ಶಾಲಾ-ಕಾಲೇಜುಗಳಿಗೆ ಕನ್ನಡ ಸಾಹಿತ್ಯಕ ಪುಸ್ತಕಗಳ ವಿತರಣೆ
ಮೈಸೂರು

ಶಾಲಾ-ಕಾಲೇಜುಗಳಿಗೆ ಕನ್ನಡ ಸಾಹಿತ್ಯಕ ಪುಸ್ತಕಗಳ ವಿತರಣೆ

January 21, 2022

ಮೈಸೂರು,ಜ.20(ಪಿಎಂ)- ಕನ್ನಡ ಪುಸ್ತಕ ಪ್ರಾಧಿಕಾರದಿಂದ ಶಾಲಾ-ಕಾಲೇಜು ಗಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯ ಕ್ರಮದಡಿ ಗುರುವಾರ ಮೈಸೂರು ವಿಭಾಗದ 8 ಜಿಲ್ಲೆಗಳ 198 ಶಾಲಾ-ಕಾಲೇಜುಗಳಿಗೆ ಪುಸ್ತಕಗಳನ್ನು ವಿತರಣೆ ಮಾಡಲಾಯಿತು.

ಮೈಸೂರಿನ ಕಲಾಮಂದಿರದ ಕಿರುರಂಗ ಮಂದಿರದಲ್ಲಿ ಹಮ್ಮಿಕೊಂಡಿದ್ದ ಪುಸ್ತಕ ವಿತ ರಣೆ ಸಮಾರಂಭ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಬಳಿಕ ಸಾಂಕೇತಿಕವಾಗಿ 5 ಶಾಲಾ-ಕಾಲೇಜು ಗಳ ಮುಖ್ಯಶಿಕ್ಷಕರು ಮತ್ತು ಪ್ರಾಂಶುಪಾಲ ರಿಗೆ ಪುಸ್ತಕಗಳ ವಿತರಣೆ ಮಾಡಿದರು.
ಚಾಮರಾಜನಗರದ ಜೆಎಸ್‍ಎಸ್ ಮಹಿಳಾ ಕಾಲೇಜು, ಕೊಡಗು ಜಿಲ್ಲೆಯ ಕುಶಾಲನಗರದ ಕನ್ನಡ ಭಾರತಿ ಪದವಿ ಪೂರ್ವ ಕಾಲೇಜು, ದಕ್ಷಿಣ ಕನ್ನಡ ಜಿಲ್ಲೆಯ ಬೆಟ್ಟಂಪಾಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಮೈಸೂರು ಜಿಲ್ಲೆಯ ಕೆಆರ್ ನಗರದ ಶ್ರೀ ಕೃಷ್ಣರಾಜೇಂದ್ರ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು, ಟಿ. ನರಸೀಪುರ ತಾಲೂಕು ವಾಟಾಳು ಸರ್ಕಾರಿ ಪ್ರೌಢಶಾಲೆಗೆ ಸಾಂಕೇತಿಕವಾಗಿ ಪುಸ್ತಕಗಳನ್ನು ವಿತರಣೆ ಮಾಡಲಾಯಿತು. ಬಳಿಕ ಒಟ್ಟಾರೆ 198 ಶಾಲಾ-ಕಾಲೇಜುಗಳಿಗೆ ಕನ್ನಡ ಸಾಹಿ ತ್ಯಕ ಪುಸ್ತಕಗಳನ್ನು ವಿತರಣೆ ಮಾಡಲಾಯಿತು.

