ಪಿಎಸ್‌ಐ ನೇಮಕಾತಿ ಹಗರಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಪಾತ್ರ: ಕಾಂಗ್ರೆಸ್ ಗಂಭೀರ ಆರೋಪ
ಮೈಸೂರು

ಪಿಎಸ್‌ಐ ನೇಮಕಾತಿ ಹಗರಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಪಾತ್ರ: ಕಾಂಗ್ರೆಸ್ ಗಂಭೀರ ಆರೋಪ

May 3, 2022

ಸಚಿವರ ರಾಜೀನಾಮೆಗೆ ಕಾಂಗ್ರೆಸ್ ವಕ್ತಾರ ವಿ.ಎಸ್.ಉಗ್ರಪ್ಪ ಆಗ್ರಹ
 ಕೆಪಿಸಿಸಿ ಅಧ್ಯಕ್ಷ ಡಿಕೆಶಿಯಿಂದಲೂ ಸಚಿವರ ಮೇಲೆ ಆರೋಪ
 ಸಹೋದರನ ವಿಚಾರಣೆಗೆ ಅವಕಾಶ ನೀಡದ ಸಚಿವರು: ವಾಗ್ದಾಳಿ
 ಸಿಐಡಿ ವಿಚಾರಣೆ ವೇಳೆ ಅಭ್ಯರ್ಥಿಯಿಂದ ಹಣ ನೀಡಿದ ಮಾಹಿತಿ

ಬೆಂಗಳೂರು,ಮೇ ೨-ಪಿಎಸ್‌ಐ ನೇಮ ಕಾತಿ ಪರೀಕ್ಷೆ ಹಗರಣದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ಅವರ ಸಹೋದರನ ಪಾತ್ರವಿದೆ ಎಂದು ಕೆಪಿಸಿಸಿ ವಕ್ತಾರ ವಿ.ಎಸ್. ಉಗ್ರಪ್ಪ ಆರೋಪಿಸಿ ದರೆ, ಹಗರಣದಲ್ಲಿ ಪ್ರಭಾವಿ ಸಚಿವ ರೊಬ್ಬರ ಪಾತ್ರವಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ವಿ.ಎಸ್.ಉಗ್ರಪ್ಪ, ಈ ಹಗರಣ ದಲ್ಲಿ ಸಚಿವ ಅಶ್ವತ್ಥನಾರಾಯಣ ಸಹೋ ದರ ಸತೀಶ್ ಅವರ ಪಾತ್ರವಿದೆ. ೪ನೇ ಟಾಪರ್ ಆಗಿ ಬಂದಿರುವ ಅಭ್ಯರ್ಥಿ ದರ್ಶನ್ ಗೌಡರಿಂದ ಸತೀಶ್ ೮೦ ಲಕ್ಷ ರೂ. ಪಡೆದಿದ್ದರು ಎಂದರು. ಈ ವಿಚಾರ ದಲ್ಲಿ ಸಚಿವ ಅಶ್ವತ್ಥನಾರಾಯಣ ಪ್ರಭಾವ ಬೀರಿ ತಮ್ಮ ಸಹೋದರನನ್ನು ರಕ್ಷಿಸಿ ದ್ದಾರೆ. ಅವರು ಉಸ್ತುವಾರಿ ವಹಿಸಿರುವ ರಾಮನಗರ ಜಿಲ್ಲೆಯ ಮಾಗಡಿ ತಾಲೂಕು ವೊಂದರಲ್ಲೇ ಮೂರರಿಂದ ಐವರು ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಇದನ್ನು ನೋಡಿದರೆ ಈ ಹಗರಣದಲ್ಲಿ ಸಚಿವರ ಪಾಲ್ಗೊಳ್ಳುವಿಕೆ ಸ್ಪಷ್ಟವಾಗಿದೆ. ಹೀಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಚಿವ ಅಶ್ವತ್ಥ ನಾರಾಯಣ ಅವರಿಂದ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದರು. ನಾನೊಬ್ಬ ವಕೀಲನು ಕೂಡ ಹೌದು. ಹಗರಣವೂ ಸಚಿವ ಅಶ್ವತ್ಥನಾರಾಯಣ ಕಡೆಗೂ ಬೆರಳು ತೋರಿಸುತ್ತಿದೆ. ನೀವು ಗಂಡಸ್ತನದ ಬಗ್ಗೆ ಮಾತನಾಡಿದ್ರಿ. ನಿಮಗೆ ಗಂಡಸ್ತನವಿದ್ದರೆ, ನಿಮಗೆ ತಾಕತ್ತಿದ್ದರೆ, ಧಮ್ ಇದ್ದರೇ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿ. ಹೈಕೋರ್ಟ್ನ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸಿ ಎಂದು ಉಗ್ರಪ್ಪ ಆಗ್ರಹಿಸಿದರು.

