ನೂತನ ರಾಷ್ಟ್ರೀಯ ಶಿಕ್ಷಣ ನೀತಿಗೆ ಎಐಡಿಎಸ್‍ಓ ಖಂಡನೆ
ಮೈಸೂರು

ನೂತನ ರಾಷ್ಟ್ರೀಯ ಶಿಕ್ಷಣ ನೀತಿಗೆ ಎಐಡಿಎಸ್‍ಓ ಖಂಡನೆ

July 31, 2020

ಮೈಸೂರು, ಜು. 30- ಶಿಕ್ಷಣವನ್ನು ಖಾಸಗೀಕರಣ, ವ್ಯಾಪಾರೀಕರಣ, ಕೇಂದ್ರೀಕರಣ, ವೃತ್ತಿ ಕೇಂದ್ರತೆ ಹಾಗೂ ಕೋಮುವಾದೀಕರಣಗೊಳಿಸುವ ನಿಟ್ಟಿನಲ್ಲಿ ಇತ್ತೀಚೆಗೆ ಕೇಂದ್ರ ಸಚಿವ ಸಂಪುಟವು ರಾಷ್ಟ್ರೀಯ ಶಿಕ್ಷಣ ನೀತಿ-2020 ಅನುಮೋದಿಸಿರುವುದನ್ನು ಅಖಿಲ ಭಾರತ ಪ್ರಜಾ ಸತ್ತಾ ತ್ಮಕ ವಿದ್ಯಾರ್ಥಿ ಸಂಘಟನೆ (ಂIಆSಔ) ರಾಜ್ಯಾಧ್ಯಕ್ಷೆ ಅಶ್ವನಿ ಕೆ.ಎಸ್. ಮತ್ತು ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಖಂಡಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೇಂದ್ರ ಸರ್ಕಾರವು ಈಗಿರುವ ಪ್ರಜಾತಾಂತ್ರಿಕ ರೂಢಿಗಳನ್ನು ಧ್ವಂಸಗೊಳಿಸಿದ್ದಲ್ಲದೇ, ಶಿಕ್ಷಣದ ನೀತಿಯನ್ನು ರೂಪಿಸುವಲ್ಲಿ ರಾಜ್ಯ ಸರ್ಕಾರಗಳ ಪಾತ್ರವನ್ನು ತಿರಸ್ಕರಿ ಸಿದೆ. ಹಾಗೆಯೇ ಶಿಕ್ಷಣ ತಜ್ಞರು, ವಿದ್ಯಾರ್ಥಿಗಳು ಮತ್ತು ಉಪ ನ್ಯಾಸಕರ ಸಂಘಟನೆಗಳ ಅಭಿಪ್ರಾಯವನ್ನು ಅಲಕ್ಷಿಸಿದ್ದ ಲ್ಲದೆ, ಕೊರೊನಾ ಸಾಂಕ್ರಾಮಿಕ ರೋಗವು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಸರ್ಕಾರವು ತನ್ನ ದುರುದ್ದೇಶವನ್ನು ಸಾಧಿಸಿಕೊಳ್ಳಲು ಮುಂದಾಗಿದೆ. ಈ ಕರಡು ಮೊಟ್ಟ ಮೊದಲು ಪ್ರಕಟವಾದಾಗಿನಿಂದಲೂ, “ಸಾರ್ವಜನಿಕ ಶಿಕ್ಷಣ ವ್ಯವ ಸ್ಥೆಯ ಮೇಲೆಓಇP2020 ಬಹಳ ದುಷ್ಟಪರಿಣಾಮವನ್ನು ಬೀರುತ್ತದೆ ಮತ್ತು ಶ್ರೀಮಂತರು ಮತ್ತಷ್ಟು ನಿರ್ಧಯವಾಗಿ ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಶೋಷಣೆ ಮಾಡಲು ಸರ್ಕಾರವೇ ರತ್ನಗಂಬಳಿಯನ್ನು ಹಾಸಿದೆ ಎಂದು ಂIಆSಔ ಅಖಿಲ ಭಾರತ ಕಾರ್ಯದರ್ಶಿಗಳಾದ ಸೌರವ್ ಘೋಷ್ ತಮ್ಮ ಪತ್ರಿಕಾ ಹೇಳಿಕೆಯಲ್ಲಿ ನುಡಿದಿದ್ದರು ಎಂದರು.