ಉದ್ಘಾಟನಾ ಸಮಾರಂಭದಲ್ಲಿ ಪ್ರಾಸ್ತಾ ವಿಕವಾಗಿ ಮಾತನಾಡಿದ ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ.ಕಿರಣ್‍ಸಿಂಗ್, ಶಾಲಾ ಕಾಲೇಜುಗಳಿಗೆ ಉಚಿತ ಪುಸ್ತಕ ನೀಡುವ ಮೂಲಕ ವಿದ್ಯಾರ್ಥಿ ಸಮುದಾಯದಲ್ಲಿ ಜ್ಞಾನಾರ್ಜನೆ ವೃದ್ಧಿಸಬೇಕೆಂಬುದು ಈ ಕಾರ್ಯಕ್ರಮದ ಉದ್ದೇಶ. ಸಗಟು ಪುಸ್ತಕ ಖರೀದಿ ಯೋಜನೆಯಡಿ ರಾಜ್ಯದ ಪ್ರಕಾ ಶಕರು ಆಯಾಯ ವರ್ಷದಲ್ಲಿ ಪ್ರಕಟಿಸಿದ ಪುಸ್ತಕಗಳನ್ನು ಪ್ರಾಧಿಕಾರದಿಂದ ಖರೀದಿ ಮಾಡಲಾಗುತ್ತದೆ ಎಂದು ತಿಳಿಸಿದರು.
ಪ್ರಕಾಶಕರಿಂದ ತಲಾ ಒಂದು ಲಕ್ಷ ರೂ. ವೆಚ್ಚದಲ್ಲಿ ಹಾಗೂ ಒಬ್ಬ ಬರಹಗಾರರಿಂದ ಏಳೂವರೆ ಸಾವಿರ ರೂ. ವೆಚ್ಚದಲ್ಲಿ ಪುಸ್ತಕ ಖರೀದಿ ಪ್ರಕ್ರಿಯೆ ನಡೆಯಲಿದೆ. ವಾರ್ಷಿಕ ಅಂದಾಜು 1 ಕೋಟಿ ರೂ. ವೆಚ್ಚದಲ್ಲಿ ಪುಸ್ತಕ ಗಳನ್ನು ಖರೀದಿಸಿ, ಶಾಲಾ ಕಾಲೇಜು ಗಳಿಗೆ ವಿತರಣೆ ಮಾಡಲಾಗುತ್ತದೆ. ಈ ಬಾರಿ ಒಂದು ಶಿಕ್ಷಣ ಸಂಸ್ಥೆಗೆ 15ರಿಂದ 20 ಸಾವಿರ ರೂ. ಮೌಲ್ಯದ ಪುಸ್ತಕ ಗಳನ್ನು ನೀಡಲಾಗುತ್ತದೆ ಎಂದರು.

ಪ್ರಾಧಿಕಾರದ ಅಧ್ಯಕ್ಷ ಡಾ.ಎಂ.ಎನ್. ನಂದೀಶ್ ಹಂಚೆ ಮಾತನಾಡಿ, ಪ್ರಾಧಿಕಾರ ಪ್ರತಿ ವರ್ಷ ಸುಮಾರು 1 ಕೋಟಿ ರೂ. ವೆಚ್ಚ ದಲ್ಲಿ ಪುಸ್ತಕ ಖರೀದಿಸಿ, ಶಾಲಾ ಕಾಲೇಜು ಗಳಿಗೆ ಉಚಿತವಾಗಿ ನೀಡುವ ಯೋಜನೆ ನಡೆಸಿಕೊಂಡು ಬಂದಿದೆ. ಆದರೆ ಸದರಿ ಯೋಜನೆ ಕೇವಲ ಬೆಂಗಳೂರಿಗೆ ಮಾತ್ರ ಸೀಮಿತವಾಗಿತ್ತು. ಪ್ರಾಧಿಕಾರದ ಹೊಸ ಸಮಿತಿ ರೂಪುಗೊಂಡ ಬಳಿಕ ಇದೇ ಮೊಟ್ಟ ಮೊದಲ ಬಾರಿಗೆ ಈ ಯೋಜನೆಯನ್ನು ಇಡೀ ರಾಜ್ಯಕ್ಕೆ ವಿಸ್ತರಿಸಿ, ವಿಭಾಗವಾರು ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಈಗಾಗಲೇ ಬೆಂಗಳೂರು ವಿಭಾಗದಲ್ಲಿ ಕಾರ್ಯಕ್ರಮ ನಡೆದಿದ್ದು, ಇಂದು ಮೈಸೂ ರಿನಲ್ಲಿ ಮೈಸೂರು ವಿಭಾಗದ ಕಾರ್ಯ ಕ್ರಮ ಹಮ್ಮಿಕೊಳ್ಳಲಾಗಿದೆ. ರಾಜ್ಯದ ಉಳಿ ದೆರಡು ವಿಭಾಗಗಳಲ್ಲಿ ಮಾತ್ರವಲ್ಲದೆ, ಐದು ಗಡಿ ಜಿಲ್ಲೆಗಳಲ್ಲಿಯೂ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಆ ಮೂಲಕ ಕನ್ನಡ ಪುಸ್ತಕ ಓದುವ ಹವ್ಯಾಸಕ್ಕೆ ಉತ್ತೇ ಜನ ನೀಡಲಾಗುವುದು ಎಂದು ತಿಳಿಸಿದರು.