ಮತ್ತೊಂದೆಡೆ ಡಿ.ಕೆ.ಶಿವಕುಮಾರ್ ಅವರು ಡಾ. ಅಶ್ವತ್ಥನಾರಾಯಣ ಅವರ ಹೆಸರನ್ನು ಪರೋಕ್ಷವಾಗಿ ಪ್ರಸ್ತಾಪಿಸಿ, ಆರೋಪ ಮಾಡಿ ದ್ದಾರೆ. ಹಗರಣದಲ್ಲಿ ಪ್ರಭಾವಿ ಶಾಸಕರ ಕೈವಾಡ ಇದೆ ಎಂದಿರುವ ಅವರು, ನಾನು ಆ ಸಚಿ ವರ ಬಗ್ಗೆ ಮಾತನಾಡಿ ಬಿಡಬಹುದು ಎಂಬ ಭಾವನೆಯಿಂದ ಯರ‍್ಯಾರೋ ಕರೆ ಮಾಡುತ್ತಿದ್ದಾರೆ. ಅಣ್ಣ ಅವರ ಬಗ್ಗೆ ಮಾತ ನಾಡಬೇಡಿ. ಅವರು ಈ ಬಾರಿ ಮುಖ್ಯ ಮಂತ್ರಿ ಆಗುತ್ತಾರೆ ಅವರಿಗೆ ತೊಂದರೆ ಕೊಡ ಬೇಡಿ ಎಂದು ಹೇಳುತ್ತಿದ್ದಾರೆ ಎಂದ ಡಿಕೆಶಿ, ಪ್ರಭಾವಿ ಸಚಿವರೊಬ್ಬರು ಕರೆ ಮಾಡಿ, ಅಕ್ರಮ ದಲ್ಲಿ ಭಾಗಿಯಾಗಿರುವ ಒಬ್ಬರನ್ನು ಪೊಲೀ ಸರಿಂದ ಬಿಡಿಸಿದ್ದಾರೆ ಎಂಬ ಮಾಹಿತಿ ಇದೆ. ಯಾರು ಕರೆ ಮಾಡಿದ್ದು, ಅವರು ಯಾಕೆ ಕರೆ ಮಾಡಿದರು, ಅವರ ಪಾತ್ರ ಏನು ಎಂಬುದರ ಬಗ್ಗೆ ತನಿಖೆ ನಡೆಸಲಿ ಎಂದರು. ಸಿಐಡಿ ಅಧಿಕಾರಿಗಳು ಪಿಎಸ್‌ಐ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಹಳ್ಳಿಗಳಿಗೆ ಹೋಗಿದ್ದಾರಾ ಎಂದು ಪ್ರಶ್ನಿಸಿದ ಅವರು, ಹಾಗೇ ಅಧಿಕಾರಿಗಳು ಹಳ್ಳಿಗಳಿಗೆ ಹೋಗಿದ್ದರೆ, ಅಭ್ಯರ್ಥಿಗಳು ಎಷ್ಟು ದುಡ್ಡು ಕೊಟ್ಟಿದ್ದಾರೆ ಎಂಬುದನ್ನು ಕಲೆ ಹಾಕಬಹುದಿತ್ತು ಎಂದು ಹೇಳಿದರು.ಡಿಕೆಶಿ ಅವರ ಈ ಹೇಳಿಕೆ ಸುದ್ದಿವಾಹಿನಿಗಳಲ್ಲಿ ಪ್ರಸಾರವಾಗುತ್ತಲೇ ಅದಕ್ಕೆ ಸಚಿವ ಅಶ್ವತ್ಥನಾರಾಯಣ ತಿರುಗೇಟು ನೀಡಿದಾಗ ಮತ್ತೇ ಸುದ್ದಿಗಾರರ ಜೊತೆ ಮಾತನಾಡಿದ ಡಿಕೆಶಿ, ನಾನು ಯಾವ ಸಚಿವರ ಹೆಸರನ್ನು ಹೇಳಿಲ್ಲ. ಹಾಗಿರುವಾಗ ಕುಂಬಳಕಾಯಿ ಕಳ್ಳ ಎಂದರೆ ಇವರು ಯಾಕೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ ಎಂದು ಪ್ರಶ್ನಿಸಿದರು. ಮುಖ್ಯಮಂತ್ರಿಗಳ ಮುಂದೆಯೇ ರಾಮನಗದಲ್ಲಿ ಯಾರು ಗಂಡಸರು ಇದ್ದಾರೆ ಎಂದು ಕೇಳಿದ್ದರು. ನಾವು ಜೋರಾಗಿ ಅಧಿಕಾರ ಚಲಾಯಿಸಿದರೆ ಡಿ.ಕೆ.ಶಿವಕುಮಾರ್ ಉಸಿರು ನಿಂತು ಹೋಗುತ್ತದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ರಾಮನಗರದಲ್ಲಿ ಅವರೊಬ್ಬರೇ ಗಂಡಸರು. ನಾವೆಲ್ಲಾ ಹೆಂಗಸರು. ನಾನು, ನನ್ನ ತಮ್ಮ, ಅನಿತಾ ಕುಮಾರಸ್ವಾಮಿ ಎಲ್ಲರೂ ಅವರ ಗಂಡಸ್ತನ ನೋಡಿ ಗಢಗಢ ನಡಗುತ್ತಿದ್ದೇವೆ ಎಂದು ಡಿಕೆಶಿ ಹೇಳಿದರು. ಅದೇ ವೇಳೆ ಈ ಹಗರಣದಲ್ಲಿ ಪ್ರಭಾವಿ ಸಚಿವರ ಕುಟುಂಬಸ್ಥರು ಹಾಗೂ ಸಂಬAಧಿಕರು ಭಾಗಿಯಾಗಿದ್ದಾರೆ. ಸಿಎಂ ಮುಲಾಜಿಲ್ಲದೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸಿಐಡಿ ಎದುರು ಮತ್ತಿಬ್ಬರು ಶರಣಾಗತಿ

