ಕೆ.ಆರ್.ಆಸ್ಪತ್ರೆವೊಂದಕ್ಕೇ ನಿತ್ಯ  12 ಟನ್ ಲಿಕ್ವಿಡ್ ಆಕ್ಸಿಜನ್ ಬೇಕು!
ಮೈಸೂರು

ಕೆ.ಆರ್.ಆಸ್ಪತ್ರೆವೊಂದಕ್ಕೇ ನಿತ್ಯ 12 ಟನ್ ಲಿಕ್ವಿಡ್ ಆಕ್ಸಿಜನ್ ಬೇಕು!

May 5, 2021

ಮೈಸೂರು, ಮೇ 4(ಆರ್‍ಕೆ)-ಉಸಿ ರಾಟದ ತೊಂದರೆ ಹಾಗೂ ಶ್ವಾಸಕೋಶ ಸೋಂಕಿರುವ ಕೊರೊನಾ ರೋಗಿಗಳಿಗೆ ಜೀವವಾಯು ಆಮ್ಲಜನಕ.
ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಸಕಾಲಕ್ಕೆ ಆಕ್ಸಿಜನ್ ಪೂರೈಕೆಯಾಗದೇ 24 ಮಂದಿ ಕೊರೊನಾ ಸೋಂಕಿತರು ಸಾವನ್ನಪ್ಪಿದ ಘಟನೆಯಿಂದÀ ಲಿಕ್ವಿಡ್ ಆಕ್ಸಿ ಜನ್ ಅಗತ್ಯತೆ ಇದೀಗ ಅರ್ಥವಾಗುತ್ತಿದೆ.

ಕೊರೊನಾ ವೈರಸ್ ಸೋಂಕಿನ ಎರ ಡನೇ ಅಲೆ ರಣಘೋರವಾಗಿದ್ದು, ಇದೀಗ ಮೈಸೂರಲ್ಲಿ ಪ್ರತೀ ದಿನ 10 ರಿಂದ 12 ಮಂದಿಯನ್ನು ಬಲಿ ತೆಗೆದುಕೊಳ್ಳುತ್ತಿರು ವುದು ಸರ್ಕಾರ ಹಾಗೂ ಜಿಲ್ಲಾಡಳಿತದ ನಿದ್ದೆಗೆಡಿಸಿದೆ. ದಿನದಿಂದ ದಿನಕ್ಕೆ ಕೊರೊನಾ ಪಾಸಿಟಿವ್ ಪ್ರಕರಣಗಳಷ್ಟೇ ಹೆಚ್ಚುತ್ತಿದ್ದರೆ ತಲೆಕೆಡಿಸಿಕೊಳ್ಳಬೇಕಾಗಿರಲಿಲ್ಲ. ಬದಲಾಗಿ ಸಾವಿನ ಸಂಖ್ಯೆಯೂ ಏರುತ್ತಿರುವುದು ಆತಂಕ ಮೂಡಿಸಿದೆ.

ಆಕ್ಸಿಜನ್ ಕೊರತೆಯೂ ಕಾರಣ: ದಿನೇ ದಿನೆ ಸೋಂಕಿತರ ಸಂಖ್ಯೆ ಏರುತ್ತಿದ್ದಂ ತೆಯೇ ಮೈಸೂರಿನ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್‍ಗಳು ಭರ್ತಿಯಾಗು ತ್ತಿವೆ. ಅದರಲ್ಲೂ ಆಕ್ಸಿಜನೇಟೆಡ್ ಮತ್ತು ವೆಂಟಿಲೇಟರ್ ಬೆಡ್‍ಗಳಿಗೆ ಭಾರೀ ಬೇಡಿಕೆ ಇದೆ. ಹಣ ಕೊಡುತ್ತೇವೆಂದರೂ ಕೊರೊನಾ ಸೋಂಕಿತರನ್ನು ಸೇರಿಸಲು ಮೈಸೂರಲ್ಲಿ ಬೆಡ್‍ಗಳು ಸಿಗುತ್ತಿಲ್ಲ.

ಹಗಲು-ರಾತ್ರಿ ಎನ್ನದೇ ಆಕ್ಸಿಜನೇಟೆಡ್ ಬೆಡ್‍ಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆ ದಾಡಿದರೂ ಪ್ರಯೋಜನವಾಗದೇ ಎಷ್ಟೋ ರೋಗಿಗಳು ವಾಹನಗಳಲ್ಲೇ ಕೊನೆಯುಸಿ ರೆಳೆಯುತ್ತಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿ ಯಲ್ಲಿ ಲಿಕ್ವಿಡ್ ಆಕ್ಸಿಜನ್‍ನಿಂದ ಮಾತ್ರ ಜೀವ ಉಳಿಸಲು ಸಾಧ್ಯವಾಗಿದ್ದು, ದುರದೃಷ್ಟವ ಶಾತ್ ಮೈಸೂರಲ್ಲಿ ಆಕ್ಸಿಜನ್ ಕೊರತೆ ಗಂಭೀರವಾಗಿದೆ.

