ಭಾರತೀಯರೆಲ್ಲರೂ ಒಂದೇ ಡಿಎನ್‍ಎ
ಮೈಸೂರು

ಭಾರತೀಯರೆಲ್ಲರೂ ಒಂದೇ ಡಿಎನ್‍ಎ

August 2, 2022

ಮೈಸೂರು, ಆ.1(ಆರ್‍ಕೆ)- ಭಾರತೀ ಯರೆಲ್ಲರೂ ಒಂದೇ ಡಿಎನ್‍ಎಯೊಂದಿಗೆ ಒಂದೇ ಆಗಿದ್ದಾರೆ ಎಂದು ಕೇಂದ್ರ ಮಾಜಿ ಸಚಿವ ಡಾ.ಸುಬ್ರಮಣಿಯನ್ ಸ್ವಾಮಿ ಪ್ರತಿಪಾದಿಸಿದ್ದಾರೆ.

ಮೈಸೂರಿನ ಪ್ರಾದೇ ಶಿಕ ಶಿಕ್ಷಣ ಸಂಸ್ಥೆಯಲ್ಲಿ ಏರ್ಪಡಿಸಿದ್ದ 60ನೇ ಸಂಸ್ಥಾಪನಾ ದಿನಾಚ ರಣೆ ಸಮಾರಂಭ ಉದ್ಘಾಟಿಸಿದ ಅವರು, ಸರ್ದಾರ್ ಪಣಿಕ್ಕರ್ ಸ್ಮಾರಕ ಉಪನ್ಯಾಸ ಮಾಡಿದರು. ಭಾರತೀಯರೆಲ್ಲರೂ ಒಂದೇ. ಅವರೆಲ್ಲರಿಗೂ ಇರುವುದು ಒಂದೇ ಡಿಎನ್‍ಎ. ಈ ದೇಶದಲ್ಲಿ ವಾಸಿಸುವ ಪ್ರತಿಯೊಬ್ಬ ಪ್ರಜೆಯ ತಾತ-ಮುತ್ತಾತಂದಿರು ಹಿಂದೂ ಗಳೇ ಆಗಿದ್ದರು ಎಂಬುದು ದೃಢ ಎಂದರು.

ನಮ್ಮ ದೇಶದಲ್ಲಿ ವಾಸಿಸುವವರೆಲ್ಲರೂ ಹಿಂದೂಗಳೇ ಎಂಬುದನ್ನು ನಾನು ಡಿಎನ್‍ಎ ಪರೀಕ್ಷೆ ಮೂಲಕ ಸಾಬೀತು ಪಡಿಸುತ್ತೇನೆ. ಹಿಂದೂಗಳಂತೆಯೇ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ ಡಿಎನ್‍ಎಗಳೂ ಒಂದೇ ಆಗಿರುತ್ತದೆ. ಅವ ರೆಲ್ಲರೂ ಒಂದೇ ಭೂಮಿಯ ಮಕ್ಕಳು. ಹಾಗಾಗಿ ಅವರು ಹೊರಗಡೆಯಿಂದ ಬಂದವರಲ್ಲ ಎಂಬುದನ್ನು ಒಪ್ಪಿಕೊಳ್ಳಲೇ ಬೇಕು ಎಂದೂ ಅವರು ನುಡಿದರು.

