21 ದಿನಗಳ ಬಳಿಕ ಮನೆಗೆ ಮರಳಿದ 50 ವೈದ್ಯರು, ದಾದಿಯರು
ಮೈಸೂರು

21 ದಿನಗಳ ಬಳಿಕ ಮನೆಗೆ ಮರಳಿದ 50 ವೈದ್ಯರು, ದಾದಿಯರು

May 18, 2020

ಮೈಸೂರು, ಮೇ 17(ಆರ್‍ಕೆಬಿ)- ಕೋವಿಡ್ ಆಸ್ಪತ್ರೆಯಲ್ಲಿ 1 ವಾರ ರೋಗಿ ಗಳ ಚಿಕಿತ್ಸೆ ಬಳಿಕ 14 ದಿನಗಳ ಕ್ವಾರಂಟೈನ್ ಯಶಸ್ವಿಯಾಗಿ ಮುಗಿಸಿ ಮನೆಗೆ ಮರಳು ತ್ತಿರುವ ಕೊರೊನಾ ವಾರಿಯರ್ಸ್ ತಂಡದ 22 ವೈದ್ಯರು, 28 ದಾದಿಯರನ್ನು ವಿಜನ್ ಟೀಂನಿಂದ ಭಾನುವಾರ ಆತ್ಮೀಯವಾಗಿ ಗೌರವಿಸಿ ಬೀಳ್ಕೊಡಲಾಯಿತು.

ಮೈಸೂರಿನ ಎಂಜಿ ರಸ್ತೆಯಲ್ಲಿನ ಜೆಎಸ್‍ಎಸ್ ಆಸ್ಪತ್ರೆ ಎದುರಿನ ಹೆರಿಟೇಜ್ ಇನ್ ಹೋಟೆಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 50 ಕೊರೊನಾ ವಾರಿ ಯರ್ಸ್‍ಗಳಿಗೆ ಆರತಿ ಎತ್ತಿ, ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ, ಫಲ ತಾಂಬೂಲ, ನೆನಪಿನ ಕಾಣಿಕೆ ನೀಡಿ, ಪುಷ್ಪವೃಷ್ಟಿ ನಡೆಸಿ ಗೌರವಿಸಲಾಯಿತು.

ಶಾಸಕ ಎಲ್.ನಾಗೇಂದ್ರ, ಮೈಸೂರು ಮೆಡಿಕಲ್ ಕಾಲೇಜು ಪ್ರಾಂಶುಪಾಲರಾದ ಡಾ. ದಾಕ್ಷಾಯಿಣಿ, ಕೆ.ಆರ್.ಆಸ್ಪತ್ರೆಯ ಕೋವಿಡ್ -19 ಸಂಚಾಲಕ ಡಾ.ದಿನೇಶ್, ಮಾಜಿ ಮೇಯರ್ ಸಂದೇಶ್ ಸ್ವಾಮಿ, ಮೈಸೂರು ವಿವಿ ಸಿಂಡಿಕೇಟ್ ಸದಸ್ಯ ಇ.ಸಿ.ನಿಂಗ ರಾಜಗೌಡ, ಡಾ.ರಮೇಶ್, ಡಾ.ರಘು, ಹರ್ಷ, ಬಿಜೆಪಿ ಮಹಿಳಾ ಮೋರ್ಚಾ ನಗರಾ ಧ್ಯಕ್ಷೆ ಹೇಮಾ, ಬಿಜೆಪಿ ಮುಖಂಡ ಯಶಸ್ವಿ ಸೋಮಶೇಖರ್, ವಸ್ತು ಪ್ರದರ್ಶನ ಪ್ರಾಧಿ ಕಾರದ ಮಾಜಿ ಅಧ್ಯಕ್ಷ ಬಿ.ಪಿ.ಮಂಜುನಾಥ್, ವಿಷನ್ ಟೀಂ ಅಧ್ಯಕ್ಷ ನಂದೀಶ್‍ಕುಮಾರ್ ಮತ್ತಿತರರು ಕೊರೊನಾ ವಾರಿಯರ್ಸ್‍ಗಳನ್ನು ಸನ್ಮಾನಿಸಿ, ಅವರ ಸೇವೆಯನ್ನು ಶ್ಲಾಘಿಸಿದರು.

