ಎಲ್ಲಾ ಪರೀಕ್ಷಾ  ಕೇಂದ್ರದ ಬಗ್ಗೆಯೂ ತನಿಖೆಯಾಗಬೇಕು
ಮೈಸೂರು

ಎಲ್ಲಾ ಪರೀಕ್ಷಾ ಕೇಂದ್ರದ ಬಗ್ಗೆಯೂ ತನಿಖೆಯಾಗಬೇಕು

May 3, 2022

ಮೈಸೂರು, ಮೇ ೨(ಎಸ್‌ಬಿಡಿ)- ಪಿಎಸ್‌ಐ ನೇಮಕಾತಿ ಅಕ್ರಮ ಸಂಬAಧ ರಾಜ್ಯದ ಎಲ್ಲಾ ಪರೀಕ್ಷಾ ಕೇಂದ್ರದ ಬಗ್ಗೆಯೂ ತನಿಖೆಯಾಗ ಬೇಕು ಎಂದು ಶಾಸಕ ಪ್ರಿಯಾಂಕ ಖರ್ಗೆ ಆಗ್ರಹಿ ಸಿದ್ದಾರೆ. ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ೫೪೫ ಪಿಎಸ್‌ಐ ಹುದ್ದೆಗಳ ನೇಮ ಕಾತಿಯಲ್ಲಿ ಅಕ್ರಮ ಸಂಬAಧ ಸಿಐಡಿ ಪೊಲೀಸರು ವಶಕ್ಕೆ ಪಡೆದಿರುವುದು ಮಧ್ಯ ವರ್ತಿಗಳನ್ನು ಮಾತ್ರ. ಅರ‍್ಯಾರು ಕಿಂಗ್ ಪಿನ್‌ಗಳಲ್ಲ. ಗೃಹ ಸಚಿವ ಆರಗ ಜ್ಞಾನೇಂದ್ರಗೆ ಆಡಳಿತ ನಡೆಸಲು ಸಾಧ್ಯವಾಗದೆ ಕೈಕಟ್ಟಿ ಕುಳಿತಿದ್ದಾರೆ. ಅವರಿಗೆ ಕೇಶವ ಕೃಪಾದಿಂದ ಆದೇಶ ಬರುತ್ತಿದೆ. ರಾಜ್ಯದ ಎಲ್ಲಾ ಪರೀಕ್ಷಾ ಕೇಂದ್ರದ ಬಗ್ಗೆ ತನಿಖೆ ನಡೆಸಿ, ಪಿಎಸ್‌ಐ ನೇಮಕಾತಿ ಅಕ್ರಮದ ಕಿಂಗ್ ಪಿನ್‌ಗಳನ್ನು ಹೊರಗೆಳೆಯಬೇಕು. ಬಿಟ್ ಕಾಯಿನ್ ಪ್ರಕ ರಣದ ತನಿಖೆ ಚುರುಕುಗೊಂಡರೆ ಬಿಜೆಪಿ ಯಿಂದ ರಾಜ್ಯಕ್ಕೆ ಮತ್ತೆ ೩ನೇ ಮುಖ್ಯ ಮಂತ್ರಿ ಸಿಗಬಹುದು ಎಂದು ಹೇಳಿದರು.

ಸಂಸದ ಪ್ರತಾಪ್ ಸಿಂಹ ಟೀಕೆಗೆ ಪ್ರತಿ ಕ್ರಿಯಿಸಿ, ಸಿಐಡಿ ಪೊಲೀಸರು ನನಗೆ ಯಾವ ನೋಟಿಸ್ ನೀಡಿದ್ದಾರೆ ಎನ್ನು ವುದನ್ನು ಸರಿಯಾಗಿ ತಿಳಿಯಲಿ. ನೋಟಿಸ್‌ಗೆ ಕಾನೂನು ಪ್ರಕಾರ ನಾನು ನಡೆದುಕೊಂಡಿದ್ದೇನೆ. ಪ್ರತಾಪ್ ಸಿಂಹಗೆ ಕಾನೂನಿನ ಅರಿವಿಲ್ಲ. ಮೊದಲು ಅವರ ಕೆಲಸ ಸರಿಯಾಗಿ ಮಾಡಲಿ ಎಂದರು.

Translate »