ಮೈಸೂರು ನಗರ ಪಾಲಿಕೆ ತೆರಿಗೆ ನೀತಿ ವಿರುದ್ಧ  ಕೋರ್ಟ್ ಮೆಟ್ಟಿಲೇರಲು ತೆರಿಗೆದಾರರ ನಿರ್ಧಾರ
ಮೈಸೂರು

ಮೈಸೂರು ನಗರ ಪಾಲಿಕೆ ತೆರಿಗೆ ನೀತಿ ವಿರುದ್ಧ ಕೋರ್ಟ್ ಮೆಟ್ಟಿಲೇರಲು ತೆರಿಗೆದಾರರ ನಿರ್ಧಾರ

August 23, 2021

ಮೈಸೂರು,ಆ.22(ಆರ್‍ಕೆಬಿ)- ವಾಣಿಜ್ಯ ಸ್ವತ್ತುಗಳಿಗೆ ಸಂಬಂಧಿಸಿದಂತೆ ಮೈಸೂರು ಮಹಾನಗರಪಾಲಿಕೆಯ ತೆರಿಗೆ ಪದ್ಧತಿಗೆ ತಡೆ ನೀಡುವಂತೆ ಕೋರಿ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಲು ಭಾನುವಾರ ಮೈಸೂರಿನ ವಿಜಯನಗರ ಒಂದನೇ ಹಂತದಲ್ಲಿರುವ ಸಪ್ತಪದಿ ಕಲ್ಯಾಣ ಮಂಟಪದಲ್ಲಿ ನಡೆದ ನಗರಪಾಲಿಕೆ ತೆರಿಗೆ ಪಾವತಿದಾರರ ಸಭೆಯಲ್ಲಿ ನಿರ್ಧರಿಸಲಾಯಿತು.

ಹೋಟೆಲ್ ಮಾಲೀಕರು, ಕಲ್ಯಾಣ ಮಂಟಪಗಳ ಮಾಲೀಕರು, ಚಿತ್ರಮಂದಿರ ಗಳ ಮಾಲೀಕರ ಸಂಘಗಳ ಪದಾಧಿಕಾರಿ ಗಳು, ಕಟ್ಟಡಗಳ ಮಾಲೀಕರು ಸೇರಿದಂತೆ ಒಟ್ಟು 40ಕ್ಕೂ ಹೆಚ್ಚು ಮಂದಿ ತೆರಿಗೆ ಪಾವತಿ ದಾರರು ಸಭೆಯಲ್ಲಿ ಭಾಗವಹಿಸಿದ್ದರು.

ಸಭೆಯಲ್ಲಿ ವಿಶೇಷ ಆಹ್ವಾನಿತರಾಗಿದ್ದ ಹೈಕೋರ್ಟ್ ಹಿರಿಯ ವಕೀಲ ಹಾಗೂ ಕಂದಾಯ ತೆರಿಗೆ ಸಮಸ್ಯೆಗಳಲ್ಲಿ ಪರಿಣಿತ ರಾದ ಅರುಣ್ ಪೆÇನ್ನಪ್ಪ ಅವರೊಂದಿಗೆ ಮಹಾನಗರಪಾಲಿಕೆಯಿಂದ ತೆರಿಗೆ ಪದ್ಧತಿ ಯಲ್ಲಿ ತಮಗಾಗುತ್ತಿರುವ ತೊಂದರೆಗಳ ಬಗ್ಗೆ ಸಂವಾದ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ, 2011ರಿಂದ ನಾವು ಸಮಸ್ಯೆ ಅನುಭವಿಸುತ್ತಿದ್ದೇವೆ. ಮೂರು ವರ್ಷಕ್ಕೊಮ್ಮೆ ತೆರಿಗೆಯಲ್ಲಿನ ಲೋಪ ದೋಷ ಸರಿದೂಗಿಸುವುದಾಗಿ ಹೇಳುತ್ತಲೇ ಬಂದಿರುವ ನಗರಪಾಲಿಕೆ ಅಧಿಕಾರಿಗಳು ನಮ್ಮ ಬೇಡಿಕೆಗೆ ಮನ್ನಣೆ ನೀಡಿಲ್ಲ. ಅಂದಿ ನಿಂದಲೂ ನಮ್ಮ ಹೋರಾಟ ನಡೆಯು ತ್ತಲೇ ಇದೆ ಎಂದು ಹೇಳಿದರು.

