ಜುಬಿಲಂಟ್ ವಿಚಾರದಲ್ಲಿ ಹೀರೋ ಆಗದಿದ್ದರೂ ವಿಲನ್ ಆಗಲು ಸಿದ್ಧವಿಲ್ಲ: ಶಾಸಕ ಹರ್ಷವರ್ಧನ್
ಮೈಸೂರು

ಜುಬಿಲಂಟ್ ವಿಚಾರದಲ್ಲಿ ಹೀರೋ ಆಗದಿದ್ದರೂ ವಿಲನ್ ಆಗಲು ಸಿದ್ಧವಿಲ್ಲ: ಶಾಸಕ ಹರ್ಷವರ್ಧನ್

May 18, 2020

ಮೈಸೂರು, ಮೇ 17(ಎಂಟಿವೈ)- `ನಂಜನಗೂಡಿನ ಜುಬಿಲಂಟ್ ಔಷಧ ಕಾರ್ಖಾನೆ ವಿಷಯದಲ್ಲಿ ನಾನು ಹೀರೋ ಆಗದಿ ದ್ದರೂ ಸರಿ, ವಿಲನ್ ಆಗಲು ಸಿದ್ಧ ವಿಲ್ಲ’ ಎಂದು ಶಾಸಕ ಹರ್ಷವರ್ಧನ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಮೈಸೂರಲ್ಲಿ ಭಾನುವಾರ ಪತ್ರಕರ್ತ ರೊಂದಿಗೆ ಮಾತನಾಡಿದ ಅವರು, ಅಮೆರಿಕ ಮೂಲದ ಕಂಪನಿಯೊಂದಿಗೆ ಜುಬಿಲಂಟ್ ಕಾರ್ಖಾನೆ ಒಪ್ಪಂದ ಮಾಡಿಕೊಂಡಿದೆ. ಅದರ ಪ್ರಕಾರ ಈ ಕಾರ್ಖಾನೆಯಲ್ಲಿ ಕೊರೊನಾ ಔಷಧ ಉತ್ಪಾದನೆ ಆಗಬೇಕಾಗಿದೆ. ಇದೊಂದೇ ಕಾರಣಕ್ಕೆ ನಾನು ಯೂ ಟರ್ನ್ ತೆಗೆದುಕೊಳ್ಳುವ ಅನಿವಾರ್ಯ ಸೃಷ್ಟಿಯಾಗಿದೆ. ಈ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ, ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಮಾತುಕತೆ ನಡೆದಿದ್ದು, ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ನಾನು ಸುಮ್ಮನಾಗಿz್ದÉೀನೆ ಎಂದು ಸ್ಪಷ್ಟಪಡಿಸಿದರು.

ಮೇ 25ರಂದು ಜುಬಿಲಂಟ್ ಕಾರ್ಖಾನೆ ಪುನರಾ ರಂಭವಾಗಲಿದೆ. ಇದಕ್ಕಾಗಿ 3 ಷರತ್ತು ವಿಧಿಸಲಾಗಿದೆ. ತಾಲೂಕಲ್ಲಿ 50 ಸಾವಿರ ದಿನಸಿ ಕಿಟ್ ವಿತರಿಸುವುದು, 10 ಗ್ರಾಮಗಳನ್ನು ದತ್ತು ಪಡೆಯುವುದು, ಮುಂದೆ ಇಂತಹ ಅನಾಹುತ ಮರುಕಳಿಸದಂತೆ ಕ್ರಮ ಕೈಗೊಳ್ಳಲು ಸೂಚಿಸ ಲಾಗಿದೆ. ಇದಕ್ಕೆಲ್ಲ ಕಾರ್ಖಾನೆಯ ನಂಜನಗೂಡು ಶಾಖೆ ಮುಖ್ಯಸ್ಥ ದೇಶ್‍ಮುಖ್ ಒಪ್ಪಿಕೊಂಡಿz್ದÁರೆ. ಕಾರ್ಖಾನೆ ಪುನಾರಂಭಕ್ಕೆ ಸಮ್ಮತಿ ಸೂಚಿಸುವ ಜತೆಗೆ ನಂಜನಗೂಡಿನ ಜನರ ಹಿತ ಕಾಯುವ ಕೆಲಸವನ್ನೂ ಮಾಡಿz್ದÉೀನೆ ಎಂದರು.

ಜಿಲ್ಲೆಗೆ ಕೊರೊನಾ ಹರಡುವಂತೆ ಮಾಡಿದ ವಿಚಾರ ದಲ್ಲಿ ಸಂಬಂಧ ಇಲ್ಲದವರೆಲ್ಲ ಮಾತನಾಡಿದ್ದರು. ಆದರೆ, ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ 400 ಕಾರ್ಮಿಕ ರಿಗೆ 2 ತಿಂಗಳಿಂದ ಸಂಬಳ ಕೊಟ್ಟಿಲ್ಲ. ಕಾರ್ಖಾನೆ ಪರ ಮಾತನಾಡುತ್ತಿದ್ದ ದೊಡ್ಡವರೆಲ್ಲ ಈಗ ಎಲ್ಲಿ ಹೋದರು? ಎಂದು ಸಂಸದ ಪ್ರತಾಪ್‍ಸಿಂಹ ಅವರನ್ನು ಪರೋಕ್ಷ ವಾಗಿ ಟೀಕಿಸಿದರು. ಜುಬಿಲಂಟ್ ಕಾರ್ಖಾನೆಯಲ್ಲಿ ಹರಡಿದ ಕೊರೊನಾ ಸೋಂಕಿನ ಮೂಲ ಪತ್ತೆಗೆ ನಡೆಸಿದ ತನಿಖೆ ವಿಚಾರದಲ್ಲಿ ನಿರಾಸೆ ಆಗಿರುವುದು ನಿಜ. ಹರ್ಷಗುಪ್ತ ಅವರಂತಹ ದP್ಷÀ ಹಾಗೂ ಹಿರಿಯ ಐಎಎಸ್ ಅಧಿ ಕಾರಿಯೇ ಅಪೂರ್ಣ ವರದಿ ನೀಡಿದ್ದಾರೆ. ಸರ್ಕಾರದ ಕಡೆಯಿಂದಲೂ ತನಿಖೆ ವಿಳಂಬವಾಗಿದೆ. ನನ್ನ ನಿಲುವಿಗೆ ಈಗಲೂ ನಾನು ಬದ್ಧ ಎಂದು ಸ್ಪಷ್ಟಪಡಿಸಿದರು.

Translate »