12 ಟನ್ ಆಕ್ಸಿಜನ್ ಅಗತ್ಯ: ಮೈಸೂ ರಿನ ದೊಡ್ಡಾಸ್ಪತ್ರೆ ಎಂದೇ ಖ್ಯಾತಿಯಾ ಗಿರುವ ಕೃಷ್ಣರಾಜೇಂದ್ರ ಆಸ್ಪತ್ರೆಯ ಕಲ್ಲು ಕಟ್ಟಡ (ಸರ್ಜಿಕಲ್ ವಾರ್ಡ್) ಮತ್ತು ಮೆಡಿಸಿನ್ ವಾರ್ಡ್‍ಗಳಲ್ಲಿ 500 ಮಂದಿ ಕೋವಿಡ್ ಸೋಂಕಿತರನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಆ ಪೈಕಿ 72 ಮಂದಿ ತೀವ್ರ ನಿಗಾ ಘಟಕ (ಐಸಿಯು)ಗಳ ವೆಂಟಿಲೇಟರ್ ಸಪೋರ್ಟ್‍ನಲ್ಲಿ ಚಿಕಿತ್ಸೆ ಪಡೆಯುತ್ತಿ ದ್ದರೆ, 428 ಮಂದಿಗೆ ಆಕ್ಸಿಜನ್ ಪೂರೈಸಿ ಚಿಕಿತ್ಸೆ ನೀಡಲಾಗುತ್ತಿದೆ. ಒಟ್ಟು 500 ಮಂದಿ ರೋಗಿಗಳಿಗೆ ಪ್ರತೀ ನಿತ್ಯ 3 ಲಕ್ಷ ರೂ. ಮೌಲ್ಯದ 12 ಟನ್ ತೂಗುವ 1 ಲೋಡ್ ಸಿಲಿಂಡರ್ ಬೇಕಾಗುತ್ತದೆ ಎಂದು ಕೆ.ಆರ್.ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ಎನ್.ನಂಜುಂಡಸ್ವಾಮಿ ತಿಳಿಸಿದ್ದಾರೆ.

ನಮಗೆ ಬಳ್ಳಾರಿಯಿಂದ ಟ್ಯಾಂಕರ್‍ನಲ್ಲಿ ಪ್ರತೀ ದಿನ ಆಕ್ಸಿಜನ್ ಬರುತ್ತದೆ. ಕಲ್ಲು ಕಟ್ಟಡದ ಆವರಣದಲ್ಲಿ ಸ್ಥಾಪಿಸಿರುವ ಸ್ಥಾವರದಲ್ಲಿ ದಾಸ್ತಾ ನಿರಿಸಿಕೊಂಡು ಅಲ್ಲಿಂದ ಪೈಪ್‍ಲೈನ್ ಮೂಲಕ ಇಡೀ ಆಸ್ಪತ್ರೆಯ ಆಕ್ಸಿಜನೇಟೆಡ್ (ಅeಟಿಣಡಿಚಿ ಟiseಜ sಥಿsಣem) ಹಾಸಿಗೆಗಳಲ್ಲಿರುವ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಆಮ್ಲಜನಕ ಪೂರೈಸ ಲಾಗುತ್ತಿದೆ ಎಂದು ತಿಳಿಸಿದರು.

ಒಂದು ದಿನ ಆಕ್ಸಿಜನ್ ಬರುವುದು ತಡವಾ ದರೂ, ನಮಗೆ ಆಸ್ಪತ್ರೆ ನಿರ್ವಹಣೆ ಮಾಡಲು ದುಸ್ತರವಾಗುತ್ತದೆ. ಈಗಂತೂ ಆಮ್ಲಜನಕ ವಿಲ್ಲದೇ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುವುದಿಲ್ಲ ಎಂದು ಡಾ. ನಂಜುಂಡ ಸ್ವಾಮಿ ತಿಳಿಸಿದರು.

1050 ಹಾಸಿಗೆ ಸಾಮಥ್ರ್ಯದ ಕೆ.ಆರ್. ಆಸ್ಪತ್ರೆಯಲ್ಲೀಗ ಅರ್ಧದಷ್ಟು ಹಾಸಿಗೆಯನ್ನು ಕೋವಿಡ್ ಸೋಂಕಿತರಿಗಾಗಿಯೇ ಮೀಸ ಲಿರಿಸಿದ್ದು, ರೋಗಿಗಳಿಗೆ ಆಕ್ಸಿಜನ್, ಊಟ-ತಿಂಡಿ ಪೂರೈಕೆ, ಔಷಧಿ ಪೂರೈಸುವುದೇ ಪ್ರಧಾನ ಕೆಲಸವಾಗಿದ್ದು, ಕೋವಿಡೇತರ ರೋಗಿಗಳನ್ನು ತುರ್ತು ವೈದ್ಯ ಸೇವೆ ಇದ್ದವರಿಗೆ ಮಾತ್ರ ಚಿಕಿತ್ಸೆ ನೀಡಲು ಸಾಧ್ಯವಾಗಿದೆ ಎಂದು ಡಾ. ನಂಜುಂಡಸ್ವಾಮಿ ಅವರು ತಿಳಿಸಿದರು.

ಅರ್ಧ ದಿನ ಮಾತ್ರ ಓಪಿಡಿ: ಎಲ್ಲಾ ವೈದ್ಯರು, ನರ್ಸ್, ಗ್ರೂಪ್ `ಡಿ’ ನೌಕರರು ಕೋವಿಡ್ ರೋಗಿಗಳ ಸೇವೆಯಲ್ಲಿ ನಿರತ ರಾಗಿರುವುದರಿಂದ ಕೆ.ಆರ್.ಆಸ್ಪತ್ರೆಯ ಹೊರ ರೋಗಿ ವಿಭಾಗ (ಔPಆ)ವನ್ನು ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆವರೆಗೆ ಮಾತ್ರ ಸೀಮಿತಗೊಳಿಸಲಾಗಿದೆ. ಕೊರೊನಾ ಸಂಕಷ್ಟ ಪರಿಸ್ಥಿತಿ ಇರುವ ಕಾರಣ, ತುರ್ತು ಸೇವೆ ಅಗತ್ಯವಿರುವವರು ಮಾತ್ರ ಆಸ್ಪತ್ರೆಗೆ ಬರಬೇಕೆಂದು ಅವರು ಮನವಿ ಮಾಡಿದ್ದಾರೆ.

Translate »