ಮೈಸೂರು, ಜು.14(ಆರ್‍ಕೆಬಿ)- ಸಂವಿ ಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಮುಂಬೈ ನಿವಾಸದ ಮೇಲೆ ದುಷ್ಕರ್ಮಿ ಗಳು ನಡೆಸಿದ ದಾಳಿಯನ್ನು ಖಂಡಿಸಿ ಅಂಬೇಡ್ಕರ್ ಸೇನೆ ಜಿಲ್ಲಾ ಸಮಿತಿ ಸದ ಸ್ಯರು ಜಿಲ್ಲಾಧಿಕಾರಿ ಕಚೇರಿ ಬಳಿ ಮಂಗಳ ವಾರ ಪ್ರತಿಭಟನೆ ನಡೆಸಿ, ಅಂಬೇಡ್ಕರ್ ಪರ, ಬಿಜೆಪಿ, ಆರ್‍ಎಸ್‍ಎಸ್ ವಿರುದ್ಧ ಘೋಷಣೆ ಕೂಗಿದರು.
ಕಿಡಿಗೇಡಿಗಳು ಅಂಬೇಡ್ಕರ್ ನಿವಾಸಕ್ಕೆ ಕಲ್ಲು ತೂರಿ ವಸ್ತುಗಳಿಗೆ ಹಾನಿ ಮಾಡಿ ದ್ದಾರೆ. ಇದು ಕೋಮುವಾದಿಗಳ ಪೂರ್ವ ನಿಯೋಜಿತ ಕೃತ್ಯ. ಸಂವಿಧಾನದ ಆಶಯ ಗಳಿಗೆ ಧಕ್ಕೆ ತರುವ ಪ್ರಯತ್ನ ಎಂದು ಆಕ್ರೋಶ ವ್ಯಕ್ತಪಡಿಸಿದರು. ಘಟನೆ ಬಗ್ಗೆ ತನಿಖೆ ನಡೆಸಿ, ಕಿಡಿಗೇಡಿಗಳನ್ನು ಪತ್ತೆಹಚ್ಚಿ ಬಂಧಿಸಿ, ಕಠಿಣ ಕ್ರಮ ಕೈಗೊಳ್ಳಬೇಕು. ಅಂಬೇಡ್ಕರ್ ನಿವಾಸಕ್ಕೆ ಅಗತ್ಯ ಭದ್ರತೆ ಒದಗಿಸಬೇಕು. ಇಂಥ ಘಟನೆ ಮರುಕಳಿಸ ದಂತೆ ಜಾಗ್ರತೆ ವಹಿಸಬೇಕು ಎಂದು ಒತ್ತಾ ಯಿಸಿ ರಾಷ್ಟ್ರಪತಿಗಳಿಗೆ ಬರೆದ ಪತ್ರವನ್ನು ಜಿಲ್ಲಾಧಿಕಾರಿ ಕಚೇರಿಗೆ ಹಸ್ತಾಂತರಿಸಿದರು. ಅಂಬೇಡ್ಕರ್ ಸೇನೆ ಮೈಸೂರು ಜಿಲ್ಲಾಧ್ಯಕ್ಷ ನಾಗೇಂದ್ರ ಬಸವಟ್ಟಿಗೆ, ಉಪಾಧ್ಯಕ್ಷ ಮಹೇಶ್ ತಗಡೂರು, ಪದಾಧಿಕಾರಿ ಶಿವಪ್ರಸಾದ್ ಕಂದೇಗಾಲ, ದಲ್ಲಾಳ್ ಮಹದೇವ್, ಸಿ.ಕೆ. ರಾಜಣ್ಣ ಚೌಕೂರು ಇನ್ನಿತರರು ಪ್ರತಿ ಭಟನೆಯಲ್ಲಿ ಭಾಗವಹಿಸಿದ್ದರು.