ದೇಶದ ಭವಿಷ್ಯದ ಬಗ್ಗೆ ಗುರಿ, ಕಾಳಜಿ ಇಲ್ಲದ ಕಾಂಗ್ರೆಸ್‍ನವರದ್ದು ಬರೀ ಓಲೈಕೆ ರಾಜಕಾರಣ
ಮೈಸೂರು

ದೇಶದ ಭವಿಷ್ಯದ ಬಗ್ಗೆ ಗುರಿ, ಕಾಳಜಿ ಇಲ್ಲದ ಕಾಂಗ್ರೆಸ್‍ನವರದ್ದು ಬರೀ ಓಲೈಕೆ ರಾಜಕಾರಣ

December 11, 2020

ಮೈಸೂರು, ಡಿ.10 (ಪಿಎಂ)- ಗೋ ಹತ್ಯೆ ನಿಷೇಧ ಕಾಯ್ದೆಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿರುವುದನ್ನು ಖಂಡಿಸಿ ರುವ ಸಂಸದ ಪ್ರತಾಪ್ ಸಿಂಹ, ಕಾಂಗ್ರೆಸ್ ನವರ ಜೀವನವೇ ಓಲೈಕೆ ರಾಜಕಾರಣ. ಇವರಿಗೆ ದೇಶದ ಭವಿಷ್ಯದ ಬಗ್ಗೆ ಗುರಿ, ಸಂಕಲ್ಪ ಎನ್ನುವುದೇ ಇಲ್ಲ ಎಂದು ಟೀಕಾಪ್ರಹಾರ ನಡೆಸಿದರು.

ರಾಜ್ಯ ಸರ್ಕಾರದ ಗೋ ಹತ್ಯೆ ನಿಷೇಧ ಮಸೂದೆಗೆ ವಿಧಾನಸಭೆಯಲ್ಲಿ ಅನು ಮೋದನೆ ದೊರೆತಿರುವುದನ್ನು ಸ್ವಾಗತಿಸಿ ಚಾಮುಂಡಿಬೆಟ್ಟದ ತಪ್ಪಲಲ್ಲಿರುವ ಮೈಸೂರು ಪಿಂಜರಾಪೋಲ್ ಸೊಸೈಟಿ ಆವರಣದಲ್ಲಿ ಗುರುವಾರ ಬಿಜೆಪಿ ವತಿಯಿಂದ ಹಮ್ಮಿ ಕೊಂಡಿದ್ದ ಗೋ ಪೂಜೆ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಗೋವುಗಳಿಗೆ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮದವರಿಗೆ ಅವರು ಪ್ರತಿಕ್ರಿಯೆ ನೀಡಿದರು.

ಕಾಂಗ್ರೆಸ್‍ನವರ ಜೀವನವೇ ಓಲೈಕೆ ರಾಜ ಕಾರಣ. ಗುರಿ-ಸಂಕಲ್ಪ ಉದ್ದೇಶವೇನೆಂದು ಬಿಜೆಪಿಯ ಒಬ್ಬ ಕಾರ್ಯಕರ್ತನ ಕೇಳಿದರೆ ರಾಮಮಂದಿರ ಸೇರಿ ಹತ್ತು ಹಲವು ದೇಶದ ಹಿತಾಸಕ್ತಿಯ ವಿಚಾರ ಹೇಳುತ್ತಾರೆ. ಆದರೆ ಕಾಂಗ್ರೆಸ್‍ನವರನ್ನು ನಿಮ್ಮ ಗುರಿ-ಸಂಕಲ್ಪ, ಉದ್ದೇಶವೇನೆಂದು ಕೇಳಿದರೆ, ಓಲೈಕೆ ರಾಜ ಕಾರಣ ಹಾಗೂ ಜಾತ್ಯಾತೀತ ಭಾಷಣ ಹೊರತಾಗಿ ಮತ್ತೇನು ನಿರೀಕ್ಷೆ ಮಾಡ ಲಾಗದು ಎಂದು ಲೇವಡಿ ಮಾಡಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನವರು ನಿನ್ನೆ ವಿಧಾನಸಭೆಯಲ್ಲಿ ಕೋಟ್ಯಾಂ ತರ ಹಿಂದೂಗಳ ಭಾವನೆಗೆ ಸ್ಪಂದನೆ ಕೊಡು ವಂತಹ ಗೋ ಹತ್ಯೆ ನಿಷೇಧ ಮಸೂದೆಗೆ ಅನುಮೋದನೆ ದೊರಕಿಸಿಕೊಟ್ಟಿದ್ದಾರೆ. ಅದಕ್ಕಾಗಿ ಬಿಜೆಪಿ ಪಕ್ಷದ ಎಲ್ಲಾ ಕಾರ್ಯ ಕರ್ತರ ಪರವಾಗಿ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು.