5+3+3+4 ವರ್ಷಗಳ ಶಿಕ್ಷಣ ಮಾದರಿಯ ಅನುಷ್ಠಾನ, 3ರಿಂದ 6 ವರ್ಷದೊಳಗಿನ ಮಕ್ಕಳನ್ನು ಅಂಗನವಾಡಿಗೆ ವಹಿಸುವ ಪ್ರಕ್ರಿಯೆಯು ಈಗ ಮರಣಾವಸ್ಥೆಯಲ್ಲಿದೆ. ಒಂದೆಡೆ 3,5 ಮತ್ತು 8 ತರಗತಿಗಳ ವಿದ್ಯಾರ್ಥಿಗಳಿಗೆ ತೆರೆದ ಪುಸ್ತಕದ ಕಲಿಕೆಯನ್ನು ಜಾರಿಗೊಳಿಸಲು ಸರ್ಕಾರ ಸಿದ್ಧ ವಿದೆ. ಆದರೆ ಪಾಸ್ ಫೇಲ್ ಪದ್ಧತಿಯನ್ನು 1ನೇ ತರಗತಿ ಯಿಂದ ಜಾರಿಗೊಳಿಸುವ ವಿಷಯದಲ್ಲಿ ಸರ್ಕಾರವು ಮೌನ ವಹಿಸಿದೆ. ಈ ಮೂಲಕ ಸರ್ಕಾರವು ಸಂಪೂರ್ಣ ಶಿಕ್ಷಣ ವ್ಯವಸ್ಥೆಯನ್ನು ಗಂಡಾಂತರಕ್ಕೆ ಸಿಲುಕಿಸಿದೆ. ಪಠ್ಯಕ್ರಮ ಮತ್ತು ಪಠ್ಯೇತರ ವಿಷಯಗಳ ಕುರಿತಾಗಿ ಕಟ್ಟುನಿಟ್ಟಿನ ಬೇರ್ಪಡಿಸುವಿಕೆ ಮತ್ತು ಕಲೆ ಮತ್ತು ವಿಜ್ಞಾನದ ವಿಷಯ ದಲ್ಲಿ ಇದೇ ಮಾದರಿಯ ಬೇರ್ಪಡಿಸುವಿಕೆ ಇಲ್ಲದಿದ್ದರೆ ಇದು ಸಂಪೂರ್ಣವಾಗಿ ಸಾಂಪ್ರದಾಯಿಕ ಬೋಧನಾ ಮತ್ತು ಕಲಿಕಾ ಪ್ರಕ್ರಿಯೆಯನ್ನು ನಾಶಗೊಳಿಸುತ್ತದೆ. ಇದೇ ರೀತಿ, ಪದವಿ ಕೋರ್ಸುಗಳನ್ನು ಹಲವಾರು ಬಾರಿ ಪ್ರವೇಶ ಮತ್ತು ನಿರ್ಗಮನ ಪದ್ಧತಿಯೊಂದಿಗೆ ಮೂರು ವರ್ಷದಿಂದ ಆರು ವರ್ಷಕ್ಕೆ ಬದಲಾಯಿಸುವುದು ಸಹ ಭಾರತದ ಉನ್ನತ ಶಿಕ್ಷಣ ಪದ್ಧತಿಯನ್ನು ಅಂತರ ರಾಷ್ಟ್ರೀಯ ಮಟ್ಟದಲ್ಲಿ ವಾಣಿಜ್ಯೀಕರಣಗೊಳಿಸುವತ್ತ ಇಡುವ ಒಂದು ಹೆಜ್ಜೆ ಆಗಿದೆ ಎಂದರು.

ಈ ನೀತಿಯು ಶಿಕ್ಷಣ ಪದ್ಧತಿಯನ್ನು ಸಂಪೂರ್ಣ ಭಾರತೀಕರಣಗೊಳಿಸಲು ಕರೆ ನೀಡಿದೆ. ಅಲ್ಲದೆ ಹಲವು ಹಳೆಯ ವಿಚಾರಗಳನ್ನು ಮತ್ತು ಪದ್ಧತಿಯನ್ನು ಮುನ್ನೆಲೆಗೆ ತರುವ ಪ್ರಯತ್ನವೂ ಇದರ ಹಿಂದಿದೆ. ಇದರ ಮೂಲಕ ಕೋಮುವಾದೀಕರಣದ ಮತ್ತು ಅಬ್ಬರದ ರಾಷ್ಟ್ರಪ್ರೇಮ ವನ್ನು ತುಂಬಲು ಪ್ರೇರೇಪಿಸುತ್ತದೆ ಎಂದಿದ್ದಾರೆ.

Translate »