ಕಲಬುರಗಿ, ಮೇ ೨- ಪಿಎಸ್‌ಐ ನೇಮಕಾತಿ ಪರೀಕ್ಷೆಯ ಅಕ್ರಮಕ್ಕೆ ಸಂಬAಧಿಸಿದAತೆ ಮತ್ತೋರ್ವ ಪ್ರಮುಖ ಆರೋಪಿ ಬಂಧನ ವಾಗಿದ್ದು, ಕಳೆದ ೨೦ ದಿನಗಳಿಂದ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ನೀರಾವರಿ ಇಲಾಖೆಯ ಸಹಾಯಕ ಎಂಜಿನಿಯರ್ ಮಂಜು ನಾಥ ಮೇಳಕುಂದಿ ಭಾನುವಾರ ಖುದ್ದಾಗಿ ಸಿಐಡಿಗೆ ಶರಣಾಗಿದ್ದಾರೆ.
ಕಲಬುರಗಿಯಲ್ಲಿ ರಹಸ್ಯವಾಗಿ ಆಟೋದಲ್ಲಿ ಬಂದ ಆರೋಪಿ ಮಂಜುನಾಥ್, ಇಲ್ಲಿನ ಐವಾನ್ ಇ ಶಾಹಿ ಅತಿಥಿಗೃಹದಲ್ಲಿ ಸಿಐಡಿ ಕ್ಯಾಂಪ್ ಕಚೇರಿಗೆ ಬಂದರು. ಚಾಲಕನಿಗೆ ಹಣ ಕೊಟ್ಟ ನಂತರ ತಮ್ಮ ಜೊತೆಗೆ ತಂದಿದ್ದ ಬ್ಯಾಗನ್ನು ಹೆಗಲೇರಿಸಿಕೊಂಡು ಒಳಗೆ ಹೋದರು. ಈ ವೇಳೆ ಅಲ್ಲಿಯೇ ನೆರೆದಿದ್ದ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಆರೋಪಿ ಮಂಜುನಾಥ್, ‘ನನ್ನದೇನೂ ತಪ್ಪಿಲ್ಲ. ಸುಮ್ಮನೇ ಪ್ರಕರಣದಲ್ಲಿ ಸಿಕ್ಕಿಸುತ್ತಿದ್ದಾರೆ’ ಎಂದು ಹೇಳಿದರು. ಅಷ್ಟರಲ್ಲಿ ಹೊರಗೆ ಬಂದ ಪೊಲೀಸರು ಅವರನ್ನು ಕಚೇರಿಯ ಒಳಗೆ ಕರೆದೊಯ್ದರು. ಇಷ್ಟು ದಿನ ಸಣ್ಣ ಸುಳಿವೂ ಸಿಗದಂತೆ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಮಂಜುನಾಥ್, ಏಕಾಏಕಿ ಸಿಐಡಿ ಅಧಿಕಾರಿಗಳ ಮುಂದೆ ಹಾಜರಾಗಿದ್ದು ಅಚ್ಚರಿ ಮೂಡಿಸಿದೆ. ಮಂಜುನಾಥ ಸೇರಿದಂತೆ ಮುಖ್ಯಶಿಕ್ಷಕ ಕಾಶಿನಾಥ, ಮಹಿಳಾ ಅಭ್ಯರ್ಥಿ ಶಾಂತಿಬಾಯಿ ಹಾಗೂ ಒಬ್ಬ ಶಿಕ್ಷಕಿ ವಿರುದ್ಧ ನ್ಯಾಯಾಲಯ ಬಂಧನ ವಾರೆಂಟ್ ಕೂಡ ಹೊರಡಿಸಿತ್ತು. ಅಲ್ಲದೆ ಪ್ರಕರಣದ ಮತ್ತೋರ್ವ ಪ್ರಮುಖ ಆರೋಪಿ ದಿವ್ಯಾ ಹಾಗರಗಿಯನ್ನು ಕೂಡ ಅಧಿಕಾರಿಗಳು ಬಂಧಿಸಿದ್ದಾರೆ.

