ಓಟಿಟಿ ನಿರ್ಮಾಪಕರಿಗೆ ಅನುಕೂಲಕರವಾದೀತೇ?
ಸಿನಿಮಾ

ಓಟಿಟಿ ನಿರ್ಮಾಪಕರಿಗೆ ಅನುಕೂಲಕರವಾದೀತೇ?

May 22, 2020

ಮಲ್ಟಿಪ್ಲೆಕ್ಸ್‍ಗಳಲ್ಲಿ ಫ್ಯಾಮಿಲಿ ಜೊತೆ ಸಿನಿಮಾ ನೋಡಲೆಂದು ಹೋದರೆ ಮುಗೀತು, ಸಾವಿರಾರು ರೂ. ಕರಗಿಹೋಗುತ್ತದೆ. ಪ್ರವೇಶ ದರ ಕಡಿಮೆ ಮಾಡಲು ಸರ್ಕಾರ ನಿಯಮಾವಳಿ ರೂಪಿಸಿದರೂ, ಅದು ಜಾರಿಗೆ ಬಂದಿಲ್ಲ. ಅಲ್ಲದೆ ಅಲ್ಲಿ ಕನ್ನಡ ಚಿತ್ರಗಳಿಗೆ ಪ್ರೈಂಟೈಮ್ ಕೊಡುವುದಿಲ್ಲ. ಅಲ್ಲದೆ ಸಣ್ಣ ಪುಟ್ಟ ಕನ್ನಡ ಚಿತ್ರಗಳಿಗೆ ಮಲ್ಟಿಪ್ಲೆಕ್ಸ್‍ಗಳಲ್ಲಿ ಅವಕಾಶವೇ ಸಿಗುವುದಿಲ್ಲ ಎಂದು ಚಿತ್ರರಂಗದ ಅನೇಕ ನಿರ್ಮಾಪಕರು ಆರೋಪ ಮಾಡುತ್ತಲೇ ಬಂದಿದ್ದಾರೆ. ಆದರೆ ಈಗ ಬಂದಿರುವ ಕೊರೊನಾ ಈ ಎಲ್ಲ ಚಿತ್ರಣವನ್ನು ಬದಲಿಸುವ ಸೂಚನೆ ನೀಡಿದೆ. ಇತ್ತೀಚೆಗಷ್ಟೇ ನಟ ಪುನೀತ್ ರಾಜ್‍ಕುಮಾರ್ ಕೂಡ ಈ ಬಗ್ಗೆ ಆಕ್ಷೇಪಿಸಿದ್ದರು. ಮಲ್ಟಿಪ್ಲೆಕ್ಸ್‍ಗಳಲ್ಲಿ ಕನ್ನಡ ಸಿನಿಮಾಗಳ ಬಗ್ಗೆ ಅಸಡ್ಡೆ ತೋರಲಾಗುತ್ತಿದೆ. ಪಿವಿಆರ್‍ನಲ್ಲಿ ಕನ್ನಡ ಸಿನಿಮಾಗಳಿಗೆ ಮೊದಲ ಆದ್ಯತೆ ನೀಡಬೇಕು ಎಂದು ಹೇಳಿದ್ದರು, ಅಲ್ಲದೆ ಚಿತ್ರಮಂದಿರಗಳಲ್ಲಿ ಕುಳಿತು ಸಿನಿಮಾ ನೋಡುವುದೇ ತಮಗೆ ಇಷ್ಟ ಎಂದು ಹೇಳುವ ಮೂಲಕ ಮಲ್ಟಿಪ್ಲೆಕ್ಸ್‍ಗಳ ಧೋರಣೆಯನ್ನು ನೇರವಾಗಿಯೇ ಖಂಡಿ ಸಿದ್ದರು. ಕೊರೊನಾ ವೈರಸ್ ಕಾರಣದಿಂದ ಇದೀಗ ಪಿವಿಆರ್, ಐನಾಕ್ಸ್ ಸೇರಿದಂತೆ ಎಲ್ಲಾ ಚಿತ್ರಮಂದಿರಗಳು ಸ್ಥಗಿತಗೊಂಡಿವೆ. ಹಾಗೆಯೇ ತಮ್ಮ ಸಿನಿಮಾ ರೆಡಿ ಮಾಡಿಟ್ಟು ಕೊಂಡ ನಿರ್ಮಾಪಕರು ಕೂಡ ಚಿತ್ರಗಳನ್ನು ಬಿಡುಗಡೆ ಮಾಡಲಾಗದೆ, ಮಾಡಿಕೊಂಡ ಸಾಲದ ಮೇಲಿನ ಬಡ್ಡಿಯನ್ನು ತೆರಲಾಗದೆ, ಆರ್ಥಿಕ ನಷ್ಟವನ್ನು ಅನುಭವಿಸುತ್ತಿದ್ದಾರೆ. ಈ ಸಂಕಷ್ಟದಲ್ಲಿ ಅವರಿಗೆ ಓಟಿಟಿ (ಓವರ್ ದಿ ಟಾಪ್) ಪ್ಲಾಟ್‍ಫಾರ್ಮ್ ಒಂದು ವರದಾನವಾಗಿ ಸಿಕ್ಕಿದೆ.

