ಅ.6, 7ರಂದು ಅಂಬಾರಿ- ರಾಯಲ್ ಉತ್ಸವ
ಮೈಸೂರು

ಅ.6, 7ರಂದು ಅಂಬಾರಿ- ರಾಯಲ್ ಉತ್ಸವ

October 4, 2018

ಮೈಸೂರು: ವಿಶ್ವವಿಖ್ಯಾತ ದಸರಾ ಮಹೋ ತ್ಸವದ ಹಿನ್ನೆಲೆಯಲ್ಲಿ ಜೆಸಿಐ ಇಂಡಿಯಾ, ವಲಯ-14 ಮತ್ತು ಜೆಸಿಐ, ಮೈಸೂರು ರಾಯಲ್ ಸಿಟಿ ಸಂಯುಕ್ತಾಶ್ರಯದಲ್ಲಿ ಅ. 6 ಮತ್ತು 7 ರಂದು ಮೈಸೂರಿನ ಹೋಟೆಲ್ ರಿಯೋ ಮೆರಿ ಡೀಯನ್‍ನಲ್ಲಿ ಜೋನ್‍ಕಾನ್-2018 `ಅಂಬಾರಿ-ರಾಯಲ್ ಉತ್ಸವ’ ಏರ್ಪ ಡಿಸಲಾಗಿದೆ. ವಲಯ 14ರ 38 ಚಾಪ್ಟರ್‍ಗಳಿಂದ ಸುಮಾರು 750ಕ್ಕೂ ಹೆಚ್ಚು ಸದಸ್ಯರು ಭಾಗವಹಿಸುವ ನಿರೀಕ್ಷೆ ಇದೆ. ವಲಯ ಅಧ್ಯಕ್ಷ ಸೆನೇಟರ್ ವಿಕಾಸ್ ಗೂಗ್ಲಿಯಾ ಅಧ್ಯಕ್ಷತೆ ವಹಿಸಲಿದ್ದಾರೆ. ಜೆಸಿಐ ಮೈಸೂರು ರಾಯಲ್ ಸಿಟಿ ಅಧ್ಯಕ್ಷ ಗೌರವ ಜೈನ್, ಕಾರ್ಯದರ್ಶಿ ಸುನೀಲ್ ದೇರಸಾರಿಯಾ, ದೀಪಕ್ ಬೋಹ್ರಾ, ಪ್ರವೀಣ್ ಜೈನ್, ಮಹಾವೀರ್ ಜೈನ್ ಗಡಿಯಾ, ರಾಜನ್ ಬಾಗ್‍ಮಾರ್, ಜಯಕುಮಾರ್ ಸಲೇಚಾ, ಮಹೇಂದರ್ ಜೈನ್ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Translate »