ಆತ್ಮವಿಶ್ವಾಸದಿಂದ ಜನಗಣತಿ ಕಾರ್ಯ ನಿರ್ವಹಿಸಿ: ಡಿಸಿ ಡಾ.ಎಂ.ಆರ್.ರವಿ
ಚಾಮರಾಜನಗರ

ಆತ್ಮವಿಶ್ವಾಸದಿಂದ ಜನಗಣತಿ ಕಾರ್ಯ ನಿರ್ವಹಿಸಿ: ಡಿಸಿ ಡಾ.ಎಂ.ಆರ್.ರವಿ

March 11, 2020

ಚಾಮರಾಜನಗರ, ಮಾ.10- ದೇಶದ ಅಭಿವೃದ್ಧಿ ನೀಲಿನಕ್ಷೆಯಾಗಿರುವ ಜನ ಗಣತಿ ಕಾರ್ಯವನ್ನು ನಿಖರ, ಆತ್ಮವಿಶ್ವಾಸ ಹಾಗೂ ಸಮರ್ಥವಾಗಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ತಿಳಿಸಿದರು.

ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಮಂಗಳವಾರ ಜನಗಣತಿ ಕಾರ್ಯಾಚರಣೆ ನಿರ್ದೇಶ ನಾಲಯ ವತಿಯಿಂದ ಭಾರತ ಜನ ಗಣತಿ-2021ರ ಕುರಿತು ಕ್ಷೇತ್ರ ತರಬೇತು ದಾರರಿಗೆ ಆಯೋಜಿಸಿರುವ 5 ದಿನಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಜನಗಣತಿಯನ್ನು ರಾಷ್ಟ್ರದ ಪ್ರಗತಿಯ ಸೂಚಕವಾಗಿ ಪರಿಗಣಿಸಲಾಗುತ್ತದೆ. ಈ ಅಂಕಿ ಅಂಶದ ಆಧಾರದಲ್ಲೇ ಯೋಜನೆ ಗಳನ್ನು ರೂಪಿಸಲಾಗುತ್ತದೆ. ಹೀಗಾಗಿ ಈ ಮಾಹಿತಿ ನಿಖರವಾಗಿರಬೇಕು. ಇದಕ್ಕಾಗಿ ಈ ಪ್ರಕ್ರಿಯೆಯ ಮಹತ್ವ ಅರಿತು ಕಾರ್ಯ ನಿರ್ವಹಿಸಬೇಕು ಎಂದರು.

ಕ್ಷೇತ್ರ ತರಬೇತುದಾರರು ಮುಂದೆ ಗಣತಿದಾರರಿಗೆ ಜನಗಣತಿ ಪ್ರಕ್ರಿಯೆ ಕುರಿತು ತರಬೇತಿ ನೀಡುವುದರಿಂದ, ಈ ಕಾರ್ಯಾ ಗಾರದಲ್ಲಿ ಎಲ್ಲಾ ಪ್ರಶ್ನೆ ಹಾಗೂ ಸಮಸ್ಯೆ ಗಳಿಗೆ ಉತ್ತರ ಪಡೆದುಕೊಳ್ಳಬೇಕು. ಜನ ಗಣತಿ ಬಗ್ಗೆ ಸಂಪೂರ್ಣ ಮಾಹಿತಿ ಅರಿಯಬೇಕು. ಗಣತಿ ಬಗೆಗೆ ಜ್ಞಾನ ಮತ್ತು ಪರಿಜ್ಞಾನ ಎರಡನ್ನೂ ಹೊಂದಿ ರಬೇಕು. ಆಗ ಮಾತ್ರ ಉತ್ತಮ ಫಲಿತಾಂಶ ಸಾಧಿಸಲು ಸಾಧ್ಯ ಎಂದರು.

ಕ್ಷೇತ್ರ ತರಬೇತುದಾರರು ಪೂರ್ಣ ಪ್ರಮಾಣದಲ್ಲಿ ತಮ್ಮನ್ನು ಗಣತಿ ಕಾರ್ಯ ದಲ್ಲಿ ತೊಡಗಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಸೂಪರ್ ವೈಸರ್, ಗಣತಿದಾ ರರಿಗೆ ತರಬೇತಿ ನೀಡುವುದರಿಂದ, ಅವರ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸುವಂಥ ಆಲೋಚನಾ ಶಕ್ತಿ ಹಾಗೂ ತಾಳ್ಮೆಯ ಗುಣ ಅಳವಡಿಸಿಕೊಳ್ಳಬೇಕು. ಕ್ಷೇತ್ರ ತರಬೇತಿ ದಾರರು ತರಬೇತಿ ಅವಧಿಯಲ್ಲಿ ಜನಗಣತಿ ಕಾರ್ಯ ಕುರಿತು ಮನವರಿಕೆ ಮಾಡಿಕೊಂಡು ಆತ್ಮವಿಶ್ವಾಸ ಪಡೆದು ಕೊಂಡರೆ ಗಣತಿದಾರರನ್ನು ಸಹ ಜನ ಗಣತಿ ಕಾರ್ಯಕ್ಕೆ ಸಜ್ಜುಗೊಳಿಸಬ ಹುದೆಂದು ಸಲಹೆ ನೀಡಿದರು.

ಗಣತಿ ಪ್ರಕ್ರಿಯೆ ಈಗ ಸಂಪೂರ್ಣ ಡಿಜಿಟಲೀರಣಗೊಂಡಿದ್ದು, ಕಾರ್ಯವನ್ನು ಸುಲಭಗೊಳಿಸಿದೆ. ಮೊಬೈಲ್ ಆ್ಯಪ್ ಮೂಲಕ ಗಣತಿ ಕಾರ್ಯ ನಿರ್ವಹಿಸ ಬೇಕಿದೆ. ಎಲ್ಲವನ್ನೂ ಅರ್ಥೈಸಿಕೊಂಡು, ಯಾವುದೇ ಗೊಂದಲಕ್ಕೆ ಅವಕಾಶವಾ ಗದಂತೆ ದೋಷರಹಿತವಾಗಿ ಜನಗಣತಿ ಕಾರ್ಯ ಯಶಸ್ವಿಯಾಗಿ ಪೂರೈಸಬೇಕು. ಗುಣಮಟ್ಟದ ಗಣತಿ ಸಾಧಿಸುವಲ್ಲಿ ಪ್ರತಿ ಯೊಬ್ಬರೂ ಸಹಕರಿಸಬೇಕು ಎಂದರು.

ರೇಷ್ಮೆ ಇಲಾಖೆ ಉಪ ನಿರ್ದೇಶಕರು ಹಾಗೂ ಮಾಸ್ಟರ್ ಟ್ರೈನರ್ ವೃಷಭೇಂದ್ರ ಕುಮಾರ್ ಮತ್ತು ಉಪನ್ಯಾಸಕರು ಹಾಗೂ ಮಾಸ್ಟರ್ ಟ್ರೈನರ್ ಪ್ರೊ.ಗಣೇಶ್ ಕ್ಷೇತ್ರ ತರಬೇತುದಾರರಿಗೆ ಜನಗಣತಿ ಕುರಿತು ತರಬೇತಿ ನೀಡಿದರು. ಎಡಿಸಿ ಸಿ.ಎಲ್. ಆನಂದ್, ಜನಗಣತಿ ಜಿಲ್ಲಾ ನೋಡಲ್ ಅಧಿಕಾರಿ ಜಗದೀಶ್ ಉಪಸ್ಥಿತರಿದ್ದರು.

Translate »