ಚರ್ಮೋದ್ಯಮದ ಮೇಲೆ ದುಷ್ಪರಿಣಾಮ ಉಂಟು ಮಾಡಲಿದೆ. ಜೊತೆಗೆ ಅದೊಂದು ಆಹಾರ ಸಂಸ್ಕøತಿ ಎಂದು ಕಾಂಗ್ರೆಸ್ ವಿರೋ ಧಿಸಿದೆ ಎಂಬ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‍ನವರು ಗಾಂಧಿ ಹೆಸರು ಹೇಳು ತ್ತಾರೆ. ಆದರೆ ಗಾಂಧಿಯವರು ಗೋಮಾತೆ ಬಗ್ಗೆ ಏನು ಹೇಳಿದ್ದಾರೆ ಎಂಬುದನ್ನೇ ಅವರು ತಿಳಿದುಕೊಂಡಿಲ್ಲ. ನಮ್ಮ ಸಮಾಜವು ತಾಯಿ ನಂತರದ ಸ್ಥಾನವನ್ನು ಗೋವಿಗೆ ಕೊಟ್ಟಿದೆ. ತಾಯಿಯಲ್ಲಿ ಎದೆ ಹಾಲು ಬರದಿದ್ದರೂ ಗೋ ಮಾತೆ ಹಾಲಿನಿಂದ ಎಷ್ಟೋ ಮಕ್ಕಳು ಬದುಕುಳಿಯುತ್ತವೆ. ಗೋವನ್ನು ನಾವು ಮಾತೆ ಎಂದು ಕರೆಯುವ ಹಿನ್ನೆಲೆಯಲ್ಲಿ ಇದೊಂದು ಭಾವನಾತ್ಮಕ ವಿಚಾರ ಎಂದರು.

ಹೀಗಾಗಿ ಮಾತೆಯನ್ನು ಕೊಂದು ತಿನ್ನು ವುದು ಸರಿಯಲ್ಲ ಎನ್ನುವುದು ಕಾಯ್ದೆ ಉದ್ದೇಶ. ಜೊತೆಗೆ ಕೋಟ್ಯಾಂತರ ಜನ ಗೋವನ್ನು ಮಾತೆ ಎಂದು ಪೂಜಿಸುವಾಗ ಅವರ ಭಾವನೆಗಳಿಗೆ ಸ್ಪಂದಿಸಬೇಕೆಂಬ ಕಾರ ಣಕ್ಕೆ ಸಿಎಂ ಯಡಿಯೂರಪ್ಪನವರು ಈ ಕಾಯ್ದೆ ತಂದಿದ್ದಾರೆ. ನಮ್ಮೆಲ್ಲರಿಗೂ ಇದು ಸಂತಸ ತಂದಿದೆ ಎಂದು ತಿಳಿಸಿದರು.

