ಬನ್ನಿ ಮತ್ತೆ ದುಡಿಯೋಣ, ಮತ್ತೆ ದೇಶ ಕಟ್ಟೋಣ
ಸಿನಿಮಾ

ಬನ್ನಿ ಮತ್ತೆ ದುಡಿಯೋಣ, ಮತ್ತೆ ದೇಶ ಕಟ್ಟೋಣ

May 22, 2020

ಕೊರೊನಾ ಲಾಕ್‍ಡೌನ್ ಕಾರಣದಿಂದ ಕನ್ನಡ ಚಿತ್ರರಂಗ ಬಹುತೇಕ ಸ್ಥಗಿತವಾಗಿದೆ. ಇದರಿಂದ ಕಲಾವಿದರು ಸೇರಿದಂತೆ ಅನೇಕ ತಂತ್ರಜ್ಞರು ಕೆಲಸವಿಲ್ಲದೆ ಕೂತಿz್ದÁರೆ. ಇಂಥಾ ಸಂದರ್ಭದಲ್ಲಿ ನಟ, ನಿರೂಪಕ ಸೃಜನ್ ಲೋಕೇಶ್ ಹೊಸದೊಂದು ಪ್ರಯತ್ನ ಮಾಡಿದ್ದಾರೆ ಆತ್ಮ ನಿರ್ಭರ ಭಾರತಕ್ಕೆ ಕೈಜೋಡಿಸುವ ಮೂಲಕ ತಮ್ಮ ತಂತ್ರಜ್ಞರಿಗೆ ನೆರವಾಗಿz್ದÁರೆ. ಅದೇನೆಂದರೆ ಸೃಜನ್ ಲೋಕೇಶ್ ತಮ್ಮ ಮನೆಯಲ್ಲಿಯೇ ಒಂದು ಕ್ರಿಯೇಟಿವ್ ವಿಡಿಯೋ ಮಾಡಿz್ದÁರೆ. 20ಕ್ಕೂ ಹೆಚ್ಚು ಛಾಯಾಗ್ರಾಹಕರನ್ನು ಬಳಸಿಕೊಂಡು ಈ ವಿಡಿಯೋ ಮಾಡಿದ್ದು, ಕ್ಯಾಮೆರಾ ವಿಭಾಗದವರಿಗೆ ಕೆಲಸ ಸೃಷ್ಟಿಸಬೇಕೆಂಬ ಉz್ದÉೀಶದಿಂದಲೇ ಈ ವಿಡಿಯೋ ತಯಾರಿಸಿz್ದÁರೆ. 20 ಶಾಟ್‍ಗಳ ಮೂಲಕ ಸೃಜನ್ ಸಮಾಜಕ್ಕೆ ಒಂದು ಮಹತ್ವದ ಸಂದೇಶವನ್ನು ನೀಡಿz್ದÁರೆ. ಈ ಮೂಲಕ ಸೃಜನ್ ಲೋಕೇಶ್ ಕ್ಯಾಮೆರಾ ಮ್ಯಾನ್‍ಗಳಿಗೆ ಸಂಭಾವನೆ ಕೂಡ ನೀಡಿz್ದÁರೆ. ಸೃಜನ್ ಲೋಕೇಶ್ ತಮ್ಮ ಇನ್ಸ್ಟಾಗ್ರಾಮï, ಫೇಸ್‍ಬುಕ್‍ನಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಂಡಿz್ದÁರೆ. ಆ ವಿಡಿಯೋಗೆ ಬನ್ನಿ ಮತ್ತೆ ದುಡಿಯೋಣ, ನಮ್ಮ ದೇಶವನ್ನು ಮತ್ತೆ ಕಟ್ಟೋಣ ಎಂಬ ಶೀರ್ಷಿಕೆ ಸಹ ಕೊಟ್ಟಿz್ದÁರೆ. ಜೊತೆಗೆ ಬಿ ಇಂಡಿಯನ್ ಬೈ ಇಂಡಿಯನ್ ಎಂಬ ಹ್ಯಾಶ್‍ಟ್ಯಾಗ್‍ನ್ನು ಸಹ ಹಾಕಿz್ದÁರೆ.

