9 ದಿನಗಳ ಚಿತ್ರೀಕರಣ ಮುಕ್ತಾಯ
ಸಿನಿಮಾ

9 ದಿನಗಳ ಚಿತ್ರೀಕರಣ ಮುಕ್ತಾಯ

May 22, 2020

ಎಂ.ವಿ.ಫಿಲಂಸ್ ಲಾಂಛನದಲ್ಲಿ ಡಾ.ಎಂ.ವೆಂಕಟಸ್ವಾಮಿ, ಹರ್ಷ ವರುಣ್‍ಪೈ ಹಾಗೂ ಸಿ.ಎಂ. ಮುರುಗ ಸೇರಿ ನಿರ್ಮಿಸುತ್ತಿರುವ, ಎಸ್.ಎಸ್. ವಿಭಾ ಅವರ ನಿರ್ದೇಶನದ ವಿಭಿನ್ನ ಕಥಾಹಂದರ ಒಳಗೊಂಡ ಚಿತ್ರ 9 ದಿನಗಳು. ಈ ಚಿತ್ರದ ಹಾಡು ಹಾಗೂ ಮಾತಿನ ಭಾಗದ ಚಿತ್ರೀಕರಣವನ್ನು ಬೆಂಗಳೂರು ಸುತ್ತಮುತ್ತ ನಡೆಸಲಾಗಿದೆ. ಸದ್ಯದಲ್ಲೇ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಸಹ ಆರಂಭವಾಗಲಿದೆ.

ಈ ಚಿತ್ರಕ್ಕೆ ಕಾರ್ತಿಕ್ ಜೆ.ಕಿರಣ್ ಅವರ ಛಾಯಾಗ್ರಹಣ, ಎಂ.ಸಂಜೀವ್‍ರಾವ್ ಅವರ ಸಂಗೀತ ಸಂಯೋಜನೆ, ಅಲ್ಟಿಮೇಟ್ ಶಿವು ಅವರ ಸಾಹಸ ಸಂಯೋಜನೆ, ಹರಿಕೃಷ್ಣ ಅವರ ನೃತ್ಯ, ನಾಗರಾಜ್ ಅವರ ಕಲೆ, ದಾಡಿ ರಮೇಶ್ ಅವರ ನಿರ್ಮಾಣ ನಿರ್ವಹಣೆಯಿದ್ದು, ಚಿತ್ರದ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನದ ಹೊಣೆಯನ್ನು ಎಸ್.ಎಸ್. ವಿಭಾ ಹೊತ್ತಿದ್ದಾರೆ.

9 ದಿನಗಳು ಚಿತ್ರದ ಪ್ರಮುಖ ತಾರಾಗಣದಲ್ಲಿ ದೈವಿಕ್, ಮಾನಸ, ಅರ್ಜುನ್‍ವೀರ್, ಎಂ. ವೆಂಕಟಸ್ವಾಮಿ, ಅರ್ಚನಾ, ಕಬಾಡ ಸಂತೋಷ್, ಗಿರೀಶ್, ಸಂದೀಪ್, ಸಂಜು, ಮೋಹನ್ ಮುಂತಾದವರು ನಟಿಸಿದ್ದಾರೆ.

Translate »