ಬೇರೆ ಮಹಾನಗರಗಳಿಗೆ ಹೋಲಿಸಿ ದರೆ ಮೈಸೂರಿನಲ್ಲಿ ಹೆಚ್ಚು ತೆರಿಗೆ ವಿಧಿಸ ಲಾಗುತ್ತಿದ್ದು, ಬೆಂಗಳೂರಿಗಿಂತ ಮೈಸೂರಿ ನಲ್ಲಿ ಅಧಿಕ ತೆರಿಗೆ ವಸೂಲಿ ಮಾಡಲಾಗು ತ್ತಿದೆ. ಟ್ರೇಡ್ ಲೈಸೆನ್ಸ್‍ನಲ್ಲಿ ದುಪ್ಪಟ್ಟು ತೆರಿಗೆ ವಿಧಿಸಲಾಗುತ್ತಿದೆ. ಸಸ್ಯಾಹಾರಿ ಮತ್ತು ಮಾಂಸಾ ಹಾರಿ ಹೋಟೆಲ್‍ನಲ್ಲಿ ಪ್ರತ್ಯೇಕ ತೆರಿಗೆ ವಸೂಲಿ ಮಾಡಲಾಗುತ್ತಿದೆ. ಬಾರ್ ಅಂಡ್ ರೆಸ್ಟೋ ರೆಂಟ್‍ಗಳಲ್ಲಿಯೂ ಅದೇ ಪರಿಸ್ಥಿತಿ ಇದೆ. ಕೋವಿಡ್ ಸಂದರ್ಭದಲ್ಲಿ ವ್ಯಾಪಾರ ನಷ್ಟ ವಾಗಿದ್ದರೂ ತೆರಿಗೆಯಲ್ಲಿ ಯಾವುದೇ ಕಡಿತ ವಿಲ್ಲ. ಇದರಿಂದ ಉದ್ಯಮ ನಡೆಸುವುದೇ ಕಷ್ಟ ವಾಗಿದೆ ಎಂದು ಅಳಲು ತೋಡಿಕೊಂಡರು.

ಈ ವೇಳೆ ಮಾತನಾಡಿದ ಕಲ್ಯಾಣ ಮಂಟಪಗಳ ಸಂಘದ ಕಾರ್ಯದರ್ಶಿ ವೆಂಕಟೇಶ್, ಸೂಪರ್ ಕಮರ್ಷಿಯಲ್, ಕಮರ್ಷಿಯಲ್ ಎಂದು ವಿಭಾಗ ಮಾಡಿ ದ್ದಾರೆ. 30 ವರ್ಷದ ಹಳೆಯ ಕಟ್ಟಡಗಳ ವರೂ ಇಂದಿನ ನಿರ್ಮಾಣ ತೆರಿಗೆಯನ್ನೇ ಕಟ್ಟಬೇಕಾಗಿದೆ. ಟ್ರೇಡ್ ಲೈಸೆನ್ಸ್, ಬಾರ್ ಅಂಡ್ ರೆಸ್ಟೋರೆಂಟ್, ಸಸ್ಯಹಾರಿ, ಮಾಂಸಾಹಾರಿ, ಎಸಿ, ಜನರೇಟರ್ ಹೀಗೆ ಪ್ರತ್ಯೇಕವಾಗಿ ಮನಸ್ಸಿಗೆ ಬಂದಂತೆ ತೆರಿಗೆ ಹಾಕುತ್ತಿದ್ದಾರೆ. ಈ ಬಗ್ಗೆ ನಮ್ಮ ನಿಯೋಗ ನಗರಪಾಲಿಕೆ ಆಯುಕ್ತರನ್ನು ಭೇಟಿ ಮಾಡಿ ನಮಗಾಗುತ್ತಿರುವ ತೊಂದರೆಗಳ ಬಗ್ಗೆ ವಿವರಿಸಿದಾಗ, ಸರ್ಕಾರದ ನೀತಿ ಪ್ರಕಾರ ತೆರಿಗೆ ಹಾಕಿದ್ದು, ನೀವು ಬೇಕಿದ್ದರೆ ನ್ಯಾಯಾ ಲಯಕ್ಕೆ ಹೋಗಿ ಎಂದು ಖಂಡಾತುಂಡ ವಾಗಿ ಹೇಳಿಬಿಟ್ಟಿದ್ದಾರೆ. ಹೀಗಾಗಿ ನಾವು ನ್ಯಾಯಕ್ಕಾಗಿ ಅನಿವಾರ್ಯವಾಗಿ ನ್ಯಾಯಾ ಲಯಕ್ಕೆ ಹೋಗಲೇಬೇಕಾದ ಪರಿಸ್ಥಿತಿ ಒದಗಿಬಂದಿದೆ ಎಂದು ತಿಳಿಸಿದರು.