ಎಲ್ಲರಿಗೂ ನಮಸ್ಕಾರ, ಅಂದಿನಿಂದ ಇಂದಿನವರೆಗೆ ಎಂತಹ ಯುದ್ಧನೇ ಆಗಿರಲಿ, ಎಂತಹ ಸಂಕಷ್ಟವೇ ಆಗಿರಲಿ. ಈಗಿನ ಮಹಾಮಾರಿ ಕೊರೊನಾವೇ ಆಗಿರಲಿ ಸಮಸ್ಯೆಗೆ ಹೆದರಿ ಮುಂದಿಟ್ಟಿದ್ದ ಹೆಜ್ಜೆಯನ್ನು ಹಿಂದಿಟ್ಟ ಇತಿಹಾಸ ನಮ್ಮ ಭಾರತದಲ್ಲಿ ಇಲ್ಲ. ಆರೋಗ್ಯವೇ ನಮ್ಮ ಭಾಗ್ಯ, ಇಷ್ಟುದಿನ ದೇಹದ ಆರೋಗ್ಯಕ್ಕಾಗಿ ಹೋರಾಡುದ್ವಿ, ಇನ್ನುಮುಂದೆ ದೇಶದ ಸಂಪತ್ತಿಗೋಸ್ಕರ ಹೋರಾಡೋಣ. ಹೂ, ಹಣ್ಣು, ತರಕಾರಿನೇ ಆಗಿರಲಿ, ಪ್ರತಿದಿನ ಬಳಸುವ ವಸ್ತುಗಳಾಗಿರಲಿ, ಲೋಕಲ್‍ನಿಂದ ಗ್ಲೋಬಲ್‍ವರೆಗೂ ಬೆಳೆಯೋಣ. ಆತ್ಮನಿರ್ಭರ ಭಾರತಕ್ಕೆ ನಾವೆ¯್ಲÁ ಕೈ ಜೋಡಿಸೋಣ ಎಂಬ ಸಂದೇಶ ಸಾರಿದ್ದಾರೆ.
ಸುಮಾರು ನಾಲ್ಕು ನಿಮಿಷಗಳವರೆಗೂ ಸೃಜನ್ ಮಾತನಾಡಿರುವ ಈ ವಿಡಿಯೋದಲ್ಲಿ ಅವರು ತುಂಬಾ ಶಾಟ್‍ಗಳನ್ನು ತೆಗೆದುಕೊಂಡಿz್ದÁರೆ. ಅಲ್ಲದೆ ಯಾಕೆ ಇಷ್ಟೊಂದು ಶಾಟ್ ತೆಗೆದುಕೊಂಡೆ ಎಂಬುದನ್ನು ಅವರೇ ವಿವರಿಸಿz್ದÁರೆ. ಇಷ್ಟು ಮಾತನ್ನು ಒಂದೇ ಶಾಟಿನಲ್ಲಿ ಹೇಳಬಹುದಿತ್ತು. ಆದ್ರೆ ಇಷ್ಟು ಶಾಟ್‍ಕಟ್ ಯಾಕೆಂದು ಥಿಂಕ್ ಮಾಡುತ್ತಿದ್ದೀರ. ಈ ಶಾಟ್‍ಕಟ್‍ಗಳ ಹಿಂದೆಯೂ ಒಂದು ಕಥೆಯಿದೆ. ಲಾಕ್‍ಡೌನ್ ಸಂದರ್ಭದಲ್ಲಿ ನಮ್ಮ ಕಲಾವಿದರು, ದಿನಗೂಲಿ ಕಾರ್ಮಿಕರು, ಟೆಕ್ನೀಷಿಯನ್ಸ್ ಸೇರಿದಂತೆ ಅನೇಕರಿಗೆ ತುಂಬಾನೇ ಕಷ್ಟವಾಗಿತ್ತು. ಇದಕ್ಕೆ ಸ್ಪಂದಿಸಿ ಹಲವಾರು ಜನರು ಸಹಾಯ ಮಾಡಿz್ದÁರೆ. ಅವರಿಗೆಲ್ಲ ಧನ್ಯವಾದ, ಆದರೆ ನಮ್ಮ ಲೋಕೇಶ್ ಪೆÇ್ರಡP್ಷÀನ್‍ನಲ್ಲಿ ಕೆಲಸ ಮಾಡುತ್ತಿರುವ ಛಾಯಾ ಗ್ರಾಹಕರುಗಳು 10 ವರ್ಷದಿಂದ ನನ್ನ ಜೊತೆಗೇ ಇದ್ದವರು. ಇವರೆಲ್ಲರಿಗೂ ನಾನು ಏನಾದರೂ ಸಹಾಯ ಮಾಡಬೇಕೆಂದು ಕೊಂಡೆ. ಆದರೆ ಅವರು, ನಮಗೆ ಸಹಾಯ ಮಾಡಬೇಕು ಎನಿಸಿದರೆ ದಯವಿಟ್ಟು ಏನಾದರೂ ಕೆಲಸ ಕೊಡಿ ಎಂದು ಕೇಳಿಕೊಂಡರು. ಹಾಗಾಗಿ ಈ ವಿಡಿಯೋದಲ್ಲಿರುವ 20 ಶಾಟ್‍ಗಳನ್ನು ನನ್ನ 20 ಜನ ಕ್ಯಾಮೆರಾಮ್ಯಾನ್‍ಗಳು ಕಂಪೆÇೀಸ್ ಮಾಡಿ ಅವರ ಸಂಭಾವನೆಯನ್ನು ಅವರೇ ದುಡಿದಿz್ದÁರೆ. ಈ ಲಾಕ್‍ಡೌನ್ ಸಮಯದಲ್ಲಿ ನನ್ನಕೈಲಿ ಅವರಿಗೆ ಈ ಒಂದು ಕೆಲಸ ಕೊಡಲು ಮಾತ್ರ ಸಾಧ್ಯವಾಯಿತು ಎಂದು ತಿಳಿಸಿz್ದÁರೆ. ಜೊತೆಗೆ ಪ್ರತಿಯೊಬ್ಬ ಕ್ಯಾಮೆರಾಮ್ಯಾನ್ ಹೆಸರುಗಳನ್ನು ಸಹ ಈ ವಿಡಿಯೋದಲ್ಲಿ ನಮೂದಿಸಿz್ದÁರೆ. ಈ ಜೀವನ ಭಗವಂತ ಹೇಳಿದ ಆ್ಯP್ಷÀನ್‍ನಿಂದ ಶುರುವಾಗುತ್ತೆ, ಅವನು ಹೇಳಿದ ಕಟ್‍ನಿಂದ ಮುಕ್ತಾಯವಾಗುತ್ತೆ. ಈ ಆ್ಯP್ಷÀನ್-ಕಟ್ ನಡುವಿನ ಜೀವನದಲ್ಲಿ ನಾವು ಸಾಧ್ಯವಾದಷ್ಟು ಬೇರೆಯವರಿಗೆ ಸಹಾಯ ಮಾಡೋಣ. ಬನ್ನಿ ಮತ್ತೆ ನಾವೆಲ್ಲರೂ ಸೇರಿ ದುಡಿಯೋಣ, ನಮ್ಮ ದೇಶವನ್ನು ಮತ್ತೆ ಕಟ್ಟೋಣ ಎಂಬ ಸಂದೇಶವನ್ನು ಸೃಜನ್ ಈ ಮೂಲಕ ಹೇಳಿz್ದÁರೆ.

Translate »