ಅಂಬಾನಿ ಪುತ್ರ ಬಿಡುಗಡೆ ಸಿದ್ಧ
ಸಿನಿಮಾ

ಅಂಬಾನಿ ಪುತ್ರ ಬಿಡುಗಡೆ ಸಿದ್ಧ

March 6, 2020

ಒಬ್ಬ ಹುಡುಗ ವಯಸ್ಸಿಗೆ ಬಂದಾಗ ಹೇಗೆ ಚೇಂಜ್ ಆಗ್ತಾನೆ. ಆತ ದಾರಿ ತಪ್ಪುವ ಹಾಗೆ ಮಾಡುವ ಸಂದರ್ಭಗಳೇನು ಎಬುದನ್ನು ಹೇಳುವ ಚಿತ್ರವೇ ಅಂಬಾನಿ ಪುತ್ರ. ದೊರೈರಾಜ್ ತೇಜ್ ನಿರ್ದೇಶನದ ಈ ಚಿತ್ರದಲ್ಲಿ ಸುಪ್ರೀಂ, ಆಶಾ ಭಂಡಾರಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಈ ಚಿತ್ರದ ನಿರ್ಮಾಪಕ ವೆಂಕಟೇಶ್ ಪುತ್ರನೂ ಆಗಿರುವ ಸುಪ್ರೀಂ ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ನಾಯಕನ ಸಹೋದರ ವರುಣ್‍ಗೌಡ ಈ ಚಿತ್ರದ ಮತ್ತೊಬ್ಬ ನಿರ್ಮಾಪಕ. ಹಳ್ಳಿ ಜನತೆ ಹಾಗೂ ಸಿಟಿ ಜನರ ನಡವಳಿಕೆ ಒಟ್ಟಿಗೇ ಸೇರಿದಾಗ ಏನಾಗುತ್ತದೆ ಅನ್ನೋದೇ ಈ ಚಿತ್ರದ ಕಥೆ. ಮುಂದಿನ ತಿಂಗಳು ಈ ಚಿತ್ರ ರಿಲೀಸ್ ಆಗುತ್ತಿದೆ. ಪತ್ರಿಕಾಗೋಷ್ಠಿಯಲಿ ನಾಯಕಿ ಆಶಾಭಂಡಾರಿ ಮಾತನಾಡಿ, ಇದು ನನ್ನ ಮೂರನೇ ಚಿತ್ರ. ನನ್ನದು ಒಬ್ಬ ಹಳ್ಳಿ ಹುಡುಗಿಯ ಪಾತ್ರ. ಹಳ್ಳಿಯಿಂದ ಸಿಟಿಗೆ ಬಂದು ಕಾಲೇಜು ಓದುತ್ತಿರುತ್ತೇನೆ. ಚಿತ್ರದಲ್ಲಿ ಎಮೋಷನಲ್, ಕಾಮಿಡಿ ಕಥೆ ಇದೆ. ಅಭಿಷೇಕ್ ಮಾಡಿರುವ ಹಾಡುಗಳು ತುಂಬಾ ಚೆನ್ನಾಗಿ ಬಂದಿವೆ ಎಂದು ಹೇಳಿದರು.

ನಂತರ ನಾಯಕ ಸುಪ್ರೀಂ ಮಾತನಾಡಿ, ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ ಎಂಬ ನಂಬಿಕೆ ಇದೆ. ಒಬ್ಬ ಹುಡುಗ ವಯಸ್ಸಿಗೆ ಬಂದಾಗ ಯಾವ ರೀತಿಯಲ್ಲಿ ಬದಲಾಗುತ್ತಾನೆ, ಸ್ನೇಹಿತರು, ತಂದೆ-ತಾಯಿ ಸಂಬಂಧÀದ ಮೇಲೆ ಈ ಚಿತ್ರದ ಕಥೆ ಸಾಗುತ್ತದೆ. ಊರಗೌಡನ ಪುತ್ರ, ಊರಲ್ಲಿ ಹೇಗೆ ಇರುತ್ತಾನೆ, ಹುಡುಗಿಯರ ವಿಷಯದಲ್ಲಿ ಆತನ ನಡವಳಿಕೆ ಹೇಗಿರುತ್ತದೆ. ಆತ ದಾರಿತಪ್ಪುವ ಹಾದಿ ಹೇಗಿರುತ್ತದೆ ಎಂದು ಅಂಬಾನಿ ಪುತ್ರ ಚಿತ್ರದಲ್ಲಿ ಹೇಳಲಾಗಿದೆ. ಈಗಿನ ಜನರೇಷನ್ ಹೇಗೆ ಹಾಳಾಗುತ್ತಿದೆ ಎನ್ನುವುದು ಕೂಡ ಈ ಚಿತ್ರದಲ್ಲಿದೆ ಎಂದು ಹೇಳಿದರು.

ಬೆಂಗಳೂರು, ಹಾಸನ ಹಾಗೂ ಬಾಂಬೆಯಲ್ಲಿ ಈ ಚಿತ್ರದ ಶೂಟಿಂಗ್ ನಡೆಸಲಾಗಿದೆ. ಬಾಂಬೆಯಲ್ಲೇ ಶೇ.30 ಶೂಟಿಂಗ್ ನಡೆಸಲಾಗಿದೆ. ಒಟ್ಟು 50 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಮತ್ತೊಬ್ಬ ನಟ ಮಂಜೇಗೌಡ ಮಾತನಾಡಿ, ಊರಿನ ಯಜಮಾನನಾಗಿ ನಾನು ಬಣ್ಣ ಹಚ್ಚಿz್ದÉೀನೆ. ಊರ ಹಿರಿಯ, ಒಳ್ಳೆಯವನಾಗಿದ್ದರೆ ಆತನ ಮಕ್ಕಳೂ ಒಳ್ಳೆಯವರಾಗಿರುತ್ತಾರೆ. ಆತ ಕೆಟ್ಟವನಾಗಿದ್ದರೆ ಅವರೂ ಅಡ್ಡದಾರಿ ಹಿಡೀತಾರೆ ಅಂತ ಚಿತ್ರದಲ್ಲಿ ಹೇಳಲಾಗಿದೆ ಎಂದು ಹೇಳಿದರು.

Translate »