ಗೌರವ ಸ್ವೀಕರಿಸಿ ಮಾತನಾಡಿದ ವೈದ್ಯರು, ದಾದಿಯರು ಹೆಸರು ಹೇಳಿ ಕೊಳ್ಳಲು ಇಚ್ಛಿಸಲಿಲ್ಲ. `ನಮ್ಮ ಸೇವೆ ಪರಿ ಗಣಿಸಿ, ಗೌರವಿಸಿ, ಅಭಿನಂದಿಸಿದ್ದರಿಂದ ನಿಜಕ್ಕೂ ಮನತುಂಬಿ ಬಂದಿದೆ. ಕೊರೊನಾ ರೋಗಿಗಳ ಸೇವೆಯನ್ನು ನಾವು ಹೃದಯ ತುಂಬಿ ಮಾಡಿದ್ದೇವೆ. ಕ್ವಾರಂಟೈನ್ ಅವಧಿ ಯಲ್ಲಿ ನಮ್ಮನ್ನು ಬಹಳ ಆತ್ಮೀಯತೆ ಯಿಂದ ಊಟ, ತಿಂಡಿ ನೀಡಿ ನೋಡಿಕೊಂಡ ಎಲ್ಲ ರಿಗೂ ಕೃತಜ್ಞತೆ ಸಲ್ಲಿಸುತ್ತೇವೆ’ ಎಂದರು.

ಬಳಿಕ ಮಾತನಾಡಿದ ಶಾಸಕ ಎಲ್. ನಾಗೇಂದ್ರ, ಲಾಕ್‍ಡೌನ್ ವೇಳೆ ಬಡ ಜನರ ಕಷ್ಟಗಳನ್ನು ಅರಿತು ಪಡಿತರ ಕಿಟ್ ವಿತರಿಸಿದ್ದೇವೆ. ಸಾಮಾಜಿಕ ಅಂತರ ಕಾಯ್ದು ಕೊಂಡು, ಮಾಸ್ಕ್ ಧರಿಸಿ, ಕೊರೊನಾ ನಿರ್ಮೂಲನೆ ಹೋರಾಟದಲ್ಲಿ ಭಾಗವಹಿ ಸಿದ್ದೇವೆ. ಎಲ್ಲರ ಪರಿಶ್ರಮದಿಂದ ಮೈಸೂರು ಕೊರೊನಾ ಮುಕ್ತÀಗೊಂಡಿದೆ. ಮತ್ತೆ ಕೊರೊನಾ ಮೈಸೂರಿಗೆ ವಕ್ಕರಿಸದಂತೆ ಎಚ್ಚರಿಕೆ ವಹಿಸಬೇಕಾಗಿದೆ ಎಂದರು.

ಮೈಸೂರು ಮೆಡಿಕಲ್ ಕಾಲೇಜು ಪ್ರಾಂಶು ಪಾಲರಾದ ಡಾ.ದಾಕ್ಷಾಯಿನಿ ಮಾತನಾಡಿ, ಕೊರೊನಾ ವಾರಿಯರ್‍ಗಳು ರೋಗಿಗಳ ಚಿಕಿತ್ಸೆಯಲ್ಲಿ ತೊಡಗಿದ್ದರೆ, ಜನತೆ ಮನೆಯ ಲ್ಲಿದ್ದು ಮೈಸೂರು ಕೊರೊನಾ ಮುಕ್ತಗೊ ಳ್ಳಲು ಸಹಕರಿಸಿದ್ದಾರೆ. ಇದೇ ಮುನ್ನೆಚ್ಚರಿಕೆ ಮುಂದೆಯೂ ಇರಲಿ. ಕೊರೊನಾ ಮತ್ತೆ ಬಾರದಂತೆ ನೋಡಿಕೊಳ್ಳುವುದು ಬಹಳ ಮುಖ್ಯ ಎಂದರು.

ಮಾಜಿ ಮೇಯರ್ ಸಂದೇಶ್‍ಸ್ವಾಮಿ ಮಾತ ನಾಡಿ, ಕೊರೊನಾ ಮುಕ್ತವಾಗಿ ಮೈಸೂರು ದೇಶಕ್ಕೆ ಮಾದರಿಯಾಗಿದೆ. ಯುದ್ಧದಲ್ಲಿ ಗೆದ್ದಿದ್ದೇವೆಂದು ಸಂಭ್ರಮಿಸಿ, ಎಚ್ಚರಿಕೆ ಮರೆ ತರೆ ಕೊರೊನಾ ಮತ್ತೆ ಕಾಣಿಸಿಕೊಳ್ಳ ಬಹುದು. ಎಲ್ಲರೂ ಮಾಸ್ಕ್, ಸ್ಯಾನಿಟೈಸರ್ ಬಳಸಬೇಕು. ಜತೆಗೆ ಅಂತರ ಕಾಯ್ದು ಕೊಳ್ಳುವುದು ಅವಶ್ಯ ಎಂದರು. ಈ ಸಂದರ್ಭ ಪದ್ಮಾ, ಗೀತಾ, ರೇಣುಕಾ, ಪ್ರಮೋದಿನಿ ಇದ್ದರು.

Translate »