ಆಹಾರ ಪದ್ಧತಿ ನೆಪ ಇಲ್ಲಿ ತರುವುದು ಬೇಡ. ತಿನ್ನಲು ಬೇಕಾದಷ್ಟು ಬೇರೆ ಪ್ರಾಣಿ ಗಳಿವೆ. ವಿಪಕ್ಷ ನಾಯಕ ಸಿದ್ದರಾಮಯ್ಯ ನವರಿಗೂ ಇದು ಚೆನ್ನಾಗಿ ಗೊತ್ತು. ಕುರಿ, ಮೇಕೆಯನ್ನು ಯಾರೂ ಮಾತೆ ಎಂದು ಕರೆ ಯುವುದಿಲ್ಲ. ಆಹಾರದ ಉದ್ದೇಶದಿಂದಲೇ ಅವುಗಳನ್ನು ಸಾಕುವುದಿದೆ. ಆದರೆ ಗೋವಿಗೆ ಮಾತ್ರ ವಿಶೇಷ ಸ್ಥಾನ ನಮ್ಮ ಹಿಂದೂ ಪುರಾಣ ಮಾತ್ರವಲ್ಲದೆ, ನಮ್ಮ ಜನ ಜೀವನ ದಲ್ಲೂ ಇದೆ. ಕೃಷಿಕರಾಗಿದ್ದರೆ ಗೋವು ಗಳನ್ನು ಯಾವ ರೀತಿ ಕಾಣಬೇಕೆಂದು ಗೊತ್ತಿರುತ್ತದೆ. ದೀಪಾವಳಿ ಸೇರಿದಂತೆ ಅನೇಕ ಹಿಂದೂ ಹಬ್ಬಗಳಲ್ಲಿ ಗೋ ಪೂಜೆ ಮಾಡು ತ್ತೇವೆ. ಗೋವು ಪೂಜ್ಯನೀಯ ಸ್ಥಾನ ಹೊಂದಿದೆ. ಹೀಗಾಗಿ ವಿನಾಕಾರಣ ಚರ್ಮೋದ್ಯಮ, ಆಹಾರ ಪದ್ಧತಿ ಎಂದು ತಗಾದೆ ತೆಗೆ ಯುವ ಅಗತ್ಯವಿಲ್ಲ ಎಂದು ಕಾಂಗ್ರೆಸ್‍ಗೆ ತಿರುಗೇಟು ನೀಡಿದರು. ಕಾಂಗ್ರೆಸ್‍ನವರು ಕಲಾಪ ಬಹಿಷ್ಕರಿಸುವ ಎಚ್ಚರಿಕೆ ಸಂಬಂಧ ಪ್ರತಿಕ್ರಿಯಿಸಿ, ಕಾಂಗ್ರೆಸ್‍ನವರಿಗೆ ಕಾರಣವೇ ಬೇಕೆಂದಿಲ್ಲ. ಬಹಳ ಸಾರಿ ಸಂಸತ್ ಅಧಿವೇಶನ ದಲ್ಲೂ ಸಭಾತ್ಯಾಗ ಮಾಡಿದ್ದಾರೆ. ಇಲ್ಲೂ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಇದಕ್ಕೂ ಮುನ್ನ ಗೋವುಗಳಿಗೆ ಸಂಸದ ಪ್ರತಾಪ್ ಸಿಂಹ ಪೂಜೆ ಸಲ್ಲಿಸಿದರಲ್ಲದೆ, ಅವುಗಳಿಗೆ ಬೆಲ್ಲ ಹಾಗೂ ಬಾಳೆಹಣ್ಣು ನೀಡಿ ದರು. ಈ ಕಾರ್ಯಕ್ರಮದಲ್ಲಿ ಮೈಸೂರು ಪಿಂಜರಾಪೋಲ್ ಸೊಸೈಟಿ ಅಧ್ಯಕ್ಷ ಉಮೇದ್ ರಾಜ್ ಸಿಂಘ್ವಿ, ಉಪಾಧ್ಯಕ್ಷರಾದ ಬಿ.ಹನ್ಸ್ ರಾಜ್ ಪಗರಿಯಾ, ವಿನೋದ್ ದಕ್ಲಿವಾಲ್, ಪರಿಸರ ಜಾಗೃತಿ ವೇದಿಕೆ ಅಧ್ಯಕ್ಷ ಡಾ.ಕೆ. ಮಹೇಂದ್ರಸಿಂಗ್ ಕಾಳಪ್ಪ ರಾಜ ಪುರೋ ಹಿತ್, ಬಿಜೆಪಿ ಮುಖಂಡರಾದ ಜೋಗಿ ಮಂಜು, ಗಿರಿಧರ್, ಜಯರಾಮ್, ಗೋಪಾಲ್, ವಾಣೀಶ್‍ಕುಮಾರ್, ಸೋಮ ಸುಂದರ್ ಮತ್ತಿತರರು ಪಾಲ್ಗೊಂಡಿದ್ದರು.

