ಉಪ ಚುನಾವಣೆ ಫಲಿತಾಂಶ ನಂತರ ಸಂಪುಟ ವಿಸ್ತರಣೆ 
ಮೈಸೂರು

ಉಪ ಚುನಾವಣೆ ಫಲಿತಾಂಶ ನಂತರ ಸಂಪುಟ ವಿಸ್ತರಣೆ 

November 1, 2020

ಬೆಂಗಳೂರು, ಅ.31(ಕೆಎಂಶಿ)- ಉಪ ಚುನಾವಣೆಯ ಫಲಿತಾಂಶದ ನಂತರ ಮಂತ್ರಿ ಮಂಡಲ ವಿಸ್ತರಿಸಲಿದ್ದು, ಮುನಿರತ್ನ ಸಚಿವ ರಾಗಲಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.

ರಾಜರಾಜೇಶ್ವರಿ ಕ್ಷೇತ್ರದಲ್ಲಿ ಮುನಿರತ್ನ ಪರ ಪ್ರಚಾರ ನಡೆಸುವ ಸಂದರ್ಭದಲ್ಲಿ ಮುಖ್ಯಮಂತ್ರಿಯವರು ಸಂಪುಟ ವಿಸ್ತ ರಣೆಯ ಮಾತನ್ನು ಆಡಿದ್ದಾರೆ. ಮುನಿರತ್ನ ಗೆದ್ದಾಗಿದೆ. ಅಂತರ ಎಷ್ಟು ಎಂದು ತಿಳಿಯ ಬೇಕಷ್ಟೆ. 40ರಿಂದ 50 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಿಕೊಡಿ ಎಂದು ಮತ ದಾರರನ್ನು ಕೋರಿದ್ದಾರೆ. ಫಲಿತಾಂಶ ಬಂದ ತಕ್ಷಣವೇ ದೆಹಲಿಗೆ ತೆರಳಿ, ವರಿಷ್ಠರೊಟ್ಟಿಗೆ ಸಮಾಲೋಚನೆ ನಡೆಸಿ, ಮಂತ್ರಿಮಂಡಲ ವಿಸ್ತರಿಸುತ್ತೇನೆ. ಈ ಸಂದರ್ಭದಲ್ಲಿ ಮುನಿ ರತ್ನ ಸಚಿವರಾಗಿ ಸೇರ್ಪಡೆಗೊಳ್ಳುತ್ತಾರೆ ಎಂದು ಹೇಳಿದ್ದಾರೆ. ಕ್ಷೇತ್ರದ ಜನತೆ ಮುನಿ ರತ್ನ ಅವರನ್ನು ಬಹು ಅಂತರದಲ್ಲಿ ಗೆಲ್ಲಿಸಿ ಕೊಟ್ಟರೆ, ನಿಮಗೆ ಮತ್ತಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಲಿವೆ. ಅವರು ಸಚಿವ ರಾಗಿ ರಾಜ್ಯದ ಕೆಲಸವನ್ನೂ ಮಾಡಬಹುದು. ಕಾಂಗ್ರೆಸ್‍ನ ಭ್ರಷ್ಟತೆಯನ್ನು ನೋಡಿಯೇ ಅವರು ತಮ್ಮ ಶಾಸಕ ಸ್ಥಾನವನ್ನು ತೆರವು ಗೊಳಿಸಿ, ಬಿಜೆಪಿ ಸೇರ್ಪಡೆಗೊಂಡು ನಿಮ್ಮ ಮುಂದೆ ನಿಂತಿದ್ದಾರೆ. ಇವರನ್ನು ಕೈ ಹಿಡಿ ದಿದ್ದೀರಿ. ಆದರೆ ಪ್ರತಿಪಕ್ಷಗಳ ನಾಚಿಸಲು ಹೆಚ್ಚಿನ ಅಂತರದಿಂದ ಗೆಲ್ಲಿಸಿ. ಮುನಿರತ್ನ ಸಾವಿರಾರು ಕೋಟಿ ರೂ.ಗಳ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಮನೆ ಇಲ್ಲದವರಿಗೆ ಮನೆ ನೀಡಲು ಸರ್ಕಾರ ತೀರ್ಮಾನ ಕೈಗೊಂ ಡಿದೆ. ಕ್ಷೇತ್ರದಲ್ಲೂ ಸೂರಿಲ್ಲದವರಿಗೆ ಸೂರು ನೀಡುತ್ತೇನೆ ಎಂಬ ಭರವಸೆಯಿತ್ತಿದ್ದಾರೆ.

Translate »