಕೇಂದ್ರಗಳಿವೆ. ಕಷ್ಟಗಳ ಕಳೆದು ಧರ್ಮವನ್ನು ರೂಪಿಸಿಕೊಳ್ಳಲು ಸಂಪೂರ್ಣವಾಗಿ ಜ್ಞಾನ ಯೋಗವನ್ನು ಬಳಸಿಕೊಳ್ಳುವಂತೆ ಹೇಳಿದರು.

ವೀರಾಜಪೇಟೆ ಬ್ರಹ್ಮಾಕುಮಾರೀಸ್ ಜ್ಞಾನಗಂಗಾ ಭವನದ ಕೋಮಲಜೀ ಧ್ಯಾನದ ಬಗ್ಗೆ ಮಾಹಿತಿ ನೀಡಿದರು. ಹುಣಸೂರಿನ ಸುನಿತಾ ಪ್ರಾರ್ಥಿಸಿದರೆ, ಕೇರಳದ ಕಣ್ಣೂರಿನ ರಾಜಯೋಗಿನಿ ಮೀನಾಜೀ ಸ್ವಾಗತಿಸಿದರು. ವೇದಿಕೆಯಲ್ಲಿ ಮಂಡ್ಯ ಜಿಲ್ಲೆಯ ಸೇವಾ ಕೇಂದ್ರದ ಶಾರದಜೀ, ಮಡಿಕೇರಿಯ ಧನಲಕ್ಷೀಜಿ, ಇಲ್ಲಿನ ಗ್ರಾಮಾಂತರ ಠಾಣಾಧಿಕಾರಿ ವೀಣಾ ನಾಯ್ಕ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಜಿಲ್ಲೆ ಹಾಗೂ ಇತರ ಜಿಲ್ಲೆಗಳಿಂದಲೂ ಭಾಗವ ಹಿಸಿದ್ದರು. ವೀರಾಜಪೇಟೆ ನಾಟ್ಯ ಮಯೂರಿ ನೃತ್ಯ ಶಾಲಾ ವಿದ್ಯಾರ್ಥಿಗಳಿಂದ ಭರತ ನಾಟ್ಯ ಕಾರ್ಯಕ್ರಮ ನಡೆಯಿತು.

Translate »