ಛತ್ತೀಸ್‍ಗಢ ಮೊದಲ ಸಿಎಂ ಅಜಿತ್ ಜೋಗಿ ಇನ್ನಿಲ್ಲ
ಮೈಸೂರು

ಛತ್ತೀಸ್‍ಗಢ ಮೊದಲ ಸಿಎಂ ಅಜಿತ್ ಜೋಗಿ ಇನ್ನಿಲ್ಲ

May 30, 2020

ರಾಯಪುರ್: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಛತ್ತೀಸ್‍ಗಢದ ಮೊದಲ ಮುಖ್ಯಮಂತ್ರಿ ಅಜಿತ್ ಜೋಗಿ ಅವರು ಶುಕ್ರವಾರ ಮಧ್ಯಾಹ್ನ ರಾಯ ಪುರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮಾಜಿ ಮುಖ್ಯ ಮಂತ್ರಿ ಅಜಿತ್ ಜೋಗಿ ಮೇ 9ರಂದು ಹೃದಯಾಘಾತಕ್ಕೆ ಒಳಗಾದ ನಂತರ ಅವರನ್ನು ಆಸ್ಪತ್ರೆ ದಾಖಲಿಸಲಾಗಿತ್ತು. ಅಂದಿನಿಂದ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು ಮತ್ತು ಮತ್ತು ವೆಂಟಿಲೇಟರ್ ಸಹಾಯದಲ್ಲಿದ್ದರು. 74 ವರ್ಷದ ಜೋಗಿ ಅವರಿಗೆ ಬುಧವಾರ ರಾತ್ರಿ ಮತ್ತೊಮ್ಮೆ ಹೃದಯಾಘಾತವಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ. ಒಬ್ಬ ಅಧಿಕಾರಿಯಾಗಿದ್ದ ಜೋಗಿ ಅವರು ನಂತರ ರಾಜಕಾರಣಿ ಯಾಗಿ ಛತ್ತೀಸ್‍ಗಢ ಅಸ್ತಿತ್ವಕ್ಕೆ ಬಂದ ನಂತರ ನವೆಂಬರ್ 2000ರಿಂದ 2003ರ ನವೆಂಬರ್ ವರೆಗೆ ಕಾಂಗ್ರೆಸ್ ಸರ್ಕಾರದ ಮೊದಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.

Translate »