ಮತ್ತೋರ್ವ ಆರೋಪಿ ಪೊಲೀಸರಿಗೆ ಶರಣು: ರಾಜ್ಯಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವ ಪಿಎಸ್‌ಐ ಪರೀಕ್ಷೆಯ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬAಧಿಸಿದAತೆ ಮತ್ತೋರ್ವ ಪ್ರಮುಖ ಆರೋಪಿಯ ಬಂಧನವಾಗಿದ್ದು, ಆಕ್ರಮ ನಡೆದ ಜ್ಞಾನಜ್ಯೋತಿ ಶಾಲೆಯ ಮುಖ್ಯೋಪಾಧ್ಯಾಯ ಕಾಶಿನಾಥ್ ಸೋಮವಾರ ಪೊಲೀಸರಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ೨೨ ದಿನಗಳಿಂದ ತಲೆಮರೆಸಿಕೊಂಡಿದ್ದ ಕಾಶಿನಾಥ್, ಸೋಮವಾರ ಬೆಳಿಗ್ಗೆ ೮.೩೦ರ ಸುಮಾರಿಗೆ ಸಿಐಡಿ ತಂಡದ ಎದುರಿಗೆ ಶರಣಾಗಿದ್ದು, ಆ ಮೂಲಕ ಶಾಲೆಯಲ್ಲಿನ ಅಕ್ರಮಕ್ಕೆ ಸಂಬAಧಿಸಿದ ಬಹುತೇಕರು ಈಗ ಬಂಧನವಾದAತಾ ಗಿದೆ. ಈ ಮೂಲಕ ಈ ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ೨೬ಕ್ಕೆ ಏರಿದಂತಾಗಿದೆ. ಜ್ಞಾನಜ್ಯೋತಿ ಶಾಲೆಯ ಮುಖ್ಯೋಪಾಧ್ಯಾಯ ಕಾಶಿನಾಥ್ಮೂಲ ಗಳ ಪ್ರಕಾರ ಒಎಂಆರ್ ಶೀಟ್ ತಿದ್ದುಪಡಿ ಹಾಗೂ ಬ್ಲೂಟೂತ್ ಬಳಕೆಯಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಕಾಶಿನಾಥ್ ಪ್ರಮುಖ ಪಾತ್ರ ವಹಿಸಿದ್ದ ಎನ್ನಲಾಗಿದೆ. ಜ್ಞಾನಜ್ಯೋತಿ ಶಾಲೆಯ ಮುಖ್ಯಸ್ಥೆ ಹಾಗೂ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಅಕ್ರಮದಲ್ಲಿ ಶಾಲೆಯ ಮುಖ್ಯ ಗುರು ಕಾಶಿನಾಥ್ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಸಿಐಡಿ ತಂಡದ ಎದುರು ಹೇಳಿದ್ದರಿಂದ ಕಾಶಿನಾಥ್ ಶರಣಾಗತಿ ಅತ್ಯಂತ ಮಹತ್ವ ಪಾತ್ರ ವಹಿಸಿದೆ.

