ಕೊರೊನಾ ಹಾವಳಿ ನಡುವೆಯೇ ರೈತರ ಸಾಲ ವಸೂಲಿಗಿಳಿದ ಸರ್ಕಾರ
ಮೈಸೂರು

ಕೊರೊನಾ ಹಾವಳಿ ನಡುವೆಯೇ ರೈತರ ಸಾಲ ವಸೂಲಿಗಿಳಿದ ಸರ್ಕಾರ

May 21, 2020

ಬೆಂಗಳೂರು, ಮೇ 20(ಕೆಎಂಶಿ)-ಕೊರೊನಾ ಸೋಂಕು ಸಂಪೂರ್ಣ ನಿಯಂತ್ರಣವಾಗಿಲ್ಲ. ಆಗಲೇ ರೈತರ ಸಾಲ ವಸೂಲಾತಿಗೆ ಸರ್ಕಾರ ಮುಂದಾಗಿದೆ. ಕಡಿಮೆ ಅವ ಧಿಗೆ ನೀಡಿದ್ದ ಸಾಲವನ್ನು ರೈತರಿಂದ ವಸೂಲಿ ಮಾಡುವಂತೆ ಡಿಸಿಸಿ ಬ್ಯಾಂಕ್ ಗಳಿಗೆ ಸೂಚನೆ ನೀಡಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್, ಮೇ 31ರೊಳಗೆ ನಾವು ಸಾಲ ವಸೂಲಾತಿ ಮಾಡುವುದಿಲ್ಲ. ಅಷ್ಟ ರಲ್ಲಿ ರೈತರು ತಾವು ಪಡೆದ ಸಾಲವನ್ನು ಬ್ಯಾಂಕ್‍ಗಳಿಗೆ ಪಾವತಿಸಬೇಕು. ಇಲ್ಲದಿದ್ದರೆ, ಜೂನ್ ತಿಂಗಳಿನಿಂದ ಕಡ್ಡಾಯವಾಗಿ ರೈತರು ಸಾಲ ಮತ್ತು ಬಡ್ಡಿ ಕಟ್ಟಲೇಬೇಕು. ಈಗಾಗಲೇ 2146 ಕೋಟಿ ಸಾಲ ವಸೂಲಿ ಮಾಡಿ ದ್ದೇವೆ. ಉಳಿದ ಬಾಕಿಯನ್ನು ವಸೂಲಿ ಮಾಡುವ ಕಾರ್ಯ ಮುಂದುವರೆಯಲಿದೆ ಎಂದರು.

ದಲಿತ ಸಮುದಾಯಕ್ಕೂ ಹೆಚ್ಚಿನ ಯೋಜನೆಗಳನ್ನು ನೀಡಿದ್ದೇವೆ. ಅವರಿಗೂ ಸಾಲ ಸೌಲಭ್ಯ ನೀಡುತ್ತೇವೆ. ಇನ್ನು ಸ್ತ್ರೀ ಶಕ್ತಿ ಗುಂಪುಗಳಿಗೆ ಕಾಯಕ ಯೋಜನೆಯಡಿ ಅನು ದಾನ ನೀಡಿದ್ದು, ಕೋವಿಡ್ ಸಂದರ್ಭದಲ್ಲಿ ಅವರು ನೆರವಾಗಿ ದ್ದಾರೆ. ಮಾಸ್ಕ್, ಸ್ಯಾನಿಟೈಸರ್ ತಯಾರಿಸಿ, ನೀಡುತ್ತಿದ್ದಾರೆ. ಹೀಗಾಗಿ ಅವರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಿ ದ್ದೇವೆ. ಇನ್ನು ಎಪಿಎಂಸಿ ಕಾಯ್ದೆಗೆ ಪ್ರತಿಪಕ್ಷ ಕಾಂಗ್ರೆಸ್ ವಿರೋಧ ಮಾಡುತ್ತಿರುವುದು ಏತಕ್ಕೆ ಎಂದು ತಿಳಿದಿಲ್ಲ. ಕಾಯ್ದೆ ಬರುವುದಕ್ಕೂ ಮುನ್ನವೆ 68 ಸಂಸ್ಥೆಗಳು ರೈತರಿಂದ ನೇರವಾಗಿ ಕೃಷಿ ಉತ್ಪನ್ನ ಖರೀದಿ ಮಾಡುತ್ತಿವೆ. ಈಗ ಮತ್ತಷ್ಟು ಖಾಸಗಿಯವರಿಗೆ ಅವಕಾಶ ಸಿಗಲಿದೆ. ಸರ್ಕಾರದ ನಿರ್ಧಾರದಿಂದ ರೈತರು ತಮ್ಮ ಬೆಳೆಯನ್ನು ನೇರವಾಗಿ ಮಾರಾಟ ಮಾಡಲು ಅವಕಾಶವಿದೆ. ಅವರು ಎಲ್ಲಿ ಬೇಕಾ ದರೂ ತಮ್ಮ ಬೆಳೆ ಮಾರಾಟ ಮಾಡಬಹುದು. ಕಾಯ್ದೆಯು ಎಲ್ಲಿಯೂ ವಿರೋಧವಾಗಿಲ್ಲ ಎಂದರು.

ರೈತರಿಂದ ಸಾಲ ವಸೂಲಾತಿಗೆ ಮುಂದಾಗಿರುವ ಸರ್ಕಾ ರದ ನಿಲುವಿಗೆ ಟೀಕೆಗಳು ಬಂದಿವೆ. ಕೊರೊನಾ ಸಂಕಷ್ಟ ದಲ್ಲಿ ರೈತರು ಸಿಲುಕಿದ್ದಾರೆ. ಅವರ ಬೆಳೆಗೆ ಬೆಲೆ ಸಿಕ್ಕಿಲ್ಲ. ಮತ್ತೆ ಕೆಲವೆಡೆ ಮಾರಾಟ ಮಾಡಲು ಸಾಧ್ಯವಾಗಿಲ್ಲ. ಇಂತಹ ಸಂದರ್ಭದಲ್ಲಿ ರೈತರಿಂದ ವಸೂಲಾತಿಗೆ ನಿಂತಿ ರುವುದು ಎಷ್ಟರ ಮಟ್ಟಿಗೆ ಸರಿ ಎಂದು ಕೇಳಿದ್ದಾರೆ.

Translate »