ಪಂಚಲಿಂಗ ದರ್ಶನಕ್ಕೆ ವಿಧ್ಯುಕ್ತ ಚಾಲನೆ
ಮೈಸೂರು

ಪಂಚಲಿಂಗ ದರ್ಶನಕ್ಕೆ ವಿಧ್ಯುಕ್ತ ಚಾಲನೆ

December 11, 2020

ತಿ.ನರಸೀಪುರ, ಡಿ.10(ಎಸ್‍ಕೆ)- ಇತಿಹಾಸ ಪ್ರಸಿದ್ಧ ಶ್ರೀಪಂಚಲಿಂಗ ದರ್ಶನ ಮಹೋತ್ಸವಕ್ಕೆ ತಲಕಾಡಿನ ವೈದ್ಯನಾಥೇಶ್ವರ ದೇವಸ್ಥಾನದಲ್ಲಿ ಸಂಕಲ್ಪ ಪೂಜೆ ನೆರವೇರಿಸುವ ಮೂಲಕ ವಿಧ್ಯುಕ್ತ ವಾಗಿ ಚಾಲನೆ ನೀಡಲಾಯಿತು.

ಇಂದಿನಿಂದ 10 ದಿನಗಳ ಕಾಲ ನಡೆಯುವ ಪಂಚಲಿಂಗ ದರ್ಶನ ಮಹೋತ್ಸವದ ಸಂಕಲ್ಪ ಪೂಜೆಯಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ಶಾಸಕ ಅಶ್ವಿನ್‍ಕುಮಾರ್, ಮಹೋತ್ಸವ ನಿರ್ವಿಘ್ನವಾಗಿ ನೆರವೇರಲೆಂದು ಪ್ರಾರ್ಥನೆ ಸಲ್ಲಿಸಿದರು.

ಕೊರೊನಾ ಹಿನ್ನೆಲೆಯಲ್ಲಿ ಸೀಮಿತ ಮಂದಿಗೆ ಮಾತ್ರ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವ ಕಾಶ ನೀಡಲಾಗಿತ್ತು. ದೇವಸ್ಥಾನದ ಪ್ರಧಾನ ಅರ್ಚಕ ಆನಂದ ದೀಕ್ಷಿತ್ ಹಾಗೂ ಚಾಮುಂಡಿ ಬೆಟ್ಟದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳನ್ನು ಕೈಗೊಳ್ಳ ಲಾಯಿತು. ದೇವಸ್ಥಾನದ ಗರ್ಭಗುಡಿ ಮುಂಭಾಗ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮ ಶೇಖರ್ ದೀಪ ಬೆಳಗಿಸುವ ಮೂಲಕ ಮಹೋ ತ್ಸವವನ್ನು ಉದ್ಘಾಟಿಸಿದರು. ನಂತರ ದೇವರ ದರ್ಶನ ಪಡೆದು ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಿ ಭಕ್ತಿಭಾವ ಮೆರೆದರು.

ಶಾಸಕ ಎಂ.ಅಶ್ವಿನ್‍ಕುಮಾರ್, ಜಿಪಂ ಸದಸ್ಯ ಹೆಚ್.ಟಿ.ಮಂಜುನಾಥ್, ಮೈಸೂರು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ಉಪವಿಭಾ ಗಾಧಿಕಾರಿ ವೆಂಕಟರಾಜು, ತಹಶೀಲ್ದಾರ್ ಡಿ. ನಾಗೇಶ್, ಇಓ ಜೆರಾಲ್ಡ್ ರಾಜೇಶ್, ಕ್ಷೇತ್ರ ಬಿಜೆಪಿ ಅಧ್ಯಕ್ಷ ಕೆ.ಸಿ.ಲೋಕೇಶ್, ತಾಪಂ ಸದಸ್ಯೆ ಶಿವಮ್ಮ, ರತ್ನರಾಜು, ಡಿವೈಎಸ್‍ಪಿ ಗೋವಿಂದ ರಾಜು, ಸುಂದರನಾಯಕ, ಯಶೋಧಮ್ಮ, ಮಹ ದೇವ, ನಾಗರಾಜು, ಸಿಪಿಐ ಕೃಷ್ಣಪ್ಪ, ಎಸ್‍ಐ ಹೆಚ್.ಡಿ.ಮಂಜು, ಸಮೂಹ ದೇವಾಲಯಗಳ ಕಾರ್ಯನಿರ್ವಹಣಾಧಿಕಾರಿ ನಟೇಶ್ ಇದ್ದರು.

2.20 ಕೋಟಿ ರೂ. ಅನುದಾನ
ಪಂಚಲಿಂಗ ದರ್ಶನ ಮಹೋತ್ಸವಕ್ಕೆ ಮುಖ್ಯ ಮಂತ್ರಿಗಳು 2.20 ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ ಎಂದು ಸಚಿವ ಎಸ್.ಟಿ.ಸೋಮ ಶೇಖರ್ ತಿಳಿಸಿದರು. ಪಂಚಲಿಂಗ ದರ್ಶನಕ್ಕೆ ದೀಪ ಬೆಳಗುವ ಮೂಲಕ ವಿಧ್ಯುಕ್ತ ಚಾಲನೆ ನೀಡಿ ಮಾತನಾಡಿದ ಅವರು, ಕೆಲವು ಅಭಿವೃದ್ಧಿ ಕೆಲಸಗಳಿಗೆ 2.20 ಕೋಟಿ ರೂ.ಗಳನ್ನು ದೇವ ಸ್ಥಾನದ ಸಮಿತಿಯವರು ಕೇಳಿದ್ದಾರೆ. ಸ್ಥಳೀಯ ಶಾಸಕರು ಸಹ ಒಂದಷ್ಟು ಕೆಲಸ ಆಗಬೇಕು ಎಂದಿದ್ದಾರೆ. ಆ ಎಲ್ಲಾ ಕೆಲಸಗಳನ್ನು ಮಾಡಲು ಮುಖ್ಯಮಂತ್ರಿಯವರು ಒಪ್ಪಿದ್ದಾರೆ ಎಂದರು.

ಕರ್ನಾಟಕದ ಜನತೆಗೆ 7 ವರ್ಷದ ನಂತರ ಪಂಚಲಿಂಗ ದರ್ಶನದ ಭಾಗ್ಯ ಬಂದಿದೆ. ಎಲ್ಲ ರಿಗೂ ಶುಭಾಶಯಗಳು, ಒಳ್ಳೆಯದಾಗಲಿ, ಕೊರೊನಾ ಮುಕ್ತ ಕರ್ನಾಟಕ ಆಗಲಿ. ಕೊರೊನಾ ಮುಕ್ತ ಪಂಚಲಿಂಗ ದರ್ಶನ ಆಗಲಿ ಎಂದು ಪ್ರಾರ್ಥಿಸಿ ದ್ದೇನೆ ಎಂದರು. ತಜ್ಞರ ಸಮಿತಿ 9 ದಿನಗಳ ಕಾಲ 1 ಸಾವಿರ ಮಂದಿ ಪ್ರತಿದಿನ ದರ್ಶನಕ್ಕೆ ಅವಕಾಶ ಮಾಡಿಕೊಡಲಿದೆ. ವಿಶೇಷ ದಿನವಾದ ಡಿ.14 ರಂದು 1500 ಮಂದಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಶಾಸಕ ಅಶ್ವಿನ್‍ಕುಮಾರ್ ವಿಶೇಷವಾದ ಆಸಕ್ತಿ ವಹಿಸಿ, ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದಾರೆ. ಆರೋಗ್ಯ ಹಿತದೃಷ್ಟಿಯಿಂದ ಸ್ಥಳೀಯರು ಸಾಮಾಜಿಕ ಅಂತರ ಕಾಪಾಡಿಕೊಂಡು ಮಾಸ್ಕ್ ಬಳಸಿ ಆರೋಗ್ಯ ಕಾಪಾಡಿಕೊಳ್ಳುವಂತೆ ತಿಳಿಸಲಾಗಿದೆ. ಸ್ಥಳೀಯರು ಅಭಿವೃದ್ಧಿಗೆ ಹೆಚ್ಚಿನ ಅನುದಾನಕ್ಕೆ ಕೇಳಿದ್ದಾರೆ. ದಸರಾ ಉತ್ಸವಕ್ಕೆ ಬಿಡುಗಡೆಯಾದ ಅನುದಾನದಲ್ಲಿ ಉಳಿಕೆ ಇದ್ದು ಮುಖ್ಯಮಂತ್ರಿಗಳ ಜತೆ ಮಾತನಾಡಿ ಬಿಡುಗಡೆ ಮಾಡಿಸುವ ಭರವಸೆ ನೀಡಿದರು.

ತಲಕಾಡು ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಗೆ ಉನ್ನತೀಕರಿಸಲು ಮನವಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅದಕ್ಕೆ ಬೇಕಾದ ಪ್ರಕ್ರಿಯೆಗಳನ್ನು ಮಾಡಲಾಗುವುದು. ಪೆÇಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಮಾಡಿದ್ದಾರೆ. 2013ರಲ್ಲಿ 6-7 ಲಕ್ಷ ಜನ ಆಗಮಿಸಿದ ಮಾಹಿತಿ ಇದೆ. ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಕಡಿಮೆ ಸಂಖ್ಯೆಯ ಜನರನ್ನು ಬಿಡಲಾಗುತ್ತಿದೆ ಎಂದರು. ಪಂಚಲಿಂಗ ದರ್ಶನದ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯಿಂದ ನಡೆಯುತ್ತಿದ್ದ ಎಲ್ಲಾ ಅಭಿವೃದ್ಧಿ ಕೆಲಸಗಳನ್ನು ಈ ಬಾರಿಯೂ ಸಹ ಮಾಡಲಾಗುತ್ತಿದೆ ಎಂದ ಅವರು, ರಸ್ತೆ ಅಗಲಿಕರಣ ಸಂದರ್ಭದಲ್ಲಿ ಪರಿಹಾರ ನೀಡಬೇ ಕಾದವರಿಗೆ ಪರಿಹಾರ ನೀಡಲು ಜಿಪಂ ಸಿಇಓಗೆ ತಿಳಿಸಲಾಗಿದೆ ಎಂದರು. ಶಾಸಕ ಎಂ. ಅಶ್ವಿನ್‍ಕುಮಾರ್ ಮಾತನಾಡಿ, ಪಂಚಲಿಂಗ ದರ್ಶನ ಮಹೋತ್ಸವಕ್ಕೆ ಬರುವ ಭಕ್ತರಿಗೆ ಯಾವುದೇ ಅನಾನುಕೂಲವಾಗದಂತೆ ಅಗತ್ಯ ಸಿದ್ಧತೆ ಮಾಡಲಾಗಿದೆ. ಕೊರೊನಾ ಸಮಸ್ಯೆ ಇರುವುದರಿಂದ ಭಕ್ತರು ಕೂಡಾ ಸನ್ನಿವೇಶ ಅರಿತು ಸಹಕಾರ ನೀಡುವಂತೆ ಮನವಿ ಮಾಡಿದರು.

Translate »