ಬಂಧಿತರು ಟಾಪ್ ೪೫ ರ‍್ಯಾಂಕ್ ಒಳಗಡೆಯವರು: ಪೊಲೀಸ್ ಇಲಾಖೆಯಲ್ಲಿ ಟಾಪರ್ಸ್ ಗಳಿಗೆ ಬೇಗ ಬಡ್ತಿ ಸಿಗುತ್ತದೆ. ಈ ಆಸೆಗೆ ಬಿದ್ದು ಪಿಎಸ್‌ಐ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಅಕ್ರಮ ಎಸಗಿರುವ ಅನುಮಾನ ಬಂದಿದೆ. ಬಂಧಿತ ಆರೋಪಿಗಳೆಲ್ಲರೂ ಪಿಎಸ್‌ಐ ಪರೀಕ್ಷೆಯಲ್ಲಿ ಟಾಪರ್ಸ್ ಆಗಿದ್ದಾರೆ. ಇಲಾಖೆಯಲ್ಲಿ ಪ್ರಥಮವಾಗಿ ೫೦ ಜನರಿಗೆ ಬಡ್ತಿ ಸಿಗುತ್ತದೆ. ಬಂಧಿತ ಆರೋಪಿಗಳೆಲ್ಲರೂ ಟಾಪ್ ೪೫ ರ‍್ಯಾಂಕ್ ಒಳಗಡೆ ಇದ್ದಾರೆ.

ಸಾಕ್ಷಾö್ಯಧಾರಗಳಿದ್ದರೆ ಬಿಡುಗಡೆ ಮಾಡಲಿ

ಬೆಂಗಳೂರು, ಮೇ ೨- ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ತಮ್ಮ ಸಹೋದರನ ಪಾತ್ರವಿದೆ ಎಂಬ ಕಾಂಗ್ರೆಸ್ ನಾಯಕರ ಆರೋಪಗಳಿಗೆ ತಿರು ಗೇಟು ನೀಡಿರುವ ಸಚಿವ ಡಾ. ಅಶ್ವತ್ಥ್ನಾರಾಯಣ್, ನಿರಾಧಾರವಾದ ಆರೋಪ ಮಾಡುವುದನ್ನು ಬಿಟ್ಟು, ಸಾಕ್ಷಾö್ಯಧಾರಗಳಿದ್ದರೆ ಬಿಡುಗಡೆ ಮಾಡಲಿ ಎಂದು ಸವಾಲೆಸೆದಿದ್ದಾರೆ.

