ಶಿವಣ್ಣಗೆ ಹೊಸ ಮ್ಯಾನರಿಸಂ ನೀಡಿದ ಚಿತ್ರ `ಓಂ’
ಸಿನಿಮಾ

ಶಿವಣ್ಣಗೆ ಹೊಸ ಮ್ಯಾನರಿಸಂ ನೀಡಿದ ಚಿತ್ರ `ಓಂ’

May 22, 2020

ಕನ್ನಡ ಚಿತ್ರರಂಗದಲ್ಲಿ ಹೊಸ ಟ್ರೆಂಡನ್ನೇ ಸೃಷ್ಟಿ ಮಾಡಿದ ಚಿತ್ರ ಓಂ. ಉಪೇಂದ್ರ ಹಾಗೂ ಶಿವಣ್ಣ ಕಾಂಬಿನೇಶನ್‍ನಲ್ಲಿ ನಿರ್ಮಾಣವಾಗಿದ್ದ ಈ ಚಿತ್ರ ಬಿಡುಗಡೆಯಾಗಿ ಮೇ 19ಕ್ಕೆ 25 ವರ್ಷ ತುಂಬಿತು. ಹಲವಾರು ಹೊಸ ದಾಖಲೆಗೆ ಕಾರಣ ವಾಗಿದ್ದ ಈ ಚಿತ್ರದ ಆರಂಭದ ವೇಳೆ ಒಂದಷ್ಟು ಸ್ವಾರಸ್ಯಕರ ಘಟನೆಗಳೂ ನಡೆದಿವೆ, ಅವುಗಳಲ್ಲಿ ಒಂದು ಚಿತ್ರದ ನಾಯಕನ ಆಯ್ಕೆ. ಶಿವರಾಜ್‍ಕುಮಾರ್ ಅವರ ವೃತ್ತಿ ಬದುಕಿಗೆ ದೊಡ್ಡ ತಿರುವನ್ನು ತಂದುಕೊಟ್ಟ ಓಂ ಚಿತ್ರದ ನಾಯಕ ಸತ್ಯನ ಪಾತ್ರಕ್ಕೆ ಮೊದಲ ಆಯ್ಕೆ ಶಿವಣ್ಣ ಆಗಿರಲಿಲ್ಲ. ನಿರ್ದೇಶಕ ಉಪೇಂದ್ರ ಅವರು ಮೊದಲು ಚಿತ್ರದ ನಾಯಕನನ್ನಾಗಿ ಕುಮಾರ್ ಗೋವಿಂದ್ ಅವರನ್ನು ಆಯ್ಕೆ ಮಾಡಿಕೊಂಡಿ ದ್ದರು. ಆದರೆ ಸಿನಿಮಾ ಶುರುವಾಗುವ ಕೆಲವೇ ದಿನಗಳ ಮುಂಚೆ ನಾಯಕನ ಆಯ್ಕೆ ಬದಲಾಯಿತು. ಉಪೇಂದ್ರ-ಕುಮಾರ್ ಗೋವಿಂದ್ ಅವರ ನಡುವೆ ಎದ್ದ ಸಣ್ಣ ಮನಸ್ತಾಪ ಈ ಬದಲಾವಣೆಗೆ ಕಾರಣವಾಯಿತು.

