ಮೈಸೂರು, ಜ.೨೧(ಆರ್‌ಕೆಬಿ)- ಕನ್ನಡಕ್ಕೆ ಶಾಸ್ತಿçÃಯ ಸ್ಥಾನಮಾನ ಸಿಕ್ಕಿ ಒಂದು ದಶಕ ವಾಗಿದ್ದರೂ ಸ್ವಾಯತ್ತತೆ, ಉನ್ನತ ಅಧ್ಯಯನ ಕೇಂದ್ರ ಸ್ಥಾಪನೆ ಮತ್ತು ಸ್ವಂತ ಕಟ್ಟಡಕ್ಕೆ ಅನು ದಾನ ನೀಡುವಲ್ಲಿ ಕೇಂದ್ರ ಸರ್ಕಾರದ ತಾರತಮ್ಯ ನೀತಿಯನ್ನು ಖಂಡಿಸಿ, ಕರ್ನಾಟಕ ಸೇನಾ ಪಡೆ ಜಿಲ್ಲಾ ಘಟಕದ ಕಾರ್ಯ ಕರ್ತರು ಶುಕ್ರವಾರ ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕನ್ನಡಕ್ಕೆ ಶಾಸ್ತಿçÃಯ ಸ್ಥಾನಮಾನ ನೀಡಿ ಕೇಂದ್ರ ಸರ್ಕಾರ ಕೈತೊಳೆದುಕೊಂಡು ಬಿಟ್ಟಿದೆ. ಮಾತೃಭಾಷಾ ಶಿಕ್ಷಣಕ್ಕೆ ಆದ್ಯತೆ ನೀಡ ಬೇಕೆಂದು ಹೇಳುವ ಕೇಂದ್ರ ಸರ್ಕಾರ ಪ್ರಾದೇಶಿಕ ಭಾಷೆಗಳ ಅಭಿವೃದ್ಧಿಗೆ ಅತ್ಯಂತ ಕನಿಷ್ಠ ಅನುದಾನ ನೀಡುತ್ತಿದೆ. ಅದರಲ್ಲೂ ಶಾಸ್ತಿçÃಯ ಸ್ಥಾನಮಾನ ಹೊಂದಿರುವ ಕನ್ನಡ ಭಾಷೆಗೆ ವರ್ಷಕ್ಕೆ ಕೇವಲ ಒಂದು ಕೋಟಿ ರೂ. ಮಾತ್ರ ನೀಡುತ್ತಿದೆ ಎಂದು ಖಂಡಿಸಿದರು.
ತಮಿಳುನಾಡಿನಲ್ಲಿ ಪೂರ್ಣಪ್ರಮಾಣದ ಅಧ್ಯಯನ ಪೀಠ ಆರಂಭವಾಗಿ ಕಾರ್ಯ ಚಟುವಟಿಕೆಗಳು ನಡೆಯುತ್ತಿವೆ. ಅದೇ ರೀತಿ ಕರ್ನಾಟಕಕ್ಕೂ ಪ್ರಯೋಜನ ಸಿಗಬೇಕು. ಕನ್ನಡ ಭಾಷೆಯ ಅಭಿವೃದ್ಧಿಗಾಗಿ ಹೆಚ್ಚು ಸಂಶೋಧನೆಗಳು ನಡೆಯುವಂತಾಗಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ತಮಿಳು ಭಾಷೆಗೆ ೭ ವರ್ಷಗಳಲ್ಲಿ ೫೦ ಕೋಟಿ ಅನುಮಾನ ನೀಡಿರುವ ಕೇಂದ್ರ ಸರ್ಕಾರ, ಕರ್ನಾಟಕಕ್ಕೆ ಮಾತ್ರ ಕೇವಲ ೮.೪ ಕೋಟಿ ರೂ. ನೀಡಿರುವುದು ಕನ್ನಡ ಭಾಷೆಯ ಬಗ್ಗೆ ಕೇಂದ್ರ ಸರ್ಕಾರಕ್ಕೆ ಇರುವ ತಾತ್ಸಾರ ಮನೋಭಾವ ಎದ್ದುಕಾಣುತ್ತಿದೆ. ಕೇಂದ್ರ ಸರ್ಕಾರ ಎಲ್ಲಾ ವಿಷಯಗಳಲ್ಲೂ ಕನ್ನಡಿಗರ ಮೇಲೆ ತಾರತಮ್ಯ ತೋರು ತ್ತಲೇ ಬಂದಿದೆ ಎಂದು ದೂರಿದರು.
ಕೇವಲ ೨೮ ಸಾವಿರ ಮಂದಿ ಮಾತನಾಡುವ ಸಂಸ್ಕೃತಕ್ಕೆ ೭ ವರ್ಷಗಳಲ್ಲಿ ೬೪೦ ಕೋಟಿ ರೂ. ನೀಡಿ, ೬.೫ ಕೋಟಿ ಜನರು ಮಾತನಾಡುವ ಕನ್ನಡ ಬಾಷೆಗೆ ಏಳು ವರ್ಷಗಳಲ್ಲಿ ಕೇವಲ ೮.೭೯ ಕೋಟಿ ಅನುದಾನ ನೀಡಿರುವುದು ಕನ್ನಡಿಗರನ್ನು ಮತ್ತಷ್ಟು ಕೆರಳುವಂತೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು, ರಾಜ್ಯದ ಎಲ್ಲಾ ಸಂಸದರೂ ಒಗ್ಗಟ್ಟಿನಿಂದ ಕೇಂದ್ರದ ಮೇಲೆ ಒತ್ತಡ ಹೇರಬೇಕು. ಕನ್ನಡ ಭಾಷೆಗೂ ಸ್ವಾಯತ್ತತೆ ನೀಡಿ, ತಮಿಳು ಭಾಷೆಯಂತೆ ಕನ್ನಡಕ್ಕೂ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು. ಕನ್ನಡ ಭಾಷಾ ಶಾಸ್ತಿçÃಯ ಅಧ್ಯಯನ ಕೇಂದ್ರವನ್ನು, ಆದಷ್ಟು ಬೇಗ ಮೈಸೂರು ವಿವಿ ಆವರಣದಲ್ಲಿ ಪೂರ್ಣ ಪ್ರಮಾಣದಲ್ಲಿ ಕಟ್ಟಡಕ್ಕೆ ಅನುಮತಿ ನೀಡಬೇಕು. ಕಟ್ಟಡ ಕಟ್ಟಲು ೨೫ ಕೋಟಿ ಅನುದಾನ ಬಿಡುಗಡೆ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಕರ್ನಾಟಕ ಸೇನಾ ಪಡೆ ಜಿಲ್ಲಾಧ್ಯಕ್ಷ ತೇಜೇಜ್ ಲೋಕೇಶ್‌ಗೌಡ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಡಾ.ಶಾಂತರಾಜೇ ಅರಸ್, ಬಸವರಾಜು, ಡಾ.ಶಿವರಾಮೇಗೌಡ, ಮೊಗಣ್ಣಚಾರ್, ಎಳನೀರು ರಾಮಣ್ಣ, ಪ್ರಜೇಶ್ ಪಿ.ದರ್ಶನ್, ಗೊರೂರು ಮಲ್ಲೇಶ್, ರವಿನಾಯಕ್, ಮಿನಿ ಬಂಗಾರಪ್ಪ, ಪ್ರಭಾಕರ ಇನ್ನಿತರರು ಉಪಸ್ಥಿತರಿದ್ದರು.