ಈ ಸಂಬAಧ ಸರಣ ಟ್ವೀಟ್ ಮಾಡಿರುವ ಅವರು, ಭ್ರಷ್ಟಾಚಾರ ದಲ್ಲಿ ಪಳಗಿರುವ ಕೈ ನಾಯಕರಿಗೆ ಭ್ರಷ್ಟ ರಹಿತರನ್ನು ನೋಡಿದಾಗ ಅಸೂಯೆ ಹಾಗೂ ಭಯ ಉಂಟಾಗುವುದರಲ್ಲಿ ಆಶ್ಚರ್ಯವಿಲ್ಲ. ಹಿಟ್ ಅಂಡ್ ರನ್ ರಾಜಕೀಯ ಬಿಟ್ಟು ಸೂಕ್ತ ದಾಖಲೆಯಿದ್ದರೆ ಒದಗಿಸಿ. ಪುರಾವೆಯಿಲ್ಲದೆ ಮಾತನಾಡುವ ಭ್ರಷ್ಟಾಚಾರವೆಂಬ ಕಾಯಿಲೆಯಿಂದ ಬಳಲುತ್ತಿರುವ ಕಾಂಗ್ರೆಸ್ಸಿಗರಿಗೆ ಎಲ್ಲವೂ ಹಳದಿಯಾಗಿ ಕಾಣುವುದು ಸಹಜವಲ್ಲವೆ? ಗಾಳಿಯಲ್ಲಿ ಗುಂಡು ಹಾರಿಸುವ ಕೆಪಿಸಿಸಿ ಅಧ್ಯಕ್ಷರ ಕೀಳುಮಟ್ಟದ ರಾಜಕಾರಣ ಇಂದು-ನಿನ್ನೆಯದಲ್ಲ. ನಿರಾಧಾರವಾದ ಆರೋಪ ಮಾಡುವ ಬದಲು ಸಾಕ್ಷö್ಯವಿದ್ದರೆ ಬಿಡುಗಡೆ ಮಾಡಲಿ. ಪಿಎಸ್‌ಐ ನೇಮಕಾತಿ ಅಕ್ರಮದ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಭ್ರಷ್ಟಾಚಾರ ರಹಿತವಾಗಿ ಆಡಳಿತ ನಡೆಸುವವರೆಗೆ ಮಸಿ ಬಳಿಯುವ ವಿಫಲ ಯತ್ನ ಬಿಡಿ ಎಂದು ಟ್ವೀಟ್ ಮಾಡಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿ ವೇಳೆ ವಿ.ಎಸ್. ಉಗ್ರಪ್ಪ ಮತ್ತು ಸಲೀಂ ಗುಸುಗುಸು ಮಾತನಾಡಿದ ವೀಡಿಯೋವನ್ನು ಅಪ್ಲೋಡ್ ಮಾಡಿ, ಕೆಪಿಸಿಸಿ ಅಧ್ಯಕ್ಷರನ್ನು ಕಲೆಕ್ಷನ್ ಗಿರಾಕಿ ಎಂದಿದ್ದ ಉಗ್ರಪ್ಪ ಅವರು, ಮೇಲೇಳದ ಡಿ.ಕೆ.ಶಿವಕುಮಾರ್ ಅವರ ತಕ್ಕಡಿಯನ್ನು ಮೇಲೆತ್ತುವ ಪ್ರಯತ್ನಕ್ಕೆ ಕೈ ಹಾಕಿದಂತೆ ಕಾಣುತ್ತಿದೆ. ಉಗ್ರಪ್ಪ ಅವರಿಗೆ ತನ್ನ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ? ಇದೆ ಎನ್ನುವುದಾದರೆ ತಾವು ಮಾಡಿರುವ ಆರೋಪವನ್ನು ಸಾಬೀತು ಮಾಡಲಿ. ಇಲ್ಲವೇ ಕ್ಷಮೆಯಾಚಿಸಲಿ ಎಂದು ಟ್ವೀಟ್ ಮಾಡಿದ್ದಾರೆ.

Translate »