ರೈತರ ದೆಹಲಿ ಚಳವಳಿ ಇದು ಸಿಎಎ ಹೋರಾಟದ ಇನ್ನೊಂದು ರೂಪ
ಮೈಸೂರು, ಡಿ.10(ಪಿಎಂ)- ಕೇಂದ್ರ ಸರ್ಕಾರದ ನೂತನ ಮೂರು ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯಲ್ಲಿ ನಡೆಯು ತ್ತಿರುವ ರೈತರ ಹೋರಾಟ ಸಂಬಂಧ ಪ್ರತಿಕ್ರಿಯೆ ನೀಡಿರುವ ಸಂಸದ ಪ್ರತಾಪ್ ಸಿಂಹ, ಇದು ಸಿಎಎ ಹೋರಾಟದ ಇನ್ನೊಂದು ರೂಪ. ಇದರ ಉದ್ದೇಶ ಬೇರೇಯೇ ಇದ್ದಂತಿದೆ ಎಂದು ಟೀಕಿಸಿದ್ದಾರಲ್ಲದೆ, ರೈತರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನಿಜವಾದ ಕಾಳಜಿ ಹೊಂದಿದ್ದಾರೆ ಎಂದು ತಿಳಿಸಿದರು.

ಚಾಮುಂಡಿಬೆಟ್ಟದ ತಪ್ಪಲಲ್ಲಿರುವ ಮೈಸೂರು ಪಿಂಜರಾ ಪೋಲ್ ಸೊಸೈಟಿ ಆವರಣದಲ್ಲಿ ಗುರುವಾರ ರೈತರ ಹೋರಾಟ ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ ಎಂಬ ಆರೋಪ ಕೇಳಿ ಬರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದು ಸಿಎಎ ಹೋರಾ ಟದ ಇನ್ನೊಂದು ರೂಪ. ಸಿಎಎಯಿಂದ ಒಬ್ಬ ಮುಸಲ್ಮಾನಿಗೂ ತೊಂದರೆ ಆಗಲ್ಲ ಎಂದು ಸ್ಪಷ್ಟಪಡಿಸಿದರೂ ತೀವ್ರತರ ಹೋರಾಟ ನಡೆಸಲಾಯಿತು. ಈಗ ನೂತನ ಮೂರು ಕೃಷಿ ಕಾಯ್ದೆಗಳಿಂದ ರೈತರಿಗೆ ಯಾವುದೇ ಸಮಸ್ಯೆ ಇಲ್ಲ ಎಂದರೂ ಪ್ರತಿಭಟನೆ ನಡೆಸಲಾಗುತ್ತಿದೆ. ಅಂದರೆ ಇಲ್ಲಿ ಬೇರೆಯೇ ಉದ್ದೇಶವಿದೆ ಎಂದು ಕಿಡಿಕಾರಿದರು.

ಇದು ಬರೀ ಪಂಜಾಬ್, ಹರಿಯಾಣಕ್ಕೆ ಸೀಮಿತವಾದ ಹೋರಾಟ. ದೆಹಲಿಯಲ್ಲಿ ಎಲ್ಲಾ ದೇಶಗಳ ರಾಯಭಾರಿ ಕಚೇರಿ, ಭಾರತೀಯ ಸೇನೆಯ ಮುಖ್ಯ ಘಟಕಗಳು ಇರುವ ಹಿನ್ನೆಲೆಯಲ್ಲಿ ಅದು ಅತೀ ಸೂಕ್ಷ್ಮ ಪ್ರದೇಶ. ಹೀಗಿರುವಾಗ ಪಂಜಾಬ್ ರೈತರು ದೆಹಲಿಯಲ್ಲೇ ಏಕೆ ಹೋರಾಟ ಮಾಡಬೇಕು. ಅವರ ರಾಜ್ಯದಲ್ಲಿ ಹೋರಾಟ ಮಾಡಿದರೆ ನ್ಯಾಯ ಸಿಗುವುಲ್ಲವೇ? ಎಂದು ಪ್ರಶ್ನಿಸಿದರು.
ಕಾಯ್ದೆಯಲ್ಲಿ ಕನಿಷ್ಠ ಬೆಂಬಲ ಬೆಲೆ (ಎಂಎಸ್‍ಪಿ) ತೆಗೆಯು ತ್ತಿಲ್ಲ ಎಂದು ಸ್ಪಷ್ಟವಾಗಿ ಸಂಸತ್‍ನಲ್ಲೂ ಹೇಳಿದ್ದೇವೆ. ಇಷ್ಟಾ ದರೂ ಚಳವಳಿ ನಡೆಯುತ್ತಿದೆ. ನೂತನ ಮೂರು ಕೃಷಿ ಕಾಯ್ದೆ ಗಳಿಂದ ರೈತರಿಗೇ ಲಾಭ. ಎಪಿಎಂಸಿಯಲ್ಲೇ ಏಕೆ ಮಾರಾಟ ಮಾಡಬೇಕು. ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಲಾಭ ಗಳಿಸಬಹುದು ಎಂದು ಹೇಳಿದರು.