ಈ ಹಿಂದೆ ಯಾವುದೇ ಒಂದು ಹೊಸ ಚಿತ್ರ ಚಿತ್ರಮಂದಿರದಲ್ಲಿ ಬಿಡುಗಡೆ ಯಾಗಿ 60 ದಿನಗಳ ನಂತರವಷ್ಟೇ ಒಟಿಟಿಯಲ್ಲಿ ಪ್ರಸಾರ ವಾಗುತ್ತಿತ್ತು. ಆದರೆ ಈಗ ಎದುರಾಗಿರುವ ಆರ್ಥಿಕ ಹೊರೆಯನ್ನು ತಗ್ಗಿಸಲು ತಮ್ಮ ಚಿತ್ರಗಳನ್ನು ನೇರವಾಗಿ ಒಟಿಟಿಯಲ್ಲಿಯೇ ಬಿಡುಗಡೆ ಮಾಡಲು ಹಲವಾರು ನಿರ್ಮಾಪಕರುಗಳು ಮುಂದಾಗಿದ್ದಾರೆ. ಇದರಿಂದ ನಿರ್ಮಾಪಕರಿಗೆ ದೊಡ್ಡ ಮಟ್ಟದ ಲಾಭವಾಗದೆ ಇದ್ದರೂ ಈಗಿನ ಸಂಕಷ್ಟ ತಗ್ಗಿಸಲು ನೆರವಾಗುತ್ತದೆ. ಆದರೆ ನಿರ್ಮಾಪಕರ ಈ ನಡೆ ಪ್ರದರ್ಶಕರಿಗೆ ನುಂಗಲಾಗದ ತುತ್ತಾಗಿದೆ. ಒಟಿಟಿಯಲ್ಲಿ ಚಿತ್ರಗಳನ್ನು ಬಿಡುಗಡೆ ಮಾಡುವುದು ಸರಿಯಲ್ಲ. ಸಿನಿಮಾ ಮತ್ತು ಮಲ್ಟಿಪ್ಲೆಕ್ಸ್‍ಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಆದರೆ ನೀವು ಈ ಸಂದರ್ಭದಲ್ಲಿ ಚಿತ್ರಗಳನ್ನು ಒಟಿಟಿಯಲ್ಲಿ ಬಿಡುಗಡೆ ಮಾಡುತ್ತಿರುವುದು ಬೇಸರ ತಂದಿದೆ. ಚಿತ್ರಮಂದಿರ ಗಳಲ್ಲಿಯೇ ಚಿತ್ರಪ್ರದರ್ಶನ ಮಾಡಿ ಎಂದು ನಿರ್ಮಾಪಕರನ್ನು ಕೇಳಿಕೊಳ್ಳುತ್ತಿವೆ. ಈ ಸಂಬಂಧ ಐನಾಕ್ಸ್ ಸಂಸ್ಥೆ ಬರೆದಿರುವ ಸುದೀರ್ಘ ಪತ್ರವು ಇದೀಗ ವೈರಲ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದ್ದು, ಟಿಕೆಟ್, ಪಾನೀಯ ಮತ್ತು ತಿನಿಸಿಗೆ ದುಬಾರಿ ಹಣ ಕೀಳುತ್ತಿದ್ದ ಅವರು ಈಗ ಅಂಗಲಾಚುತ್ತಿz್ದÁರೆ. ಇಷ್ಟು ದಿನ ಮಾಡಿದ ಸುಲಿಗೆಗೆ ತಕ್ಕ ಪಾಠ ಸಿಕ್ಕಿದೆ ಎಂಬ ಅಭಿಪ್ರಾಯವನ್ನು ಜನರು ವ್ಯಕ್ತಪಡಿಸಿz್ದÁರೆ.