ಹಿರಿಯ ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್ ಮಾತನಾಡಿ, ಪ್ರಾಧಿಕಾರ ನೀಡುವ ಈ ಉಚಿತ ಪುಸ್ತಕಗಳನ್ನು ಶಾಲಾ-ಕಾಲೇಜು ಗಳ ಗ್ರಂಥಾಲಯದಲ್ಲಿ ಇಟ್ಟು ವಿದ್ಯಾರ್ಥಿ ಗಳಲ್ಲಿ ಓದುವ ಅಭಿರುಚಿ ಬೆಳೆಸಬೇಕು. ಸಾಹಿತ್ಯಕ ಪುಸ್ತಕಗಳು ನಮ್ಮಲ್ಲಿ ಸೃಜನ ಶೀಲತೆ ಬೆಳೆಸಲಿವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಎಲ್.ನಾಗೇಂದ್ರ ಮಾತನಾಡಿ, ಕೋವಿಡ್ ಸಂದರ್ಭದಲ್ಲೂ ಈ ರೀತಿಯ ವಿಶೇಷ ಕಾರ್ಯಕ್ರಮದ ಮೂಲಕ ಶಾಲಾ ಕಾಲೇಜುಗಳಿಗೆ ಪುಸ್ತಕ ನೀಡುತ್ತಿರುವುದು ಒಳ್ಳೆಯ ಕೆಲಸ. ಕಾರ್ಯ ಕ್ರಮ, ಸಮಾರಂಭಗಳಲ್ಲಿ ಹಾರ ತುರಾಯಿ ಹಾಕದೇ ಕನ್ನಡ ಪುಸ್ತಕ ಕೊಡಿ ಎಂದು ಮುಖ್ಯ ಮಂತ್ರಿಗಳು ಕರೆ ನೀಡಿದ ಹಿನ್ನೆಲೆಯಲ್ಲಿ ಇಂದು ಕನ್ನಡ ಪುಸ್ತಕ ಖರೀದಿ ಚುರುಕು ಗೊಂಡಿದೆ. ಹಾಗಾಗಿ ಮುಖ್ಯಮಂತ್ರಿಗಳಿಗೆ ಅಭಿನಂದಿಸುತ್ತೇನೆ ಎಂದರು. ಗುಂಡ್ಲು ಪೇಟೆ ಶಾಸಕ ಸಿ.ಎಸ್.ನಿರಂಜನಕುಮಾರ್, ಮೇಯರ್ ಸುನಂದಾ ಪಾಲನೇತ್ರ, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಜಿಪಂ ಸಿಇಓ ಯೋಗೀಶ್ ಮತ್ತಿತರರು ಹಾಜರಿದ್ದರು.

Translate »