ಇದಕ್ಕೆ ಸಂಬಂಧಿಸಿದಂತೆ ಹಿಂದೆ ಎನ್‍ಸಿಪಿ ಅಧ್ಯಕ್ಷ ಶರದ್ ಪವಾರ್ ಅವರೇ ಕೇಂದ್ರ ಕೃಷಿ ಸಚಿವರಾಗಿದ್ದಾಗ ಕೃಷಿ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆಗೆ ಅವಕಾಶ ಕೋರಿ ಎಲ್ಲಾ ರಾಜ್ಯ ಸರ್ಕಾರಗಳಿಗೆ ಪತ್ರ ಬರೆದಿದ್ದರು. ಆದರೆ ಈಗ ವಿರೋಧ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‍ನ 2019ರ ಪ್ರಣಾಳಿಕೆಯಲ್ಲಿ ನೂತನ ಕೃಷಿ ಕಾಯ್ದೆಗಳ ಅಂಶಗಳನ್ನು ಪ್ರಸ್ತಾಪಿರುವುದನ್ನು ಕಾಣಬಹುದು. ಈ ನೂತನ ಕಾಯ್ದೆ ವಿರೋಧಿಸಲು ಕಾಂಗ್ರೆಸ್‍ನವರಲ್ಲಿ ಯಾವುದೇ ಬಲವಾದ ಕಾರಣಗಳಿಲ್ಲ ಎಂಬುದು ಸ್ಪಷ್ಟವಾಗಿದೆ. ದೇಶದ ಜನತೆ ಪ್ರಧಾನಿ ನರೇಂದ್ರ ಮೋದಿ ಜೊತೆಯಲ್ಲಿದ್ದಾರೆ ಎಂದರು.

ರೈತರು ಬೇಡಿಕೆ ಮುಂದಿಡದಿದ್ದರೂ ಸಣ್ಣ ಮತ್ತು ಅತಿ ಸಣ್ಣ ರೈತರು ಸೇರಿದಂತೆ 18 ಕೋಟಿ ರೈತರ ಶ್ರೇಯೋಭಿವೃದ್ಧಿ ಗಾಗಿ ಪ್ರಧಾನಿ ನರೇಂದ್ರ ಮೋದಿಯವರು `ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ನಿಧಿ’ ಜಾರಿಗೆ ತಂದು ವರ್ಷಕ್ಕೆ ಮೂರು ಕಂತು ಗಳಲ್ಲಿ 6 ಸಾವಿರ ರೂ. ಸಹಾಯಧನ ನೀಡಲು ಕ್ರಮ ವಹಿಸಿ ದ್ದಾರೆ. ಜೊತೆಗೆ ರಾಜ್ಯದಲ್ಲಿ ಇದಕ್ಕೆ ಹೆಚ್ಚುವರಿ 4 ಸಾವಿರ ರೂ. ನೀಡಲು ಸಿಎಂ ಬಿ.ಎಸ್.ಯಡಿಯೂರಪ್ಪ ಕ್ರಮ ವಹಿಸಿದ್ದಾರೆ. ಇದು ರೈತರ ಬಗೆಗಿನ ನಿಜವಾದ ಕಾಳಜಿ. ಕಳೆದ 6 ವರ್ಷಗಳಲ್ಲಿ ಇಡೀ ದೇಶದಲ್ಲಿ ಯಾವಬ್ಬ ರೈತ ಗೊಬ್ಬರ ಸಿಗುತ್ತಿಲ್ಲವೆಂದು ಪ್ರತಿಭಟನೆ ನಡೆಸಿಲ್ಲ ಎಂದು ತಮ್ಮ ಸರ್ಕಾರದ ಕ್ರಮಗಳನ್ನು ಸಮರ್ಥಿಸಿಕೊಂಡರು.

Translate »