ದಸರಾ ಕಾರ್ಯಕ್ರಮಕ್ಕೆ ತಮ್ಮ ಭೂಮಿ ಬಳಸದಂತೆ ಮನವಿ
ಮೈಸೂರು

ದಸರಾ ಕಾರ್ಯಕ್ರಮಕ್ಕೆ ತಮ್ಮ ಭೂಮಿ ಬಳಸದಂತೆ ಮನವಿ

October 4, 2018

ಮೈಸೂರು:  ಮೈಸೂರಿನ ಲಲಿತ ಮಹಲ್ ಪಕ್ಕದಲ್ಲಿರುವ 7 ಎಕರೆ ಭೂಮಿ ತಮ್ಮದೆಂದು ಫಲಕ ಅಳವಡಿಸಿರುವ ಎಸ್.ಮೀನಾಕ್ಷಿ ಅವರು, ಸದರಿ ಜಮೀನನ್ನು ದಸರಾ ಕಾರ್ಯಕ್ರಮಗಳಿಗೆ ಬಳಸಿಕೊಳ್ಳದಂತೆ ಮತ್ತೊಮ್ಮೆ ಮನವಿ ಸಲ್ಲಿಸಿದ್ದಾರೆ. `ಮೈಸೂರು ತಾಲೂಕು, ಕಸಬಾ ಹೋಬಳಿ, ಕುರುಬಾರಹಳ್ಳಿ ಸರ್ವೆ ನಂ.4ರ ವ್ಯಾಪ್ತಿಯ ಎ ಬ್ಲಾಕ್‍ನಲ್ಲಿ 5 ಎಕರೆ ಹಾಗೂ ಸಿ ಬ್ಲಾಕ್‍ನಲ್ಲಿ 2 ಎಕರೆ ಸೇರಿದಂತೆ ಒಟ್ಟು 7 ಎಕರೆ ಜಮೀನನ್ನು ದಸರಾ ಕಾರ್ಯಕ್ರಮಗಳಿಗೆ ಬಳಸಿಕೊಳ್ಳ ಬಾರದು ಎಂದು ಸೆ.14ರಂದು ಆಕ್ಷೇಪಣೆ ಸಲ್ಲಿಸಿದ್ದ ಅವರು, ಸೆ.25ರಂದು ಸದರಿ ಜಮೀನಿನಲ್ಲಿ ಫಲಕ ಅಳವಡಿಸಿದ್ದಾರೆ. ಅಲ್ಲದೆ ಸೆ.28ರಂದು ಮತ್ತೊಮ್ಮೆ ಮನವಿ ಸಲ್ಲಿಸಿದ್ದು, ನನ್ನ ಪೂರ್ವಾನುಮತಿ ಪಡೆದು, ಸೂಕ್ತ ಪರಿಹಾರ ನೀಡಿ, ಜಮೀನನ್ನು ಬಳಸಿಕೊಳ್ಳುವಂತೆ ಕೋರಿದ್ದಾರಲ್ಲದೆ, ಅನುಮತಿ ಪಡೆಯದೆ ದುರುಪಯೋಗಪಡಿಸಿ ಕೊಂಡರೆ ಸರ್ಕಾರದ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.

Translate »