ಗ್ರಾಪಂ ಚುನಾವಣೆ ಮೊದಲ ಹಂತ; ನಾಮಪತ್ರ ಸಲ್ಲಿಕೆಗೆ ಇಂದು ಕಡೆ ದಿನ
ಮೈಸೂರು

ಗ್ರಾಪಂ ಚುನಾವಣೆ ಮೊದಲ ಹಂತ; ನಾಮಪತ್ರ ಸಲ್ಲಿಕೆಗೆ ಇಂದು ಕಡೆ ದಿನ

December 11, 2020

ಮೈಸೂರು, ಡಿ.10(ಬಿವಿಎಂಸಿ)- ಗ್ರಾಮೀಣ ಭಾರತದ ಪ್ರಜಾಪ್ರಭುತ್ವದ ಪರೀಕ್ಷೆಗೆ ದಿನಗಣನೆ ಆರಂಭವಾಗಿದೆ. ರಾಜ್ಯದ ಗ್ರಾಮ ಪಂಚಾಯಿತಿಗಳ ಮೊದಲ ಹಂತದ ಚುನಾ ವಣೆಗೆ ನಾಮಪತ್ರ ಸಲ್ಲಿಸಲು ಡಿ.11ರ ಶುಕ್ರವಾರ ಕಡೇ ದಿನವಾಗಿದೆ. ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ 41 ಗ್ರಾಪಂ, ಕೆಆರ್ ನಗರ ತಾಲೂಕಿನ 34, ಪಿರಿಯಾಪಟ್ಟಣ ತಾಲೂಕಿನ 34, ಹೆಚ್‍ಡಿ ಕೋಟೆ ತಾಲೂಕಿನ 26, ಸರಗೂರು ತಾಲೂಕಿನ 13, ಕೊಡಗು ಜಿಲ್ಲೆಯ ಮಡಿಕೇರಿ 26, ಸೋಮ ವಾರಪೇಟೆ 40 ಗ್ರಾಪಂಗಳಲ್ಲಿ, ಮಂಡ್ಯ
ಜಿಲ್ಲೆಯಲ್ಲಿ ಮದ್ದೂರು ತಾಲೂಕಿನ 42, ಮಂಡ್ಯ ತಾಲೂಕಿನ 46, ಮಳವಳ್ಳಿ ತಾಲೂಕಿನ 38 ಹಾಗೂ ಚಾಮರಾಜನಗರ ಜಿಲ್ಲೆಯ ಚಾ.ನಗರ ತಾಲೂಕಿನ 43 ಮತ್ತು ಗುಂಡ್ಲುಪೇಟೆ ತಾಲೂಕಿನ 34 ಗ್ರಾಪಂಗಳಲ್ಲಿ ಮೊದಲ ಹಂತದಲ್ಲಿ, ಡಿ.22ರಂದು ಮತದಾನವಾಗಲಿದೆ.

ಅಧಿಸೂಚನೆ: 2ನೇ ಹಂತದ ಚುನಾವಣೆಗೆ ಡಿ.11ರಂದು ಅಧಿಸೂಚನೆ ಪ್ರಕಟವಾಗಲಿದೆ. ನಾಮಪತ್ರ ಸಲ್ಲಿಸಲು ಡಿ.16 ಕೊನೆಯ ದಿನ. ಡಿ.27ರಂದು ಮತ ಹಕ್ಕು ಚಲಾವಣೆಗೆ ದಿನ ನಿಗದಿಯಾಗಿದೆ. ರಾಜ್ಯದಲ್ಲಿ ಒಟ್ಟು 2,97,15,048 ಮತದಾರರಿದ್ದಾರೆ. ಪಕ್ಷ ರಹಿತವಾಗಿ ನಡೆಯುವ ಈ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ.50ರಷ್ಟು ಸ್ಥಾನಗಳು ಮೀಸಲಾಗಿರುವುದು ವಿಶೇಷ. ಎರಡೂ ಹಂತದ ಚುನಾವಣೆಯ ಮತ ಎಣಿಕೆ ಡಿ.30ರಂದು ನಡೆಯಲಿದೆ.

Translate »