ಬರುವ ಜೂನ್ ತಿಂಗಳಲ್ಲಿ ವಿವಿಧ ಭಾಷೆಗಳ ಒಟ್ಟು ಏಳು ಸಿನಿಮಾಗಳು ಒಟಿಟಿ ಪ್ಲಾಟ್ ಫಾರ್ಮ್‍ನಲ್ಲಿ ನೇರವಾಗಿ ಬಿಡುಗಡೆಯಾಗುತ್ತಿವೆ. ಅದರಲ್ಲಿ ಪುನೀತ್‍ರಾಜ್‍ಕುಮಾರ್ ಅವರ ಪಿಆರ್‍ಕೆ ಪೆÇ್ರಡP್ಷÀನ್ಸ್‍ನ ಎರಡು ಚಿತ್ರಗಳು ಕೂಡ ಸೇರಿವೆ. ಕನ್ನಡದಲ್ಲಿ ಇದೇ ಮೊದಲ ಬಾರಿಗೆ ನಿರ್ಮಾಣ ಸಂಸ್ಥೆಯೊಂದು ತಮ್ಮ ಚಿತ್ರವನ್ನು ನೇರವಾಗಿ ಒಟಿಟಿಯಲ್ಲಿ ಬಿಡುಗಡೆ ಮಾಡುವುದಾಗಿ ಘೋಷಿಸಿಕೊಂಡಿದೆ. ಈ ಹಿಂದೆ ಥಿಯೇಟರ್ ಸಿಗದೆ ಭಿನ್ನ ಎಂಬ ಚಿತ್ರತಂಡವೂ ಸಹ ಇದೇ ನಿಲುವನ್ನು ಅನುಕರಿಸಿತ್ತು. ಇದಲ್ಲದೆ ಸೂಪರ್‍ಸ್ಟಾರ್ ಅಮಿತಾಬ್ ಬಚ್ಚನ್ ಮತ್ತು ಆಯುಷ್ಮಾನ್ ಖುರಾನಾ ಅಭಿನಯದ ಗುಲಾಬೊ ಸಿತಾಬೋ, ವಿದ್ಯಾಬಾಲನ್ ನಾಯಕಿ ಯಾಗಿ ನಟಿಸಿರುವ ಶಕುಂತಲಾ ದೇವಿ, ಹಾಗೆಯೇ ತಮಿಳಿವ ಸೂರ್ಯ ಮತ್ತು ಆರ್.ಜ್ಯೋತಿಕಾ ನಟನೆಯ ಪೆÇನ್‍ಮಗಳ್ ವಂದಾಳ್ ಚಿತ್ರವನ್ನೂ ಸಹ ಒಟಿಟಿ ಯಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಈಗಾಗಲೇ ಜ್ಯೋತಿಕಾ ಅವರ ಸಿನಿಮಾಗಳನ್ನು ಬಹಿಷ್ಕಾರ ಮಾಡುವು ದಾಗಿ ತಮಿಳುನಾಡಿನ ಚಿತ್ರಮಂದಿರಗಳ ಮಾಲೀಕರು ಎಚ್ಚರಿಕೆ ನೀಡಿದ್ದಾರೆ. ಆದರೂ ಚಿತ್ರತಂಡ ಗಳು ಬದಲಾಗು ತ್ತಿರುವ ತಂತ್ರe್ಞÁನಕ್ಕೆ ಅನುಗುಣವಾಗಿ ಬದಲಾಗುವ ದಿಟ್ಟತನ ತೋರಿz್ದÁರೆ. ಅಲ್ಲದೆ ಯಾವುದೇ ಒಂದು ನಿರ್ಮಾಣ ಸಂಸ್ಥೆ ತನ್ನ ಎರಡು ಚಲನಚಿತ್ರಗಳನ್ನು ಒಟಿಟಿಯಲ್ಲಿ ನೇರವಾಗಿ ಬಿಡುಗಡೆ ಮಾಡುವ ಧೈರ್ಯ ಮಾಡಿಲ್ಲ ಎನ್ನುವುದು ಗಮನಿಸಬೇಕಾದ ಸಂಗತಿ. ಈ ರೀತಿ ಸ್ಟಾರ್ ನಟರೊಬ್ಬರು ಒಟಿಟಿ ವೇದಿಕೆಯನ್ನು ಅನುಸರಿಸಿದ್ದು, ಇತರೆ ನಿರ್ಮಾಪಕರಿಗೆ ಸ್ಫೂರ್ತಿ ನೀಡಿದೆ.

Translate »