ಎಲ್ಲರ ವಿಚಾರಗಳನ್ನು ಆಲಿಸಿದ ಹೈಕೋರ್ಟ್ ಹಿರಿಯ ವಕೀಲ ಅರುಣ್ ಪೊನ್ನಪ್ಪ, ವೈಯಕ್ತಿಕವಾಗಿ ಬೇಡ, ಸಂಘದ ಮೂಲಕ ನ್ಯಾಯಾಲಯದಲ್ಲಿ ಒಗ್ಗಟ್ಟಿನ ಹೋರಾಟ ಮಾಡುವುದು ಸೂಕ್ತ ಎಂದು ಸಲಹೆ ನೀಡಿದರು.

ಎಲ್ಲಾ ಚರ್ಚೆಗಳ ನಂತರ ಅಂತಿಮ ವಾಗಿ ಟ್ರೇಡ್ ಲೈಸೆನ್ಸ್, ದುಪ್ಪಟ್ಟು ತೆರಿಗೆ ವಸೂಲಿ, ಕಮರ್ಷಿಯಲ್ ಮತ್ತು ಸೂಪರ್ ಕಮರ್ಷಿಯಲ್ ಎಂದು ವಿಂಗಡಿಸಿರು ವುದು, ಕೋವಿಡ್‍ನಿಂದ ತೊಂದರೆ ಗೊಳ ಗಾಗಿದ್ದರೂ ತೆರಿಗೆ ಕಟ್ಟುವಂತೆ ಆದೇ ಶಿಸಿರುವುದು, ಸಿಆರ್ ನೀಡದಿರುವುದು ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ನಗರಪಾಲಿಕೆ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಲು ಸಭೆಯಲ್ಲಿ ಸರ್ವಾನು ಮತದಿಂದ ನಿರ್ಧರಿಸಲಾಯಿತು ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಸಭೆಯ ಬಳಿಕ `ಮೈಸೂರು ಮಿತ್ರ’ನಿಗೆ ತಿಳಿಸಿದರು.

ಸಭೆಯಲ್ಲಿ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ, ಉಪಾಧ್ಯಕ್ಷ ಜಿ.ಅಶೋಕ್, ಎನ್.ಎಸ್.ಗೋಪಾಲಕೃಷ್ಣ, ಕಲ್ಯಾಣ ಮಂಟಪಗಳ ಸಂಘದ ಅಧ್ಯಕ್ಷ ಕೆ.ಆರ್.ಸತ್ಯನಾರಾಯಣ, ಉಪಾಧ್ಯಕ್ಷ ಮೂರ್ತಿ, ಚಿತ್ರಮಂದಿರಗಳ ಮಾಲೀಕರ ಸಂಘದ ಕಾರ್ಯದರ್ಶಿ ರಾಜಾರಾಂ, ಮೈಸೂರು ಸಂಘ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಅಧ್ಯಕ್ಷ ಬಿ.ಎಸ್.ಪ್ರಶಾಂತ್, ಪದಾಧಿ ಕಾರಿಗಳಾದ ಮನೋಜ್ ಶೆಣೈ, ಶ್ರೀನಿವಾಸ ಸುತ್ತಾವೆ, ಅಯೂಬ್ ಪಾಷಾ, ಬದ್ರಿನಾರಾ ಯಣ್, ಚಂದ್ರೇಗೌಡ, ಕೆ.ಎಸ್.ಅರುಣ್, ಶಶಿಧರ್ ಇನ್ನಿತರರು ಉಪಸ್ಥಿತರಿದ್ದರು.

Translate »