ಉಪೇಂದ್ರ ಅವರು ನಿರ್ದೇಶಿಸಿದ್ದ, ಕುಮಾರ್ ಗೋವಿಂದ್ ನಾಯಕರಾಗಿ ನಟಿಸಿ, ನಿರ್ಮಿಸಿದ ಚಿತ್ರ ಶ್.. ಆಗಷ್ಟೆ ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನಗೊಂಡು ಸೂಪರ್‍ಹಿಟ್ ಆಗಿತ್ತು. ಹಾಗಾಗಿ ಚಿತ್ರದ ನಿರ್ದೇಶಕ ಉಪೇಂದ್ರ, ಕುಮಾರ್ ಗೋವಿಂದ್ ಅವರನ್ನೇ ಮತ್ತೆ ನಾಯಕರನ್ನಾಗಿ ಆಯ್ಕೆ ಮಾಡಿಕೊಂಡಿದ್ದರು. ಆದರೆ ಸಿನಿಮಾ ಸೆಟ್ಟೇರಲು ಕೆಲವೇ ದಿನಗಳಿದ್ದಾಗ, ಉಪೇಂದ್ರ ಮತ್ತು ಕುಮಾರ್ ಗೋವಿಂದ್ ಅವರ ನಡುವೆ ಸಣ್ಣ ತಕರಾರು ಏರ್ಪಟ್ಟಿತು. ಆಗ ಉಪೇಂದ್ರ ಅವರಲ್ಲಿದ್ದ ಪ್ರತಿಭೆಯನ್ನು ಮೊದಲಿನಿಂದಲೂ ಗಮನಿಸಿದ್ದ ಹೊನ್ನವಳ್ಳಿ ಕೃಷ್ಣ ಮತ್ತು ಭಾಯಾಗ್ರಾಹಕ ಗೌರಿಶಂಕರ್, ಅವರನ್ನು ರಾಜ್‍ಕುಮಾರ್ ಅವರ ಬಳಿ ಕರೆದೊಯ್ದರು. ಆಗ ರಾಜ್‍ಕುಮಾರ್ ಹಾಗೂ ವರದಣ್ಣ ಇಬ್ಬರೂ ಕತೆ ಕೇಳಿ ತಮ್ಮ ಬ್ಯಾನರ್‍ನಲ್ಲೇ ಆ ಚಿತ್ರ ನಿರ್ಮಿಸಲು ಒಪ್ಪಿದರು. ಅಲ್ಲಿ ಶಿವಣ್ಣ ನಾಯಕನಾದರು. ಹೀಗೆ ಕುಮಾರ್ ಗೋವಿಂದ್ ಅವರು ಮಾಡಬೇಕಾಗಿದ್ದ ಪಾತ್ರ ಶಿವರಾಜ್‍ಕುಮಾರ್ ಅವರ ಪಾಲಾಯಿತು. ಆಮೇಲೆ ನಡೆದಿz್ದɯ್ಲÁ ಇತಿಹಾಸ. ಶಿವರಾಜ್‍ಕುಮಾರ್ ಅವರು ಸತ್ಯ ಎಂಬ ಯುವಕನ ಪಾತ್ರಕ್ಕೆ ಜೀವ ತುಂಬಿದರು. ಓಂನಿಂದ ಪ್ರಾರಂಭವಾದ ಶಿವಣ್ಣ ಅವರ ರಗಡ್‍ಲುಕ್ ಈಗಲೂ ಅವರನ್ನು ಬಿಟ್ಟು ಹೋಗಿಲ್ಲ. ಶಿವರಾಜ್‍ಕುಮಾರ್ ಅವರಿಗಂತೂ ಆಗ ಆ ಪಾತ್ರ ಹೊಸ ಮ್ಯಾನರಿಸಂಅನ್ನೇ ನೀಡಿಬಿಟ್ಟಿತು.

ಶಿವರಾಜ್‍ಕುಮಾರ್ ಅವರ ಪಾತ್ರಕ್ಕೆ ಹಲವು ಪ್ರಶಸ್ತಿಗಳು ಹುಡುಕುಕಿಕೊಂಡು ಬಂದವು. ಕನ್ನಡ ಚಿತ್ರರಂಗದಲ್ಲಿ ರೌಡಿಸಂ ಹಿನ್ನೆಲೆಯ ಕತೆಗಳು ಜನಪ್ರಿಯವಾಗಲು ಹಾಗೂ ಒಂದು ಕಥೆ ಹೇಳುವ ತಂತ್ರ ಬದಲಾಗಲು ಈ ಚಿತ್ರ ಮುಖ್ಯ ಕಾರಣವಾಯಿತು. ಅಲ್ಲದೆ ಒಂದಷ್ಟು ಹೊಸತನಗಳಿಗೆ ಕೂಡ ನಾಂದಿಯಾಯಿತು.

Translate »