ಕೋಣನೂರು: ಕಪ್ಪುಮುಂಗುಸಿ ಕಳೇಬರ ಪತ್ತೆ
ಮೈಸೂರು ಗ್ರಾಮಾಂತರ

ಕೋಣನೂರು: ಕಪ್ಪುಮುಂಗುಸಿ ಕಳೇಬರ ಪತ್ತೆ

May 30, 2020

ನಂಜನಗೂಡು, ಮೇ 29-ಅಪರೂಪದ ಕಪ್ಪುಮುಂಗುಸಿ ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಘಟನೆ ತಾಲೂಕಿನ ಕೋಣನೂರು ಗ್ರಾಮದಿಂದ ವರದಿಯಾಗಿದೆ.

ಗ್ರಾಮದಿಂದ ಚುಂಚನಹಳ್ಳಿ ಗ್ರಾಮಕ್ಕೆ ತೆರಳುವ ರಸ್ತೆಯ ಹಳ್ಳವೊಂದರಲ್ಲಿ ಕಳೇಬರ ಪತ್ತೆಯಾಗಿದ್ದು, ಎರಡು ದಿನಗಳ ಹಿಂದೆಯೇ ಸಾವಿಗೀಡಾಗಿರುವುದು ದೃಢಪಟ್ಟಿದೆ. ವಿಷಯ ತಿಳಿಯುತ್ತಿದ್ದಂತೆ ಉಪಅರಣ್ಯಾಧಿಕಾರಿ ಶಶಿಕುಮಾರ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಕಪ್ಪು ಮುಂಗುಸಿಗಳು ಅಪರೂಪದ ಪ್ರಾಣಿಗಳಾಗಿದ್ದು, ಆಹಾರ ಸಿಗದೆ ಮೃತಪಟ್ಟಿರಬಹುದು ಎಂದು ಉಪಅರಣ್ಯಾಧಿಕಾರಿ ಶಶಿಕುಮಾರ್ ಶಂಕೆ ವ್ಯಕ್ತಪಡಿಸಿದ್ದಾರೆ.

Translate »