ದೇಶದ ವರ್ಣ ವ್ಯವಸ್ಥೆ ಬಗ್ಗೆ ಪ್ರಸ್ತಾ ಪಿಸಿದ ಅವರು, ವೈದಿಕ ಕಾಲದಿಂದಲೂ ಜಾತಿಪದ್ಧತಿ ಇರಲಿಲ್ಲ. ಜಾತಿ ವಂಶಾ ವಳಿಯೂ ಇರಲಿಲ್ಲ. ಆದರೆ, ಮಕ್ಕಳಲ್ಲಿನ ಗುಣ ಹಾಗೂ ಆರಿಸಿಕೊಂಡ ವೃತ್ತಿ ಆಧಾರದ ಮೇಲೆ ಜಾತಿ ನಿರ್ಧಾರವಾಗಿದೆ. ಜಾತಿಯು ಒಂದು ತಾತ್ಕಾಲಿಕ ಅಂಶವಾಗಿದ್ದು, ವರ್ಣ ಪದ್ಧತಿಯು ದೇವರು ದಯಪಾಲಿಸಿದ್ದಲ್ಲ. ಆದರೆ, ದುರದೃಷ್ಟವಶಾತ್ ನಮ್ಮಲ್ಲಿ ವರ್ಣ ವ್ಯವಸ್ಥೆಯು ಸಮಾಜವನ್ನು ವಿಭಜಿಸುತ್ತಿದೆ ಎಂದೂ ಡಾ|| ಸ್ವಾಮಿ ವಿಷಾದ ವ್ಯಕ್ತಪಡಿಸಿದರು. ಸತ್ಯ ಹೊರತರುವ ಸಲುವಾಗಿ ಈ ಹಿಂದೆ ಬ್ರಿಟಿಷರು ಬರೆದ ಚರಿತ್ರೆಯನ್ನು ಈಗ ಬದಲಾಯಿಸುವ ಕಾಲ ಬಂದಿದೆ. ನಾವೆಲ್ಲರೂ ಎಲ್ಲಾ ಭಾಷೆಗಳನ್ನೂ ಬೆಸೆಯುವ ಒಂದು ಭಾಷೆ ಕಲಿಯಬೇಕಿದೆ. ಆ ಭಾಷೆ ಸಂಸ್ಕøತ ವಾಗಿದೆ. ಅಮೇರಿಕಾದಲ್ಲಿಯೂ ಸಂಸ್ಕøತ ಭಾಷೆಯನ್ನು ಕಲಿಯಲಾರಂಭಿಸಿದ್ದಾರೆ. ಆದರೆ ನಮ್ಮ ದೇಶದಲ್ಲಿ ಸಂಸ್ಕøತದ ಬಗ್ಗೆ ಮಾತನಾಡಿದರೆ, ನೀವೊಬ್ಬನೂ ಕೋಮು ವಾದಿಯಾಗಿ ಬಿಂಬಿತರಾಗುತ್ತೀರಿ. ಇಲ್ಲಿ ಸಂಸ್ಕøತವು ಎಲ್ಲರನ್ನೂ ಒಗ್ಗೂಡಿಸುವ ಭಾಷೆಗಳ ಮಾತೃ ಭಾಷೆ ಎಂದು ಹೇಳಿದರು. ಪಾಶ್ಚಿಮಾತ್ಯ ದೇಶಗಳ ಸಂಶೋಧನೆಯು ಸಂಸ್ಕøತ ಕೇಂದ್ರೀಕೃತವಾಗಿದೆ. ಇದನ್ನು ಕಂಪ್ಯೂಟರ್ ನಲ್ಲೂ ಬಳಸಲಾಗುತ್ತಿದ್ದು, ಗೂಗಲ್‍ನಲ್ಲೂ ಇದರ ಬಗ್ಗೆ ಸುದೀರ್ಘ ಮಾಹಿತಿ ಲಭ್ಯವಾಗುತ್ತಿದೆ. ಸಂಸ್ಕøತ ವ್ಯಾಕರಣವು ಅದೆಷ್ಟು ಶಕ್ತಿಯುತವಾಗಿದೆ ಎಂದರೆ, ಮೆಷಿನ್ ಲರ್ನಿಂಗ್ ಹಾಗೂ ಆರ್ಟಿಫಿಷಿಯಲ್ ಇಂಟಿಲಿಜೆನ್ಸ್ (ಕೃತಕ ಬುದ್ಧಮತ್ತೆ)ನಲ್ಲೂ ಬಳಸಲಾಗುತ್ತಿದೆ ಎಂದೂ ಡಾ|| ಸುಬ್ರಮಣಿಯನ್‍ಸ್ವಾಮಿ ಇದೇ ಸಂದರ್ಭ ನುಡಿದರು. ಪ್ರಸ್ತುತ ಪರಿಸ್ಥಿತಿಯಲ್ಲಿ ನಾವು ಬ್ರಿಟಿಷರು ರಚಿಸಿರುವ ಚರಿತ್ರೆಯನ್ನೇ ಓದುತ್ತಿದ್ದೇವೆ. ಅದನ್ನು ನಾವು ಬ್ರಿಟಿಷರು ಹೇಳಿಕೊಟ್ಟಿದ್ದ ಜನರಿಂದ ಕಲಿಯುತ್ತಿದ್ದೇವೆ. ಬ್ರಿಟಿಷರ ಪ್ರಕಾರ ನಾವು ಚದುರಿ ಹೋಗಿದ್ದ, ಸಮಾಜವೆಂದೂ, ಅವರೇ ನಮ್ಮನ್ನು ಒಂದುಗೂಡಿಸಿದರೆಂಬುದನ್ನೂ ಬಿಂಬಿಸಿದ್ದಾರೆ. ಆದರೆ ಅದು ಸತ್ಯಕ್ಕೆ ದೂರವಾದುದು ಎನ್‍ಸಿಆರ್‍ಇಟಿಯು ಚರಿತ್ರೆಯನ್ನು ಈಗ ಪುನರ್ರಚಿಸು ತ್ತಿರುವುದು ಅತ್ಯಂತ ಶ್ಲಾಘನೀಯ ವಿಚಾರ ಎಂದರು.

Translate »